ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 9: ಯಾರಿಗೆ ಯಾವ ಪ್ರಶಸ್ತಿ, ಕಿರೀಟ, ಪುರಸ್ಕಾರ

By Mahesh

ಬೆಂಗಳೂರು, ಮೇ 30: ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ 9 ರ ಅಂತಿಮ ಹಣಾಹಣಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಎದುರು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಲೆಬಾಗಿದೆ. ಆದರೆ, ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಹತ್ತು ಹಲವು ದಾಖಲೆಗಳ ಮೂಲಕ ಸ್ಮರಣೀಯವಾಗಿಸಿದ್ದಾರೆ.[ಐಪಿಎಲ್ ವೈಯಕ್ತಿಕ ದಾಖಲೆಗಳು 2008-2015]

ಐಪಿಎಲ್ 2016ರಲ್ಲಿ ಒಟ್ಟಾರೆ 973ರನ್ ಗಳಿಸಿದ ಕೊಹ್ಲಿ ಈ ಪಂದ್ಯದಲ್ಲಿ 35 ಎಸೆತಗಳಲ್ಲಿ 54ರನ್ ಚೆಚ್ಚಿದರು. ಆದರೆ, ಕೊಹ್ಲಿ ರನ್ ಗಳಿಕೆ ಅವರಿಗೆ ಕಪ್ ಗಳಿಸಲು ನೆರವಾಗಲಿಲ್ಲ. []

ಕೊನೆ ಓವರ್ ಥ್ರಿಲ್ಲರ್ ನಲ್ಲಿ ಆರ್ ಸಿಬಿ ತಂಡ 8 ರನ್ ಗಳಿಂದ ಕಪ್ ಬಿಟ್ಟುಕೊಟ್ಟಿತು. ಮೊದಲ ಬಾರಿಗೆ ಕಪ್ ಎತ್ತಿ ಡೇವಿಡ್ ವಾರ್ನರ್ ಪಡೆ ಮುದ್ದಾಡಿತು. ಸನ್ ರೈಸರ್ಸ್ ಹೈದರಾಬಾದ್ 208/7 ಹಾಗೂ ಆರ್ ಸಿಬಿ 200/7[]

IPL 2016: Full list of award winners and major statistics; Virat Kohli stars

ಐಪಿಎಲ್ ನಲ್ಲಿ 1,000 ರನ್ ಹೊಡೆಯುವ ನಿರೀಕ್ಷೆ ಮೂಡಿಸಿದ್ದ ಕೊಹ್ಲಿಗೆ 27ರನ್ ಕಡಿಮೆಯಾಯಿತು. ಐಪಿಎಲ್ ನಲ್ಲಿ 4 ಶತಕ, 7 ಅರ್ಧಶತಕ ಹೊಡೆದಿದ್ದು ಭರ್ಜರಿ ಸಾಧನೆ. [ಐಪಿಎಲ್ 9 : ಆರ್ ಸಿಬಿ ಮಣಿಸಿ ಕಪ್ ಎತ್ತಿದ ವಾರ್ನರ್ ಪಡೆ]

ಐಪಿಎಲ್ 2016ರಲ್ಲಿ ಪ್ರಶಸ್ತಿ ವಿಜೇತರು ಹಾಗೂ ಇತರೆ ಅಂಕಿ ಅಂಶಗಳು:


* ಚಾಂಪಿಯನ್ಸ್ : ಸನ್ ರೈಸರ್ಸ್ ಹೈದರಾಬಾದ್, ಪ್ರಶಸ್ತಿ ಮೊತ್ತ 15 ಕೋಟಿ ರು.

* ರನ್ನರ್ ಅಪ್ : ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪ್ರಶಸ್ತಿ ಮೊತ್ತ 10 ಕೋಟಿ ರು

* ಕಿತ್ತಳೆ ಟೋಪಿ (ಅತಿ ಹೆಚ್ಚು ರನ್) -973 ರನ್ (16ಇನ್ನಿಂಗ್ಸ್) -ವಿರಾಟ್ ಕೊಹ್ಲಿ (ರಾಯಲ್ ಚಾಲೆಂಜರ್ಸ್ ಬೆಂಗಳೂರು.

