ಸನ್ ರೈಸರ್ಸ್ ಮೇಲೆ ರಾಯಲ್ ಚಾಲೆಂಜರ್ಸ್ ಸವಾರಿ!

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 12: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಒಡ್ಡಿದ್ದ ಬೃಹತ್ ಮೊತ್ತದ ಚಾಲೆಂಜ್ ಗೆಲ್ಲಲು ಆಗದೆ ಸನ್ ರೈಸರ್ಸ್ ಹೈದರಾಬಾದ್ ತಂಡ ಸೋತು ಸುಣ್ಣವಾಗಿದೆ. ಮಂಗಳವಾರ ರಾತ್ರಿ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರನ್ ಮಳೆಯಲ್ಲಿ ಪ್ರೇಕ್ಷಕರು ಮಿಂದೆದ್ದು ಕುಣಿದಾಡಿದರು.[ಕೊಹ್ಲಿ ಹಾಗೂ ಜಾನ್ಸನ್ ವೈರತ್ವದ ರಹಸ್ಯ ಲೀಕ್!]

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ವಿರಾಟ್ ಕೊಹ್ಲಿ ಹಾಗೂ ಎಬಿ ಡಿ ವಿಲಿಯರ್ಸ್ ಭರ್ಜರಿ 157 ರನ್ (87 ಎಸೆತಗಳು) ಗಳ ಜೊತೆಯಾಟ, ಸರ್ಫರಾಜ್ ಚಿನಕುರಳಿ ಆಟದ ಮೂಲಕ ಆರ್ ಸಿಬಿ ಬೃಹತ್ ಮೊತ್ತ (227/4) ಪೇರಿಸಿತು. ಕ್ರಿಸ್ ಗೇಲ್ 1 ರನ್ ಗಳಿಸಿ ಔಟಾಗಿದ್ದು ಮರೆಯುವಂತೆ ಎಬಿಡಿ ಹಾಗೂ ಕೊಹ್ಲಿ ಬ್ಯಾಟಿಂಗ್ ಮಾಡಿದರು. [ಪಂದ್ಯದ ಸ್ಕೋರ್ ಕಾರ್ಡ್]

IPL 2016: AB de Villiers, Virat Kohli dazzle as RCB thrash SRH

ಎಬಿಡಿ 26 ಎಸೆತದಲ್ಲಿ ಅರ್ಧಶತಕ ಪೂರೈಸಿ ಅಂತಿಮವಾಗಿ 42 ಎಸೆತಗಳಲ್ಲಿ 82ರನ್ ಗಳಿಸಿ ಔಟಾದರು. ನಾಯಕ ಕೊಹ್ಲಿ 40 ಎಸೆತದಲ್ಲಿ 50 ರನ್ ಪೂರೈಸಿ ನಂತರ 51 ಎಸೆತಗಳಲ್ಲಿ 75ರನ್ ಗಳಿಸಿದರು.[ರಾಯಲ್ ಚಾಲೆಂಜರ್ಸ್ ಬೆಂಗಳೂರು #PlayBold ಜರ್ಸಿ]

ಎಬಿಡಿ 26 ಎಸೆತದಲ್ಲಿ ಅರ್ಧಶತಕ ಪೂರೈಸಿ ಅಂತಿಮವಾಗಿ 42 ಎಸೆತಗಳಲ್ಲಿ 82ರನ್ (42 ಎಸೆತ, 7X4 , 6 X6) ಗಳಿಸಿ ಔಟಾದರು. ನಾಯಕ ಕೊಹ್ಲಿ 40 ಎಸೆತದಲ್ಲಿ 50 ರನ್ ಪೂರೈಸಿ ನಂತರ 51 ಎಸೆತಗಳಲ್ಲಿ 75ರನ್ (51 ಎಸೆತ, 7X4, 3X6) ಗಳಿಸಿದರು. ಸರ್ಫ್ರಾಜ್ ಖಾನ್ಅಜೇಯ 35ರನ್(10 ಎಸೆತ, 5‍X4, 2x6).[ಭೋಗ್ಲೆ ಹೊರಹಾಕಲು ಯಾರು ಕಾರಣ?]

-
ಸನ್ ರೈಸರ್ಸ್ ಮೇಲೆ ರಾಯಲ್ ಚಾಲೆಂಜರ್ಸ್ ಸವಾರಿ!

ಸನ್ ರೈಸರ್ಸ್ ಮೇಲೆ ರಾಯಲ್ ಚಾಲೆಂಜರ್ಸ್ ಸವಾರಿ!

-
-
-
-
-
-
-

ನಾಯಕ ಡೇವಿಡ್ ವಾರ್ನರ್ 25ಎಸೆತಗಳಲ್ಲಿ 5 ಸಿಕ್ಸರ್, 4 ಬೌಂಡರಿ ಸಿಡಿಸಿ 58ರನ್ ಗಳಿಸಿ ಅಬ್ಬರಿಸಿದರು. ಉಳಿದಂತೆ ಕೊನೆಯಲ್ಲಿ ಆಶೀಶ್ ರೆಡ್ಡಿ 18 ಎಸೆತಗಳಲ್ಲಿ 32ರನ್ ಗಳಿಸಿ ಪ್ರತಿರೋಧ ಒಡ್ಡಿದರು. ಉಳಿದಂತೆ, ಸನ್​ರೈಸರ್ಸ್ ಹೈದರಾಬಾದ್ ತಂಡ 6 ವಿಕೆಟ್​ಗೆ 182 ರನ್ ಗಳಿಸಿ ಸೊಲೊಪ್ಪಿಕೊಂಡಿತು.[ಐಪಿಎಲ್ ವೈಯಕ್ತಿಕ ದಾಖಲೆಗಳು 2008-2015]

200ಕ್ಕಿಂತ ಅಧಿಕ ಮೊತ್ತ : ಆರ್​ಸಿಬಿ ತಂಡ ಐಪಿಎಲ್​ನಲ್ಲಿ 9ನೇ ಬಾರಿ ಈ ಸಾಧನೆ ಮಾಡಿದೆ. ಆದರೆ, ಪಟ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅಗ್ರಸ್ಥಾನದಲ್ಲಿದೆ. ಸಿಎಸ್ ಕೆ 12 ಬಾರಿ 200ರನ್ ಗಡಿ ದಾಟಿದೆ. ಉಳಿದಂತೆ, ಪಂಜಾಬ್ (10), ರಾಜಸ್ಥಾನ ರಾಯಲ್ಸ್, ಮುಂಬೈ (6), ಕೆಕೆಆರ್ (4) ಹಾಗೂ ಡೆಲ್ಲಿ, ಸನ್​ರೈಸರ್ಸ್ (2) ಹಾಗೂ ಡೆಕ್ಕನ್ ಚಾರ್ಜರ್ಸ್ ಒಮ್ಮೆ ಈ ಸಾಧನೆ ಮಾಡಿವೆ.[ವಿಶ್ವ ದಾಖಲೆ ಸ್ಥಾಪಿಸಿದ ವೇಗಿ ಡ್ವಾಯ್ನೆ ಬ್ರಾವೋ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Virat Kohli and AB de Villiers shared a breathtaking 157-run stand off 87 balls as Royal Challengers Bangalore (RCB) secured a comfortable 45-run win over Sunrisers Hyderabad (SRH) in their opening match of the Indian Premier League 2016 (IPL 9) in Bengaluru on Tuesday night (April 12).
Please Wait while comments are loading...