ಟಾಸು ಗೆದ್ದವನೇ ಬಾಸು, ಕೊಹ್ಲಿ ಮಾಡಿದ ತಂತ್ರವೇನು?

Posted By:
Subscribe to Oneindia Kannada

ಪುಣೆ, ಏಪ್ರಿಲ್ 24: ಎಂಎಸ್ ಧೋನಿ ನೇತೃತ್ವದ ಪುಣೆ ತಂಡವನ್ನು ಕಟ್ಟಿ ಹಾಕಿದ ಖುಷಿಯಲ್ಲಿರುವ ಆರ್ ಸಿಬಿ ನಾಯಕ ಕೊಹ್ಲಿ ಅವರು ಭಾನುವಾರ ಮಹತ್ವ ನಡೆ ಇಡುವ ಸಾಧ್ಯತೆಯಿದೆ. ಐಪಿಎಲ್ 9ರಲ್ಲಿ ಟಾಸು ಗೆದ್ದವನೇ ಬಾಸು ಎಂಬ ಪರಿಸ್ಥಿತಿ ಇರುವಾಗ ಕೊಹ್ಲಿ ಅವರು ಟಾಸ್ ಗಾಗಿ ಹೊಸ 'ಬಾಸ್' ಕಳಿಸುವ ಸಾಧ್ಯತೆಯಿದೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಇದು ಹೇಗೆ ಸಾಧ್ಯ? ಆರ್ ಸಿಬಿ ನಾಯಕರಾಗಿ ಕೊಹ್ಲಿ ಅವರೇ ಟಾಸ್ ಗೆ ಹೋಗಬೇಕಲ್ಲವೇ? ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ, ಟಾಸ್ ಹಾಕಲು ತಂಡದ ಪ್ರಮುಖ ಆಟಗಾರರೊಬ್ಬರನ್ನು ಕಳಿಸುವ ಅಧಿಕಾರ ತಂಡದ ನಾಯಕನಿಗೆ ಇರುತ್ತದೆ. ಹೀಗಾಗಿ ಕೊಹ್ಲಿ ಅವರು ಟಾಸ್ ಗೆಲ್ಲಬಲ್ಲ 'ಲಕ್ಕಿ ಬಾಸ್' ರೊಬ್ಬರನ್ನು ಕಳಿಸಿದರೆ ಅಚ್ಚರಿ ಪಡಬೇಕಾಗಿಲ್ಲ.[ಗೆಲುವಿನ ಹಾದಿಗೆ ಮರಳಿದ ಆರ್‌ಸಿಬಿ, ಧೋನಿ ಪಡೆಗೆ ಸೋಲು]

IPL 2016: After 4 losses in a row, Virat Kohli to 'send someone else' for toss?

ಏಪ್ರಿಲ್ 22ರ ಪಂದ್ಯದಲ್ಲಿ ಕೂಡಾ ಕೊಹ್ಲಿ ಟಾಸ್ ಸೋತರು. ಈ ಮೂಲಕ ಸತತ ನಾಲ್ಕು ಬಾರಿ ಟಾಸ್ ಸೋತಿದ್ದರಿಂದ ಕೊಹ್ಲಿಗೆ ಈ ಹೊಸ ಐಡಿಯಾ ಬಂದಿದೆ. ಟಾಸ್ ಸೋತರೂ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ವಿರುದ್ಧ ಆರ್ ಸಿಬಿ 13 ರನ್ ಗಳ ಜಯ ದಾಖಲಿಸಿತು.[ ಮಗುವಿಗೆ 'ಬ್ಲಶ್' ಎಂದು ಹೆಸರಿಟ್ಟ ಕ್ರಿಸ್ ಗೇಲ್ ]

ಟಾಸ್ ಸೋತ ಬಳಿಕ ಕೊಹ್ಲಿ ಅವರೇ ಈ ಬಗ್ಗೆ ಸುಳಿವು ನೀಡಿದ್ದರು.'ಯಾಕೋ ನನಗೆ ಟಾಸ್ ಗೆಲ್ಲುವ ಅದೃಷ್ಟ ಇಲ್ಲ, ಸತತ 4 ಟಾಸ್ ಸೋತಿದ್ದೇನೆ. ಎಲ್ಲಾ ಚೇಸಿಂಗ್ ಮಾಡಿದ ತಂಡಗಳೇ ಗೆದ್ದಿವೆ. [ವಿರಾಟ್ ಕೊಹ್ಲಿಗೆ ದಂಡ]

ಟಾರ್ಗೆಟ್ ಚೇಸ್ ಮಾಡುವುದರಲ್ಲಿ ತಂಡಗಳು ಸ್ಮಾರ್ಟ್ ಆಗುತ್ತಿವೆ. ಬಹುಶಃ ಟಾಸ್ ಗೆಲ್ಲಲು ಬೇರೊಬ್ಬರನ್ನು ನಾನು ಕಳಿಸಬೇಕಾಗುತ್ತದೆ' ಎಂದಿದ್ದರು.[ಬದ್ರಿ ಔಟ್, ತಬ್ರೈಜ್ ಶಮ್ಸಿ ಇನ್]

ರಾಜ್ ಕೋಟ್ ನಲ್ಲಿ ಏಪ್ರಿಲ್ 24ರಂದು ಗುಜರಾತ್ ಲಯನ್ಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎದುರಿಸಲಿದೆ. ಟಾಸ್ ಹಾಕಲು ಯಾರು ಬರುತ್ತಾರೋ ಕಾದು ನೋಡಬೇಕಿದೆ. ಮುಂದಿನ ಪಂದ್ಯಕ್ಕೆ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಕೂಡಾ ಲಭ್ಯರಾಗುವ ಸಾಧ್ಯತೆಯಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Royal Challengers Bangalore (RCB) captain Virat Kohli is on a losing streak! Yes, when it comes to tosses in the Indian Premier League 2016 (IPL 9).
Please Wait while comments are loading...