ಯುವಿ ಸೇರಿ 700 ಆಟಗಾರರ ಹರಾಜು, ಯಾರಿಗೆ ಎಷ್ಟು ರೇಟು?

Posted By:
Subscribe to Oneindia Kannada

ಬೆಂಗಳೂರು, ಜ. 25 : ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) 2016ರ ಹರಾಜು ಪ್ರಕ್ರಿಯೆಗೆ ವೇದಿಕೆ ಸಿದ್ಧವಾಗಿದೆ. ಆಲ್ ರೌಂಡರ್ ಯುವರಾಜ್ ಸಿಂಗ್ ಸೇರಿದಂತೆ ಸುಮಾರು 700 ಕ್ಕೂ ಅಧಿಕ ಕ್ರಿಕೆಟರ್ಸ್ ಗಳ ಹರಾಜು ಪ್ರಕ್ರಿಯೆ ಫೆಬ್ರವರಿ 06 ರಂದು ನಡೆಯಲಿದೆ.

ಕಳೆದ ಐಪಿಎಲ್ ಹರಾಜಿನಲ್ಲಿ ಬರೋಬ್ಬರಿ 16 ಕೋಟಿ ರೂ.ಗೆ ಬಿಕರಿಯಾಗಿದ್ದ ಯುವರಾಜ್ ಸಿಂಗ್ ಅವರಿಗೆ ಈ ಬಾರಿಯ ಹರಾಜು ಪ್ರಕ್ರಿಯೆಯಲ್ಲಿ 2 ಕೋಟಿ ರೂ. ಮೂಲ ಬೆಲೆ ನಿಗದಿ ಮಾಡಲಾಗಿದೆ. ಯುವರಾಜ್ ಸಿಂಗ್ ಸೇರಿದಂತೆ ಒಟ್ಟು 12 ಸ್ಟಾರ್ ಆಟಗಾರರು ಇಷ್ಟೇ ಮೊತ್ತದ ಮೂಲ ಬೆಲೆ ಫಿಕ್ಸ್ ಮಾಡಲಾಗಿದೆ.

ಕಳೆದ ಆವೃತ್ತಿಯಲ್ಲಿ ಡೆಲ್ಲಿ ಡೇರ್​ಡೆವಿಲ್ಸ್ ತಂಡಕ್ಕೆ 16 ಕೋಟಿ ರೂ. ಮೊತ್ತಕ್ಕೆ ಯುವರಾಜ್ ಸಿಂಗ್ ಮಾರಾಟವಾಗಿದ್ದರು. ಆದರೆ, ಕಳಪೆ ಪ್ರದರ್ಶನದಿಂದ ತಂಡದಲ್ಲಿ ಉಳಿಯಲಾಗಲಿಲ್ಲ.

Rs 2 crore base price for Yuvraj Singh

ಯುವರಾಜ್ ಸಿಂಗ್ ಅಲ್ಲದೆ, ದಿನೇಶ್ ಕಾರ್ತಿಕ್, ಸ್ಟುವರ್ಟ್ ಬಿನ್ನಿ, ಮಿಚೆಲ್ ಮಾರ್ಷ್, ಕೆವಿನ್ ಪೀಟರ್ಸನ್, ಶೇನ್ ವಾಟ್ಸನ್,ಕೇನ್ ರಿಚರ್ಡ್ ಸನ್, ಸಂಜು ಸಾಮ್ಸನ್, ಮೈಕಲ್ ಹಸ್ಸಿ ಅವರಿಗೂ 2 ಕೋಟಿ ರು ನಿಗದಿಪಡಿಸಲಾಗಿದೆ ಎಂದು ಮುಂಬ ಮಿರರ್ ವರದಿ ಮಾಡಿದೆ. ಅಂತಿಮ 300 ಆಟಗಾರರ ಪಟ್ಟಿ ಜನವರಿ 27 ರ ವೇಳೆಗೆ ಲಭ್ಯವಾಗುವ ನಿರೀಕ್ಷೆಯಿದೆ.

ಡೇಲ್ ಸ್ಟೈನ್, ಮೋಹಿತ್ ಶರ್ಮ, ಜಾಸ್ ಬಟ್ಲರ್ (ಮೂಲಬೆಲೆ: 1.5 ಕೋ.ರೂ.); ಇರ್ಫಾನ್ ಪಠಾಣ್, ಟಿಮ್ ಸೌಥಿ (1.ಕೋಟಿ ರೂ.); ಮಾರ್ಟಿನ್ ಗುಪ್ಟಿಲ್, ಜೇಸನ್ ಹೋಲ್ಡರ್, ಬರೀಂದರ್ ಸರ್ನ್ (50 ಲಕ್ಷ ರೂ).

ಎಂಎಸ್ ಧೋನಿ ಸಾರಥ್ಯದ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ (ಆರ್​ಪಿಎಸಜಿ), ಇನ್ನೂ ಹೆಸರಿಡದ ರಾಜ್​ಕೋಟ್ ಕೂಡ ಪಾಲ್ಗೊಳ್ಳಲಿವೆ. ಚೆನ್ನೈ ಸೂಪರ್ಕಿಂಗ್ಸ್, ರಾಜಸ್ಥಾನ ರಾಯಲ್ಸ್​ನ ಡ್ರಾಫ್ಟ್ ಆಗದ ಆಟಗಾರರಲ್ಲದೆ, ಇತರ 6 ಫ್ರಾಂಚೈಸಿಗಳು ಕೈಬಿಟ್ಟ 61 ಆಟಗಾರರೂ ಹರಾಜಿಗಿದ್ದಾರೆ. (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Over 700 cricketers have registered for the Indian Premier League (IPL) 2016 Players Auction to be held here on February 6.Rs 2 crore base price for Yuvraj Singh.
Please Wait while comments are loading...