ಕೆಕೆಆರ್ ವಿರುದ್ಧ ಗೆದ್ದು ಎರಡನೇ ಸ್ಥಾನಕ್ಕೆ ಜಿಗಿದ ಡೆಲ್ಲಿ

Posted By:
Subscribe to Oneindia Kannada

ನವದೆಹಲಿ, ಮೇ 01: ಡೆಲ್ಲಿ ಡೇರ್ ಡೆವಿಲ್ಸ್ ತಂಡ ಆಲ್ ರೌಂಡ್ ಆಟದ ಮೂಲಕ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 27ರನ್ ಗಳಿಂದ ಸೋಲಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿದಿದೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಆರಂಭಿಕ ಹಿನ್ನಡೆ ನಂತರ ಡೆಲ್ಲಿ ತಂಡ ಕರುಣ್ ನಾಯರ್ 68 ರನ್( 50 ಎಸೆತ, 9‍X4, 1X6) ಬ್ಯಾಟಿಂಗ್ ಹಾಗೂ ವಿಶ್ವ ಟಿ20 ವಿಶ್ವಕಪ್ ಹೀರೋ ಕಾಲೋಸ್ ಬ್ರಾಥ್​ವೇಟ್ 34 ರನ್(11 ಎಸೆತ, 3X4, 3X6) ಆಟದ ನೆರವಿನಿಂದ 186/8 ಸ್ಕೋರ್ ಮಾಡಿತು. [ಪಂದ್ಯದ ಸ್ಕೋರ್ ಕಾರ್ಡ್]

ಕೆಕೆಆರ್ ತಂಡ 18.3 ಓವರ್ ಗಳಲ್ಲಿ 159 ಸ್ಕೋರ್ ಮಾಡಿ ಸೊಲೊಪ್ಪಿಕೊಂಡಿತು. ಬೌಲಿಂಗ್ ನಲ್ಲೂ ಮಿಂಚಿದ ಬ್ರಾಥ್ ವೇಟ್ 47ಕ್ಕೆ 3 ವಿಕೆಟ್ ಪಡೆದರು.

IPL 2016: Delhi Daredevils move to 2nd spot after win over KKR

ಕೆಕೆಆರ್ ಪರ ಏಕಾಂಗಿ ಹೋರಾಟ ನಡೆಸಿದ ರಾಬಿನ್ ಉತ್ತಪ್ಪ 72 ರನ್( 52 ಎಸೆತ, 6 X4, 2X6) ಉತ್ತಮ ಪ್ರದರ್ಶನ ನೀಡಿದರು. ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಕೋಚ್ ರಾಹುಲ್ ದ್ರಾವಿಡ್ ಮಾರ್ಗದರ್ಶನದ ಡೆಲ್ಲಿ ತಂಡ ಉತ್ತಮ ಗೆಲುವು ಸಾಧಿಸಿ ಗಮನ ಸೆಳೆಯಿತು. [ಗುಜರಾತಿಗೆ ಡೆವಿಲ್ ನಂತೆ ಕಾಡಿದ ಮೋರಿಸ್ ತಿಂದಿದ್ದೇನು?]

 ಕೆಕೆಆರ್ ವಿರುದ್ಧ ಗೆದ್ದು ಎರಡನೇ ಸ್ಥಾನಕ್ಕೆ ಜಿಗಿದ ಡೆಲ್ಲಿ

ಕೆಕೆಆರ್ ವಿರುದ್ಧ ಗೆದ್ದು ಎರಡನೇ ಸ್ಥಾನಕ್ಕೆ ಜಿಗಿದ ಡೆಲ್ಲಿ

-
-
-
-
-
-
-
-
-
-
-
-
-
-
-
-
-
-
-

ಡೆಲ್ಲಿ ತಂಡ ಕ್ವಿಂಟಾನ್ ಡಿಕಾಕ್(1) ಹಾಗೂ ಶ್ರೇಯಸ್ ಅಯ್ಯರ್(0), ಸಂಜು ಸ್ಯಾಮ್ಸನ್(15) ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಕರುಣ್ ನಾಯರ್ ಹಾಗೂ ಇಂಗ್ಲೆಂಡಿನ ಸ್ಯಾಮ್ ಬಿಲ್ಲಿಂಗ್ಸ್ 4ನೇ ವಿಕೆಟ್ ಗೆ 105 ರನ್ ಕಲೆ ಹಾಕಿ ಇನ್ನಿಂಗ್ಸ್ ಕಟ್ಟಿದರು.[ಐಪಿಎಲ್ 2016 : ಹೊರ ಹೋದ ಆಟಗಾರರ ಪಟ್ಟಿ]

ರನ್ ಚೇಸ್ ಗೆ ಇಳಿದ ಕೆಕೆಆರ್ ತಂಡ ಆರಂಭದಲ್ಲೇ ವಿಕೆಟ್ ಕಳೆದುಕೊಂಡಿತು. ಗಂಭೀರ್ 6, ಪಿಶೂಷ್ ಚಾವ್ಲಾ 8, ಯೂಸುಫ್ ಪಠಾಣ್ 10, ಸೂರ್ಯ ಕುಮಾರ್ ಯಾದವ್ 21ರನ್ ಗಳಿಸಿ ಔಟಾದರು. 5 ವಿಕೆಟ್ ಕಳೆದುಕೊಂಡು 107ರನ್ ಗಳಿಸಿದ್ದ ಕೆಕೆಆರ್ ಕೊನೆಗೆ ಗೆಲುವಿನ ಗಡಿ ದಾಟಲಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Delhi Daredevils produced a thorough all-round performance to notch up their fourth win, beating Kolkata Knight Riders by 27 runs in an Indian Premier League 2016 (IPL 9) clash here on Saturday (April 30).
Please Wait while comments are loading...