ಆರ್ ಸಿಬಿಗೆ ಮತ್ತೆ ಸೋಲು, ವಾರ್ನರ್ ಪಡೆಗೆ ಜಯ

Posted By:
Subscribe to Oneindia Kannada

ಹೈದರಾಬಾದ್, ಮೇ 01: ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತೊಮ್ಮೆ ಸೋಲು ಕಂಡಿದೆ. ನಿರೀಕ್ಷೆಯಂತೆ ಬ್ಯಾಟಿಂಗ್ ನಲ್ಲಿ ಕ್ಲಿಕ್ ಆದ ಆರ್ ಸಿಬಿ, ಬೌಲಿಂಗ್ ನಲ್ಲಿ ಟುಸ್ ಆಗಿದೆ. ವಾರ್ನರ್ ಪಡೆ 15 ರನ್ ಗಳ ಜಯ ದಾಖಲಿಸಿದೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಉಪ್ಪಳದ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯ ಮಳೆಯಿಂದಾಗಿ ಒಂದು ಗಂಟೆ ತಡವಾಗಿ ಆರಂಭಗೊಂಡರೂ ಓವರ್ ಗಳು ಕಡಿತ ಮಾಡಿರಲಿಲ್ಲ. ಆರ್ ಸಿಬಿ ಫೀಲ್ಡರ್ ಕೆಲವೊಮ್ಮೆ ಜಾರಿದ್ದು ಕಂಡು ಬಂದಿತು.[ಪಂದ್ಯದ ಸ್ಕೋರ್ ಕಾರ್ಡ್]

IPL 2016: David Warner leads Hyderabad to victory

ಸೇಡಿನ ಪಂದ್ಯದಲ್ಲಿ ಡೇವಿಡ್ ವಾರ್ನರ್ ಪಡೆ ಮೊದಲು ಬ್ಯಾಟಿಂಗ್ ಅವಕಾಶ ಪಡೆದು ಭರ್ಜರಿಯಾಗಿ ಪ್ರದರ್ಶನ ನೀಡಿತು. ವಾರ್ನರ್ ಅವರು ಮತ್ತೊಮ್ಮೆ ಶತಕದ ಹೊಸ್ತಿಲಲ್ಲಿ ಎಡವಿದರೂ ಆರ್ ಸಿಬಿ ಬೌಲರ್ ಗಳ ಕೃಪೆಯಿಂದ ಅತಿಥೇಯ ತಂಡ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 194ರನ್ ಗಳಿಸಿತು.[ಕುಣಿಯುತ್ತಾ ಬಂದ ಗೇಲ್, ನಲಿದಾಡಿದ ಕೊಹ್ಲಿ]

ಡೇವಿಡ್ ವಾರ್ನರ್ 92 ರನ್(50 ಎಸೆತ, 9‍X4, 5X6), ಕೇನ್ ವಿಲಿಯಮ್ಸನ್ 50ರನ್, 38ಎಸೆತ, 7X4) ಆಕರ್ಷಕ ಬ್ಯಾಟಿಂಗ್ ಜತೆಗೆ ಹೆನ್ರಿಕ್ಯೂಸ್ 14 ಎಸೆತಗಳಲ್ಲಿ 31ರನ್ ಚೆಚ್ಚಿದರು.[ಐಪಿಎಲ್ 2016 : ಹೊರ ಹೋದ ಆಟಗಾರರ ಪಟ್ಟಿ]

-
-
ಆರ್ ಸಿಬಿಗೆ ಮತ್ತೆ ಸೋಲು, ವಾರ್ನರ್ ಪಡೆಗೆ ಜಯ

ಆರ್ ಸಿಬಿಗೆ ಮತ್ತೆ ಸೋಲು, ವಾರ್ನರ್ ಪಡೆಗೆ ಜಯ

ಆರ್ ಸಿಬಿಗೆ ಮತ್ತೆ ಸೋಲು, ವಾರ್ನರ್ ಪಡೆಗೆ ಜಯ

ಆರ್ ಸಿಬಿಗೆ ಮತ್ತೆ ಸೋಲು, ವಾರ್ನರ್ ಪಡೆಗೆ ಜಯ

-

ರನ್ ಚೇಸಿಂಗ್ ನಲ್ಲಿ ನಾಯಕ ವಿರಾಟ್ ಕೊಹ್ಲಿ 14 ರನ್ ಗಳಿಸಿ ಔಟಾಗಿದ್ದು ಹೊಡೆತ ನೀಡಿತು. ಕನ್ನಡಿಗ ಕೆಎಲ್ ರಾಹುಲ್ 51ರನ್( 28ಎಸೆತ, 6X4, 1X6) ಹಾಗೂ ಎಬಿ ಡಿವಿಲಿಯರ್ಸ್ 47ರನ್(32ಎಸೆತ, 3X4, 2X6) ಉತ್ತಮ ಆಟದ ಹೊರತಾಗಿ ಉಳಿದ ಬ್ಯಾಟ್ಸ್ ಮನ್ ಗಳು ಗೆಲುವಿನ ಆಸೆ ಚಿಗುರಿಸಲಿಲ್ಲ.

ಗೇಲ್, ಸರ್ಫರಾಜ್ ಖಾನ್ ಇಲ್ಲದ ಆರ್ ಸಿಬಿಯಲ್ಲಿ ಸಚಿನ್ ಬೇಬಿ 16 ಎಸೆತಗಳಲ್ಲಿ 26ರನ್ ಹಾಗೂ ಕೇದಾರ್ ಜಾಧವ್ 15 ಎಸೆತಗಳಲ್ಲಿ 25 ರನ್ ಗಳಿಸಿದ್ದು ಪ್ರಯೋಜನಕ್ಕೆ ಬರಲಿಲ್ಲ. ಅಂತಿಮವಾಗಿ ಆರ್ ಸಿಬಿ ತಂಡ 6 ವಿಕೆಟ್​ ಕಳೆದುಕೊಂಡು 179 ಮೊತ್ತ ಗಳಿಸಿ ಸೊಲೊಪ್ಪಿಕೊಂಡಿತು. ಮೇ 2 ರಂದು ಕೆಕೆಆರ್ ತಂಡವನ್ನು ಆರ್ ಸಿಬಿ ಎದುರಿಸಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Captain David Warner led from the front as Sunrisers Hyderabad (SRH) defeated Royal Challengers Bangalore (RCB) by 15 runs in an Indian Premier League 2016 (IPL 9) match here tonight (April 30).
Please Wait while comments are loading...