ಹೈದರಾಬಾದ್‌ ತಂಡವನ್ನು ಫೈನಲ್‌ಗೆ ತಂದ ವಾರ್ನರ್!

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ನವದೆಹಲಿ, ಮೇ 28 : ಐಪಿಎಲ್ 2016ನೇ ಅವೃತ್ತಿ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಗುಜರಾತ್ ಲಯನ್ಸ್ ತಂಡವನ್ನು ಸೋಲಿಸಿದ ಸನ್‌ರೈಸರ್ಸ್ ಹೈದರಾಬಾದ್ ಮೊದಲ ಬಾರಿಗೆ ಐಪಿಎಲ್‌ ಫೈನಲ್‌ಗೆ ಲಗ್ಗೆ ಇಟ್ಟಿದೆ. ಮೇ 29ರಂದು ಬೆಂಗಳೂರಿನಲ್ಲಿ ಆರ್‌ಸಿಬಿ ಮತ್ತು ಹೈದರಾಬಾದ್ ನಡುವೆ ಫೈನಲ್ ಪಂದ್ಯ ನಡೆಯಲಿದೆ.

ಸನ್‌ರೈಸರ್ಸ್ ಹೈದರಾಬಾದ್ ಫೈನಲ್ ಪ್ರವೇಶಿಸಲು ನಾಯಕ ಡೇವಿಡ್ ವಾರ್ನರ್ ಅವರ ಬ್ಯಾಟಿಂಗ್ ಅಬ್ಬರವೇ ಕಾರಣ. ವಾರ್ನರ್ ಅವರ ಅಜೇಯ 96 ರನ್ ನೆರವಿನಿಂದ ದೆಹಲಿಯಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಗುಜರಾತ್ ಲಯನ್ಸ್ ವಿರುದ್ಧ 4 ವಿಕೆಟ್‌ಗಳ ಅಂತರದ ಗೆಲುವು ದಾಖಲಿಸಿತು. [ಫೈನಲ್ ಪ್ರವೇಶಿಸಿದ ಜೋಶ್ ನಲ್ಲಿ ಆರ್ ಸಿಬಿ ಹುಡ್ಗರ ಡಾನ್ಸ್]

hyderabad

ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಶುಕ್ರವಾರ ನಡೆದ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್‌ ಲಯನ್ಸ್, ಆರಂಭಿಕ ಅಘಾತದ ನಡುವೆಯೂ ಅರನ್ ಫಿಂಚ್ ಅವರ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು ಹೈದರಾಬಾದ್‌ಗೆ 163 ರನ್‌ಗಳ ಟಾರ್ಗೆಟ್ ನೀಡಿತು. [ಟ್ವಿಟ್ಟರ್ ಮೂಲಕ ಆರ್ ಸಿಬಿಗೆ ಶುಭಾಶಯ ಕೋರಿದ ವಿಜಯ್ ಮಲ್ಯ!]

ಗುರಿ ಬೆನ್ನತ್ತಿದ್ದ ಹೈದರಾಬಾದ್‌ 2ನೇ ಓವರ್‌ನಲ್ಲಿ ಶಿಖರ್ ಧವನ್ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ನಂತರ ಬಂದ ಹೆನ್ರಿಕ್ಸ್ 11 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬ್ಯಾಟಿಂಗ್ ಲಯಕ್ಕೆ ಮರಳಿದ್ದ ಯುವಿ 8 ರನ್‌ಗಳಿಸಿ ಔಟಾದರು. 84 ರನ್‌ ಗಳಿಸುವಷ್ಟರಲ್ಲಿ ಪ್ರಮುಖ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ತಂಡವನ್ನು ಫೈನಲ್‌ನತ್ತ ತೆಗೆದುಕೊಂಡು ಹೋಗಿದ್ದು ನಾಯಕ ವಾರ್ನರ್.

-
-
-
-
-
-

ನಾಯಕನ ಏಕಾಂಗಿ ಹೋರಾಟ : ಒಂದು ಕಡೆ ವಿಕೆಟ್ ಬೀಳುತ್ತಿದ್ದರೆ ಮತ್ತೊಂದು ಕಡೆ ಡೇವಿಡ್ ವಾರ್ನರ್ ಗುಜರಾತ್ ಬೌಲರ್‌ಗಳ ಬೆವರಿಳಿಸಿದರು. 58 ಎಸೆತಗಳಲ್ಲಿ (11 ಬೌಂಡರಿ, 3 ಸಿಕ್ಸರ್ ) 96 ರನ್‌ಬಾರಿಸಿ ಅಜೇಯರಾಗಿ ಉಳಿದರು. ತಂಡವನ್ನು ಫೈನಲ್‌ಗೆ ತೆಗೆದುಕೊಂಡು ಹೋದ ಅವರು, ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು.

ಮೇ 29ರ ಭಾನುವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ 2016ನೇ ಆವೃತ್ತಿಯ ಫೈನಲ್ ಪಂದ್ಯ ನಡೆಯಲಿದೆ. ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಹೈದರಾಬಾದ್ ಎದುರಿಸಲಿದೆ. ರಾತ್ರಿ 8 ಗಂಟೆಗೆ ಪಂದ್ಯ ಆರಂಭವಾಗಲಿದೆ. [ಪಿಟಿಐ ಚಿತ್ರಗಳು]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Skipper David Warner produced a majestic 93 as he single-handedly led Sunrisers Hyderabad (SRH) into the Indian Premier League (IPL) 2016 final after securing a four wicket win over Gujarat Lions (GL) in the Qualifier 2, in New Delhi on Friday.
Please Wait while comments are loading...