ಐಪಿಎಲ್ 2016: ಕಿಂಗ್ಸ್ XI ಪಂಜಾಬ್ ತಂಡಕ್ಕೆ ಹೊಸ ಕ್ಯಾಪ್ಟನ್

Posted By:
Subscribe to Oneindia Kannada

ಚಂಡೀಗಢ, ಫೆ. 09: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 9 ನೇ ಆವೃತ್ತಿಯಲ್ಲಿ ಕಿಂಗ್ಸ್ XI ಪಂಜಾಬ್ ತಂಡಕ್ಕೆ ಹೊಸ ನಾಯಕನ ಆಯ್ಕೆಯಾಗಿದೆ. ದಕ್ಷಿಣ ಆಫ್ರಿಕಾದ ಬ್ಯಾಟ್ಸ್ ಮನ್ ಡೇವಿಡ್ ಮಿಲ್ಲರ್ ಅವರು ಪಂಜಾಬ್ ತಂಡವನ್ನು ಮುನ್ನಡೆಸಲಿದ್ದಾರೆ.

ಹರಾಜಿನ ನಂತರ ಐಪಿಎಲ್ 2016ರ ತಂಡಗಳು

ನಟಿ ಪ್ರೀತಿ ಜಿಂಟಾ ಸಹ ಮಾಲೀಕತ್ವ ಪಂಜಾಬ್ ಫ್ರಾಂಚೈಸಿ ಮಂಗಳವಾರ (ಫೆಬ್ರವರಿ 09) ದಂದು 26 ವರ್ಷ ವಯಸ್ಸಿನ ಮಿಲ್ಲರ್ ಅವರನ್ನು ಐಪಿಎಲ್ 2016ರ ಪಂಜಾಬ್ ತಂಡದ ನಾಯಕನಾಗಿ ಘೋಷಿಸಿದೆ. ಕಳೆದ ವರ್ಷ ಆಸ್ಟ್ರೇಲಿಯಾದ ಜಾರ್ಜ್ ಬೈಲಿ ಅವರು ನಾಯಕರಾಗಿದ್ದರು. ಈ ಬಾರಿಯ ಟೂರ್ನಿ ಏಪ್ರಿಲ್ 9 ರಿಂದ ಆರಂಭವಾಗುತ್ತದೆ.

David Miller Kings XI Punjab captain

ಇತ್ತೀಚೆಗೆ ಟೀಂ ಇಂಡಿಯಾದ ಮಾಜಿ ಕ್ರಿಕೆಟರ್ ವೀರೆಂದ್ರ ಸೆಹ್ವಾಗ್ ರನ್ನು ಪಂಜಾಬ್ ತಂಡದ ಮಾರ್ಗದರ್ಶಿಯಾಗಿ ನೇಮಿಸಲಾಯಿತು.

2014 ಹಾಗೂ 2015ರ ಆವೃತ್ತಿಯಲ್ಲಿ ಸೆಹ್ವಾಗ್ ಅವರು ಪಂಜಾಬ್ ಪರ ಆಡಿದ್ದರು. ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಪಡೆದುಕೊಂಡರು. ಸದ್ಯ ಮಾಸ್ಟರ್ ಕ್ರಿಕೆಟ್ ಲೀಗ್ ನಲ್ಲಿ ಭರ್ಜರಿಯಾಗಿ ಬ್ಯಾಟ್ ಬೀಸುತ್ತಿದ್ದಾರೆ. ಮಾಜಿ ಕ್ರಿಕೆಟರ್ ಸಂಜಯ್ ಬಂಗಾರ್ ಅವರು ಪಂಜಾಬ್ ತಂಡದ ಮುಖ್ಯ ಕೋಚ್ ಆಗಿದ್ದಾರೆ.

ನಟಿ ಪ್ರೀತಿ ಜಿಂಟಾ ಅಲ್ಲದೆ, ಉದ್ಯಮಿ ಮೋಹಿತ್ ಬರ್ಮನ್, ನೆಸ್ ವಾಡಿಯಾ ಹಾಗೂ ಕರಣ್ ಪಾಲ್ ಅವರು ಪಂಜಾಬ್ ತಂಡದ ಸಹ ಮಾಲೀಕರಾಗಿದ್ದಾರೆ. (ಒನ್ ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
South African batsman David Miller has been appointed as the captain of Kings XI Punjab for the 9th edition of the Indian Premier League (IPL) this year.
Please Wait while comments are loading...