ಐಪಿಎಲ್ ಗೂ ಮುನ್ನ ಬಿಸಿಸಿಐ ಕಟ್ಟಿದ ತೆರಿಗೆ ಎಷ್ಟು?

Posted By:
Subscribe to Oneindia Kannada

ಮುಂಬೈ, ಏಪ್ರಿಲ್ 13: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸರಿಯಾಗಿ ಹಣ ಹಂಚಿಕೆ, ಅನುದಾನ ಮಾಡುತ್ತಿಲ್ಲ ಎಂದು ಸುಪ್ರೀಂಕೋರ್ಟ್ ಗರಂ ಆಗಿ ಹೇಳಿದ್ದು ನಿಮಗೆಲ್ಲ ಗೊತ್ತಿರಬಹುದು. ಈಗ ಬಿಸಿಸಿಐ ಮಾರ್ಚ್ ತಿಂಗಳ ಖರ್ಚುವೆಚ್ಚದ ಲೆಕ್ಕಾಚಾರ ಕೊಟ್ಟಿದೆ. ಎಷ್ಟು ತೆರಿಗೆ ಪಾವತಿಯಾಗಿದೆ? ರಾಹುಲ್ ದ್ರಾವಿಡ್ ಗೆ ಸಂಭಾವನೆ ಸಿಕ್ಕಿದೆಯೆ? ಏನಾದರೂ ಬದಲಾವಣೆ ಸಾಧ್ಯವೇ? ಎಂಬುದನ್ನು ಬಿಸಿಸಿಐ ವಿವರಿಸಿದೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಬಿಸಿಸಿಐ ನೀಡಿರುವ ಪ್ರಕಟಣೆಯಂತೆ 2013-14ರಲ್ಲಿ ಸುಮಾರು 50 ಕೋಟಿ ರು ಆದಾಯ ತೆರಿಗೆ ಪಾವತಿಸಲಾಗಿದೆ. 25 ಲಕ್ಷ ರುಗೂ ಅಧಿಕ ಖರ್ಚು ವೆಚ್ಚದ ಲೆಕ್ಕಾಚಾರವನ್ನು ವೆಬ್ ಸೈಟ್ ನಲ್ಲಿ ಹಾಕಲಾಗಿದೆ. 2.74 ಕೋಟಿ ರು ಸೇವಾ ತೆರಿಗೆ ಪಾವತಿಸಲಾಗಿದೆ ಎಂದು ಹೇಳಿಕೊಂಡಿದೆ.
|
ಅಂಡರ್ 19 ಕ್ರಿಕೆಟ್ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಇನ್ನೂ ಪೂರ್ತಿ ಸಂಭಾವನೆ ಕೊಟ್ಟಿಲ್ಲ. ಅರ್ಧ ಸಂಬಳ ಮಾತ್ರ ನೀಡಿದ್ದೇವೆ. ಸಂಬಳ, ಸಂಭಾವನೆಗೆ 1.30ಕೋಟಿ ರು ಖರ್ಚಾಗಿದೆ ಎಂದು ಬಿಸಿಸಿಐ ಹೇಳಿದೆ.

IPL 2016: BCCI paid Rs 50 cr as income tax in March

ಅಸ್ಸಾಂ ಸೇರಿದಂತೆ ಅನೇಕ ಕ್ರಿಕೆಟ್ ಮಂಡಳಿಗಳಿಗೆ ಸರಿಯಾಗಿ ಅನುದಾನ ನೀಡುತ್ತಿಲ್ಲ ಎಂಬ ಅಕ್ಷೇಪಕ್ಕೆ ಉತ್ತರಿಸಿರುವ ಬಿಸಿಸಿಐ, ಅಸ್ಸಾಂ ಕ್ರಿಕೆಟ್ ಸಂಸ್ಥೆಗೆ 3.37 ಕೋಟಿ ರು 2014-15 ಸಾಲಿನಲ್ಲಿ ನೀಡಲಾಗಿದೆ. ಉಳಿದಂತೆ ಬೆಂಗಾಲ್ ಕ್ರಿಕೆಟ್ ಅಸೋಸಿಯೇಷನ್ ಗೆ 6.75 ಕೋಟಿ ರು ಕೊಡಲಾಗಿದೆ.

ವಿವಾದಾತ್ಮಕ ಡೆಲ್ಲಿ ಹಾಗೂ ಡಿಸ್ಟ್ರಿಕ್ ಕ್ರಿಕೆಟ್ ಅಸೋಸಿಯೇಷನ್ (ಡಿಡಿಸಿಎ) ಗೆ ಅಂಡರ್ 23 ಸಿಕೆ ನಾಯ್ಡು ಟ್ರೋಫಿ ಲೀಗ್ ಹಾಗೂ ನಾಕೌಟ್ ಪಂದ್ಯ ಆಯೋಜನೆಗಾಗಿ 29.22 ಲಕ್ಷ ರು ಸಂದಾಯವಾಗಿದೆ.


ಏಪ್ರಿಲ್ 9 ರಿಂದ ಆರಂಭವಾದ ಇಂಡಿಯನ್ ಪ್ರೀಮಿಯರ್ ಲೀಗ್ ನ ತಂಡಗಳಾದ ಕಿಂಗ್ಸ್ XI ಪಂಜಾಬ್, ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಡೇರ್ ಡೆವಿಲ್ಸ್ ಗೆ ಮುಂಗಡವಾಗಿ ಮೊತ್ತವನ್ನು ನೀಡಲಾಗಿದೆ. ಈ ಪೈಕಿ ಪಂಜಾಬ್ ಫ್ರಾಂಚೈಸಿ (ಕೆಪಿಎಚ್ ಡ್ರೀಂ ಕ್ರಿಕೆಟ್ ಪ್ರೈ ಲಿಮಿಟೆಡ್) ಗೆ 21.90 ಕೋಟಿ ರು ಹಾಗೂ ಮುಂಬೈ ಇಂಡಿಯನ್ಸ್ ( ಇಂಡಿಯಾವಿನ್ ಸ್ಫೋರ್ಟ್ಸ್ ಪ್ರೈ ಲಿ) ಗೆ 22.90 ಕೋಟಿ ರು ಹಾಗೂ ಡೆಲ್ಲಿ(ಜಿಎಂಆರ್ ಸ್ಫೋರ್ಟ್ಸ್ ಪ್ರೈ ಲಿ) ಗೆ 22.90 ಕೋಟಿ ರು ನೀಡಲಾಗಿದೆ (ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Indian Cricket Board (BCCI) paid a whopping Rs 50 crore as income tax for the year 2013-14, its monthly disclosure on spendings has revealed.
Please Wait while comments are loading...