ಐಪಿಎಲ್: ಹುಬ್ಬಳ್ಳಿ, ಕುಡ್ಲ, ಬೆಳಗಾವಿ, ಮೈಸೂರಲ್ಲಿ ಫ್ಯಾನ್ ಪಾರ್ಕ್

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ನವದೆಹಲಿ, ಮೇ 06 : ಇಂಡಿಯನ್ ಪ್ರೀಮಿಯರ್ ಲೀಗ್ 2016 ವಾರಂತ್ಯದ ಪಂದ್ಯಗಳನ್ನು ವೀಕ್ಷಿಸಲು ಪ್ರೇಕ್ಷಕರಿಗಾಗಿ ಫ್ಯಾನ್ಸ್ ಪಾರ್ಕ್ ನಿರ್ಮಿಸಲು ಭಾರತೀಯ ಕ್ರಿಕೆಟ್ ಬೋರ್ಡ್ (ಬಿಸಿಸಿಐ) ಮುಂದಾಗಿದೆ. ಅವರವರ ಮನೆಗಳಲ್ಲಿ ಒಂಟಿಯಾಗಿ ಪಂದ್ಯಗಳನ್ನು ನೋಡಲು ಬೋರ್ ಹೊಡೆಯುತ್ತಿದ್ದರೆ ಈ ಫ್ಯಾನ್ಸ್ ಪಾರ್ಕ್ ನಲ್ಲಿ ಸ್ನೇಹಿತರೊಂದಿಗೆ ಪಂದ್ಯಗಳನ್ನು ವೀಕ್ಷಿಸಿ ಎನ್ ಜಾಯ್ ಮಾಡಬಹುದು. ಕರ್ನಾಟಕದ ನಾಲ್ಕು ನಗರಗಳಲ್ಲಿ ಈ ಪಂದ್ಯಗಳನ್ನು ವೀಕ್ಷಿಸಬಹುದು.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಹೌದು, ಈ ವಾರಂತ್ಯಕ್ಕೆ ನಡೆಯುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪುಣೆ ಸೂಪರ್ ಜೈಂಟ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಡೆಲ್ಲಿ ಡೇರ್ ಡೆವಿಲ್ಸ್ ನಡುವಿನ ಮೇ 07 ರ ಪಂದ್ಯಗಳಿಗೆ ಮತ್ತು ಮೇ 08 ರಂದು ನಡೆಯುವ ಮುಂಬೈ ಇಂಡಿಯನ್ಸ್ v/s ಸನ್ ರೈಸರ್ಸ್ ಹೈದರಾಬಾದ್, ಕೊಲ್ಕತ್ತಾ ನೈಟ್ ರೈಡರ್ಸ್ v/s ಗುಜರಾತ್ ಲಯನ್ಸ್ ಈ ಎಲ್ಲಾ ವಾರಂತ್ಯದ ಪಂದ್ಯಗಳಿಗೆ ಲಖನೌ, ಗೋರಂಗಾವ್, ಸೋಲಾಪುರ್, ವಾರಂಗಲ್, ಸೇರಿದಂತೆ ಹಲವು ಸಿಟಿಗಳಲ್ಲಿ ಐಪಿಲ್ ಪಂದ್ಯಗಳನ್ನು ವೀಕ್ಷಿಸಲು ಪ್ರೇಕ್ಷಕರಿಗಾಗಿ ಫ್ಯಾನ್ಸ್ ಪಾರ್ಕ್ ಗಳ ವ್ಯವಸ್ಥೆಯನ್ನು ಬಿಸಿಸಿಐ ಕಲ್ಪಿಸಿದೆ.

IPL 2016 Fan Parks in Hubballi, Mangaluru, Mysuru, Belagavi

ಕರ್ನಾಟಕದ ಹುಬ್ಬಳ್ಳಿ, ಮೈಸೂರು, ಮಂಗಳೂರು ಹಾಗೂ ಬೆಳಗಾವಿಯಲ್ಲದೆ ದೇಶದ ಇತರೆ ನಗರಗಳಾದ ಅಮೃತಸರ್, ಬರೋಡ, ಪಾಣಿಪತ್, ನಾಸಿಕ್, ಭೂಪಾಲ್, ಸೂರತ್, ಅಲಹಬಾದ್, ಗ್ವಾಲಿಯರ್ ಸಿಟಿ ಸ್ಟೇಡಿಯಂಗಳಲ್ಲಿ ಸುಮಾರು 1 ಲಕ್ಷ ಪ್ರೇಕ್ಷಕರು ಪಂದ್ಯಗಳನ್ನು ವೀಕ್ಷಿಸಲು ಬೃಹತ್ ಸ್ಕ್ರೀನ್ ನಿರ್ಮಿಸಲಾಗುವುದು ಎಂದು ಬಿಸಿಸಿಐ ತಿಳಿಸಿದೆ.

ಏನಿದು ಫ್ಯಾನ್ಸ್ ಪಾರ್ಕ್ : ದೊಡ್ಡ-ದೊಡ್ಡ ಸ್ಟೇಡಿಯಂಗಳಲ್ಲಿ ಬೃಹತ್ ಆಕಾರದ ಸ್ಕ್ರೀನ್ ಹಾಕಿ ಪಂದ್ಯಗಳನ್ನು ವೀಕ್ಷಿಸಲು ಪ್ರೇಕ್ಷಕರಿಗೆ ಅವಕಾಶ ಮಾಡಿಕೊಡಲಾಗಿದೆ. ಸ್ಟೇಡಿಯಂಗಳಿಗೆ ತೆರಳಲು ಆಗದಿದ್ದರೆ ಸ್ಟೇಡಿಯಂನಲ್ಲಿ ಕೂತು ನೋಡುವಾಗೆ ಅನುಭವ ಆಗುವ ರೀತಿಯಲ್ಲಿ ಕ್ರಿಕೆಟ್ ನೋಡಬಹುದು. ವಿಶ್ವ ಟಿ-20 2016 ಟೂರ್ನಿಯಲ್ಲೂ ವಿವಿಧಡೆ ಈ ಫ್ಯಾನ್ಸ್ ಪಾರ್ಕ್ ಗಳನ್ನು ನಿರ್ಮಿಸಿ ಪ್ರೇಕ್ಷಕರಿಗೆ ಮ್ಯಾಚ್ ಗಳನ್ನು ವೀಕ್ಷಿಸಲು ಅನುಕೂಲ ಮಾಡಿಕೊಡಲಾಗಿತ್ತು. ಐಪಿಎಲ್ ಫ್ಯಾನ್ ಪಾರ್ಕ್ ಪಟ್ಟಿ ಇಲ್ಲಿದೆ ನೋಡಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Following the successful hosting of the Indian Premier League (IPL) fan parks in various cities across the country every weekend, Hubballi, Mangaluru, Mysuru, Belagavi will host the fan parks for the double headers this weekend
Please Wait while comments are loading...