ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗೆದ್ದಿದ್ದು ಪ್ರೇಕ್ಷಕರು ಹಾಗೂ ವೈಫೈ

Posted By:
Subscribe to Oneindia Kannada

ಬೆಂಗಳೂರು, ಮೇ 03 : ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ 9ರಲ್ಲಿ ಅತ್ಯಂತ ಸಭ್ಯ ತಂಡ ಎಂದು ಸದ್ಯಕ್ಕೆ ಪಟ್ಟಿಯಲ್ಲಿ ಮುಂದಿದೆ. ಇದೇ ರೀತಿ ಅತ್ಯಂತ ಸಂಭ್ರಮದ ಪ್ರೇಕ್ಷಕರೆಂದರೆ ಅದು ಚಿನ್ನಸ್ವಾಮಿ ಕ್ರೀಡಾಂಗಣದ ಪ್ರೇಕ್ಷಕರು. ಈ ಸಂತಸ ಸೋಮವಾರದ ಪಂದ್ಯದಲ್ಲಿ ಇನ್ನಷ್ಟು ಹೆಚ್ಚಾಗಿತ್ತು. ಆರ್ ಸಿಬಿ ಪಂದ್ಯ ಸೋತರೂ ಜಿಯೋ ವೈಫೈ ಲಾಭ ಫ್ಯಾನ್ಸ್ ಗಳಿಗೆ ಸಿಕ್ಕಿತ್ತು.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಬೆಂಗಳೂರು ಕ್ರಿಕೆಟ್ ಪ್ರೇಮಿಗಳನ್ನು ಆಕರ್ಷಿಸಲು ಜಿಯೋನೆಟ್ ಸಂಸ್ಥೆ 24 ಗಂಟೆ ಅವಧಿಗೆ ಹೈ ಸ್ಪೀಡ್ ವೈಫೈ ಸ್ಟೇಡಿಯಂನಾದ್ಯಂತ ಲಭ್ಯವಿರುವಂತೆ ಮಾಡಿತ್ತು. [ವಿಶ್ವ ಟಿ20: 6 ಕ್ರಿಕೆಟ್ ಸ್ಟೇಡಿಯಂಗೆ ಬಂತು ರಿಲಯನ್ಸ್ ವೈಫೈ]

IPL 2016: Fans can enjoy 'Jionet' WiFi at Bengaluru's Chinnaswamy Stadium

ಜಿಯೋನೆಟ್, ಹೈ-ಸ್ಪೀಡ್ ವೈ-ಫೈ ಸಂಪರ್ಕ. ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ ತಂದಿರುವ ಜಿಯೋನೆಟ್, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೈ-ಸ್ಪೀಡ್ ನ ಇಂಟರ್ನೆಟ್ ಸಂಪರ್ಕ ಒದಗಿಸುವ ಮೂಲಕ, ತಮ್ಮ ಆಟವನ್ನು ಖುಷಿಪಡುವ ರೀತಿಯನ್ನೇ ಬದಲಾಯಿಸಿತು.

ಮೊಬೈಲ್ ನೆಟ್‍ವರ್ಕ್ ಕಿರಿಕಿರಿ, ದೊಡ್ಡ ಪ್ರಮಾಣದ ಡಾಟಾ ಟ್ರಾಫಿಕ್ ಅನ್ನು ನಿಭಾಯಿಸಲು ಸಾಧ್ಯವಿಲ್ಲ ಎಂಬ ಸಮಸ್ಯೆಗೆ ಪರಿಹಾರ ಇದಾಗಿತ್ತು. ಇದರಿಂದಾಗಿ ವೀಕ್ಷಕರು ತಮ್ಮ ಬಾಲ್ ಟು ಬಾಲ್ ಕಥೆಯನ್ನು ತಮ್ಮ ಸ್ನೇಹಿತರು ಹಾಗೂ ಕುಟುಬಂದವರ ಜತೆ ಹಂಚಿಕೊಂಡರು. ಸರ್ಫ್ ಮಾಡಿ, ಸಾಮಾಜಿಕ ಜಾಲ ತಾಣದೊಂದಿಗೆ ಸಂಪರ್ಕ ಹೊಂದಿ ಆನಂದಿಸಿದರು.

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಸೇರಿದಂತೆ ಒಟ್ಟು 6 ಅಂತಾರಾಷ್ಟ್ರೀಯ ಸ್ಟೇಡಿಯಂಗಳಲ್ಲಿ ಈ ವ್ಯವಸ್ಥೆ ಮಾಡಲಾಗಿದೆ. ನವದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನ, ರಾಜ್​ಕೋಟ್​ನ ಸೌರಾಷ್ಟ್ರ ಕ್ರಿಕೆಟ್ ಸ್ಟೇಡಿಯಂ, ಕೋಲ್ಕತದ ಈಡನ್ ಗಾರ್ಡನ್ಸ್, ಮೊಹಾಲಿಯ ಪಂಜಾಬ್ ಕ್ರಿಕೆಟ್ ಸ್ಟೇಡಿಯಂ ಹಾಗೂ ಹೈದರಾಬಾದ್​ನ ರಾಜೀವ್ ಗಾಂಧಿ ಸ್ಟೇಡಿಯಂಗಳಲ್ಲಿ ವೈಫೈ ಸೇವೆ ಲಭ್ಯವಿದೆ. ಇದೇ ಮಾರ್ಚ್-ಏಪ್ರಿಲ್​ನಲ್ಲಿ ಭಾರತದಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿ ವೇಳೆಯಲ್ಲೂ ಜಿಯೋ ಇಫೋಕಾಮ್ ಲಿಮಿಟೆಡ್ ವೈಫೈ ವ್ಯವಸ್ಥೆ ಮಾಡಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The cricket season is in full frenzy mode with the Indian Premier League 2016 (IPL 9) under way and the fans are ignoring the sizzling summer to get a glimpse of their favourite stars.
Please Wait while comments are loading...