ಐಪಿಎಲ್ 9 : ಆರ್ ಸಿಬಿ ಮಣಿಸಿ ಕಪ್ ಎತ್ತಿದ ವಾರ್ನರ್ ಪಡೆ

Posted By:
Subscribe to Oneindia Kannada

ಬೆಂಗಳೂರು, ಮೇ 29 : ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಂಡಕ್ಕೆ ಐಪಿಎಲ್ 9 ಕಪ್ ಗೆಲ್ಲಲು ಸನ್ ರೈಸರ್ಸ್ ಹೈದರಾಬಾದ್ ತಂಡ 209 ರನ್ ಟಾರ್ಗೆಟ್ ನೀಡಿತ್ತು. ರನ್ ಚೇಸ್ ಭರ್ಜರಿಯಾಗಿ ಆರಂಭಿಸಿದ ಕೊಹ್ಲಿ ಪಡೆ ಗೆಲುವಿನ ಹೊಸ್ತಿಲಲ್ಲಿ ಮುಗ್ಗರಿಸಿತು. ಕಪ್ ವಾರ್ನರ್ ಪಡೆ ಪಾಲಾಯಿತು. ಐಪಿಎಲ್ 2016 ರ ನೂತನ ಚಾಂಪಿಯನ್ ಆಗಿ ಹೈದರಾಬಾದ್ ಹೊರ ಹೊಮ್ಮಿದೆ.

ಆರ್ ಸಿಬಿ ಡ್ರೀಮ್ ರನ್ ಚೇಸ್: ಕ್ರಿಸ್ ಗೇಲ್ ರನ್ ಸುರಿಮಳೆ ಹರಿಸಿದರೂ, ಕೊಹ್ಲಿ ದಾಖಲೆ ಅರ್ಧಶತಕ ಬಾರಿಸಿಸಿದರೂ ಗೆಲುವಿನ ಗುರಿ ಮುಟ್ಟಿಸುವ ಬ್ಯಾಟ್ಸ್ ಮನ್ ಆರ್ ಸಿಬಿ ಯಲ್ಲಿ ಸಿಗಲಿಲ್ಲ. ಬೌಲಿಂಗ್ ಶಕ್ತಿಯ ಬಲದಿಂದ ವಾರ್ನರ್ ಪಡೆ ಗೆಲುವಿನ ನಗೆ ಬೀರಿದೆ.

ಗೇಲ್ 76 ರನ್ (38 ಎಸೆತಗಳು, 4X4, 8X6), ಕೊಹ್ಲಿ 54 ರನ್ (35 ಎ, 5x4, 2x6) ಬಿಟ್ಟರೆ ಮಿಕ್ಕವರು ಭುವನೇಶ್ವರ್, ಮುಷ್ತಫಿಜುರ್, ಕಟ್ಟಿಂಗ್ ಬೌಲಿಂಗ್ ದಾಳಿಗೆ ತತ್ತರಿಸಿ ಶರಣಾದರು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಸನ್ ರೈಸರ್ಸ್ ಹೈದರಾಬಾದ್ ನಾಯಕ ಡೇವಿಡ್ ವಾರ್ನರ್ ಅವರು ಉತ್ತಮ ಬ್ಯಾಟಿಂಗ್ ಪ್ರದರ್ಶನದ ಮೂಲಕ ಮತ್ತೊಮ್ಮೆ ತಂಡಕ್ಕೆ ಆಸರೆಯಾದರು. [ಆರ್ ಸಿಬಿ vs ಹೈದರಾಬಾದ್ ಲೈವ್ ಸ್ಕೋರ್ ಕಾರ್ಡ್]

IPL Final: Mustafizur Rahman back as Sunrisers Hyderabad opt to bat

ಮಳೆ ಭೀತಿ ಇಲ್ಲ: ಭಾನುವಾರ ರಾತ್ರಿ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ಐಪಿಎಲ್ ಫೈನಲ್ ಪಂದ್ಯಕ್ಕೆ ಮಳೆ ಕಾಡಲಿಲ್ಲ. ಆರ್ ಸಿಬಿ ಬೌಲರ್ಸ್ ಗೆ ವಾರ್ನರ್ ಕಾಡಿದರು. 38 ಎಸೆತಗಳಲ್ಲಿ 69 ರನ್ (8x4,3x6) ಚೆಚ್ಚಿದರೆ, ಶಿಖರ್ ಧವನ್ 25 ಎಸೆತಗಳಲ್ಲಿ 28 ರನ್ ಬಾರಿಸಿದರು.

ಯುವರಾಜ್ ಸಿಂಗ್ 23 ಎಸೆತಗಳಲ್ಲಿ 38 ರನ್ (4x4, 2X6), ಬೆನ್ ಕಟ್ಟಿಂಗ್ಸ್ 39 ನಾಟೌಟ್ (15 ಎ, 3x4,4x6) ಸಮಯೋಚಿತ ಆಟಕ್ಕೆ ಆರ್ ಸಿಬಿಯ ಕಳಪೆ ಬೌಲಿಂಗ್ ಸಾಥ್ ನೀಡಿತು. ಅರವಿಂದ್ 2, ಜೋರ್ಡನ್ 3 ಪಡೆದಿದ್ದು ಸ್ಕೋರ್ ಕಾರ್ಡ್ ಅಲಂಕಾರಕ್ಕೆ ಸೀಮಿತವಾಯಿತು. ಮೂರನೇ ಬಾರಿಗೆ ಫೈನಲ್​ಗೆ ಲಗ್ಗೆ ಇಟ್ಟಿರುವ ಆರ್​ಸಿಬಿ, 2009 ಹಾಗೂ 2011ರಲ್ಲಿ ಫೈನಲ್ ನಲ್ಲಿ ರನ್ನರ್ ಅಪ್ ಆಗಿದ್ದೇ ಸಾಧನೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Sunrisers Hyderbad (SRH)beat Royal Challengers Bangalore by 8runs to lift their maiden IPL 9 trophy. David Warner scored yet another Half century to power SRH to 208/7 against Royal Challengers Bangalore (RCB) in the final of the 9th edition of Indian Premier League cricket tournament.
Please Wait while comments are loading...