ಪಂಜಾಬ್ ಕಿಂಗ್ಸ್ ಗಳನ್ನು ಮಣಿಸಿದ ಗುಜರಾತಿನ ಲಯನ್ಸ್

Posted By:
Subscribe to Oneindia Kannada

ಮೊಹಾಲಿ, ಏಪ್ರಿಲ್ 11: ಚೆನ್ನೈ ಸೂಪರ್ ಕಿಂಗ್ಸ್ ಬಿಟ್ಟು ಹೊಸ ತಂಡ ಗುಜರಾತ್ ಲಯನ್ಸ್ ನಾಯಕರಾಗಿರುವ ಸುರೇಶ್ ರೈನಾ ಅವರು ಚೊಚ್ಚಲ ಪಂದ್ಯದಲ್ಲೇ ಜಯಭೇರಿ ಬಾರಿಸಿದ್ದಾರೆ. ಐಪಿಎಲ್ 9ರ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ‍‍XI ತಂಡವನ್ನು ಗುಜರಾತ್ ಲಯನ್ಸ್ ತಂಡ 5 ವಿಕೆಟ್ ಗಳಿಂದ ಸೋಲಿಸಿದೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಗುಜರಾತಿನ ಪರ ಡ್ವಾಯ್ನೆ ಬ್ರಾವೋ, ಅರೋನ್ ಫಿಂಚ್ ಗೆಲುವಿನ ರೂವಾರಿಗಳೆನಿಸಿದರು. ಬ್ರಾವೊ (22ಕ್ಕೆ 4) ಶ್ರೇಷ್ಠ ಬೌಲಿಂಗ್ ಪ್ರದರ್ಶನ ನೀಡಿದರೆ, ಆರೋನ್ ಫಿಂಚ್ 74 ರನ್(47 ಎಸೆತಗಳು, 12X4) ಬ್ಯಾಟಿಂಗ್ ನೆರವಿನಿಂದ ಗುಜರಾತ್ ತಂಡ ಗೆಲುವಿನ ರುಚಿ ಕಂಡಿತು. [ಪಂದ್ಯದ ಸ್ಕೋರ್ ಕಾರ್ಡ್]

IPL 2016: Bravo and Finch help Gujarat Lions make a winning start

ಸೋಮವಾರ ನಡೆದ ಪಂದ್ಯದಲ್ಲಿ ಸುರೇಶ್ ರೈನಾ ಟಾಸ್ ಗೆದ್ದು ಆತಿಥೇಯ ಪಂಜಾಬ್ ತಂಡವನ್ನು ಬ್ಯಾಟಿಂಗ್ ಮಾಡುವ ಅವಕಾಶ ನೀಡಿದರು.

ಪಂಜಾಬ್ ಪರ ಮುರಳಿ ವಿಜಯ್ 42 ರನ್(34 ಎಸೆತ, 5 ಬೌಂಡರಿ, 1 ಸಿಕ್ಸರ್) ಹಾಗೂ ಮನನ್ ವೊಹ್ರಾ 38 ರನ್(23 ಎಸೆತ, 4 ಬೌಂಡರಿ, 2 ಸಿಕ್ಸರ್) ಜೋಡಿ ಉತ್ತಮ ಆರಂಭದ ಲಾಭ ಪಡೆದರೂ ನಿರಂತರ ವಿಕೆಟ್ ಕಳೆದುಕೊಂಡು 6 ವಿಕೆಟ್​ಗೆ 161 ರನ್ ಗಳಿಸಿತು. ಗುಜರಾತ್ ತಂಡ 17.4 ಓವರ್​ಗಳಲ್ಲಿ 5 ವಿಕೆಟ್​ಗೆ 162 ಗಳಿಸಿ ಗೆಲುವಿನ ನಗೆ ಬೀರಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Dwyane Bravo recorded his best IPL figures with a four-wicket haul before Aaron Finch smashed 74 runs off 47 balls as Gujarat Lions thumped hosts Kings XI Punjab by five wickets to make a winning entry into the Indian Premier League match, here tonight (April 11).
Please Wait while comments are loading...