* ನೇರಳೆ ಟೋಪಿ (ಅತಿ ಹೆಚ್ಚು ವಿಕೆಟ್) - 23 ವಿಕೆಟ್ಸ್ (17 ಇನ್ನಿಂಗ್ಸ್)-ಭುವನೇಶ್ವರ್ ಕುಮಾರ್ (ಸನ್ ರೈಸರ್ಸ್ ಹೈದರಾಬಾದ್)

* ಉದಯೋನ್ಮುಖ ಆಟಗಾರ : 17 ವಿಕೆಟ್ ಗಳೂ- ಮುಷ್ತಫಿಜುರ್ ರಹಮಾನ್ (ಎಸ್ ಆರ್ ಎಚ್)

IPL 2016: Full list of award winners and major statistics; Virat Kohli stars


* ಫೈನಲ್ ಪಂದ್ಯದ ಪಂದ್ಯಶ್ರೇಷ್ಠ : ಬೆನ್ ಕಟ್ಟಿಂಗ್ (ಎಸ್ ಆರ್ ಎಚ್)

* ಅತಿ ಹೆಚ್ಚು ಸಿಕ್ಸರ್ (ಫೈನಲ್) - 8 - ಕ್ರಿಸ್ ಗೇಲ್ (ಆರ್ ಸಿಬಿ)

* ಅತ್ಯಂತ ಮೌಲ್ಯಯುತ ಆಟಗಾರ - ಕೊಹ್ಲಿ (356.5 ಅಂಕಗಳು)

* ಫೇರ್ ಪ್ಲೇ ಪ್ರಶಸ್ತಿ : ಸನ್ ರೈಸರ್ಸ್ ಹೈದರಾಬಾದ್.

* ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್ : 38- ಕೊಹ್ಲಿ

* ಟೂರ್ನಿಯಲ್ಲಿ ಅತಿ ಹೆಚ್ಚು ಬೌಂಡರಿ : 88- ಡೇವಿಡ್ ವಾರ್ನರ್(ಎಸ್ ಆರ್ ಎಚ್)

* ಒಂದು ಇನ್ನಿಂಗ್ಸ್ ನಲ್ಲಿ ಹೆಚ್ಚು ಸಿಕ್ಸರ್ - 12- ಎಬಿ ಡಿ ವಿಲಿಯರ್ಸ್ (ಆರ್ ಸಿಬಿ ಪರ vs ಗುಜರಾತ್ ಲಯನ್ಸ್)

* ಒಂದು ಇನ್ನಿಂಗ್ಸ್ ನಲ್ಲಿ ಹೆಚ್ಚು ಬೌಂಡರಿ- 15- ಕ್ವಿಂಟಾನ್ ಡಿ ಕಾಕ್ (ಡೆಲ್ಲಿ ಡೆರ್ ಡೆವಿಲ್ಸ್ vs ಆರ್ ಸಿಬಿ)


* ಅತಿ ಹೆಚ್ಚು ಶತಕಗಳು : 4 -ಕೊಹ್ಲಿ

* ಅತಿ ಹೆಚ್ಚು ಅರ್ಧಶತಕ : 9 -ವಾರ್ನರ್


* ತ್ವರಿತಗತಿಯಲ್ಲಿ ಅರ್ಧಶತಕ- 17 ಎಸೆತಗಳಲ್ಲಿ -ಕ್ರಿಸ್ ಮೊರಿಸ್ (ಡೆಲ್ಲಿ ಪರ vs ಗುಜರಾತ್ ಲಯನ್ಸ್) ಹಾಗೂ ಕಿರಾನ್ ಪೊಲ್ಲಾರ್ಡ್ (ಮುಂಬೈ ಇಂಡಿಯನ್ಸ್ ಪರ vs ಕೋಲ್ಕತ್ತಾ ನೈಟ್ ರೈಡರ್ಸ್)

* ತ್ವರಿತಗತಿಯಲ್ಲಿ ಶತಕ - 43 ಎಸೆತಗಳು-ಎಬಿ ಡಿವಿಲೆಯರ್ಸ್ (ಆರ್ ಸಿಬಿ ಪರ vs ಗುಜರಾತ್)

* ಅತ್ಯುತ್ತಮ ಕ್ಯಾಚ್ : ಸುರೇಶ್ ರೈನಾ (ಗುಜರಾತ್ ಲಯನ್ಸ್)

* ವಿಟಾರಾ ಬ್ರೆಜಾ ಗ್ಲಾಮ್ ಶಾಟ್ ಪ್ರಶಸ್ತಿ -ಡೇವಿಡ್ ವಾರ್ನರ್

(ಒನ್ಇಂಡಿಯಾ ಸುದ್ದಿ)

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X