ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎಬಿಡಿ ಅಬ್ಬರ, ವಾಹ್ ಅಬ್ದುಲ್ಲಾ! ಆರ್ ಸಿಬಿ ಫೈನಲಿಗೆ ಎಂಟ್ರಿ!

By Mahesh

ಬೆಂಗಳೂರು, ಮೇ 24 : ಕಿತ್ತಲೆ ಟೋಪಿವಾಲ, 'ಬ್ಯಾಟ್ ಮನ್' ವಿರಾಟ್ ಕೊಹ್ಲಿ ಡಕ್ ಔಟ್, ಕ್ರಿಸ್ ಗೇಲ್, ಕೆಎಲ್ ರಾಹುಲ್ ಎಲ್ಲಾ ಪೆವಿಲಿಯನ್ ಪೆರೇಡ್. . . ಮುಗಿಯಿತು ಆರ್ ಸಿಬಿ ಕತೆ ಎನ್ನುವಷ್ಟರಲ್ಲೇ ಫೀನಿಕ್ಸ್ ಹಕ್ಕಿಯಂತೆ ಬೆಂಗಳೂರಿನ ತಂಡ ಮೇಲಕ್ಕೆದ್ದು ಅಂತಿಮ ಹಣಾಹಣಿಯತ್ತ ಹಾರಿದೆ. []

ಗುಜರಾತ್ ಲಯನ್ಸ್ ನೀಡಿದ್ದ ಗುರಿಯನ್ನು ಮೆಟ್ಟಿ ನಿಲ್ಲಲು ಎಬಿ ಡಿ ವಿಲಿಯರ್ಸ್ ಎಂಬ 'ಸೂಪರ್ ಮ್ಯಾನ್' ಹಾಗೂ ಇಕ್ಬಾಲ್ ಅಬ್ದುಲ್ಲಾ ಬ್ಯಾಟಿಂಗ್ ಪ್ಯಾಕೇಜ್ ಕಾರಣವಾಗಿದೆ. ಆರ್ ಸಿಬಿ ಐಪಿಎಲ್ 9 ರ ಫೈನಲ್(ಮೇ 29 ರಂದು ಬೆಂಗಳೂರಿನಲ್ಲಿ) ತಲುಪಿದ ಮೊದಲ ತಂಡವೆನಿಸಿ ಜಯಭೇರಿ ಬಾರಿಸಿದೆ.

IPL 2016 : AB De villiers's blistering knock help RCB to beat GL to enter Finals


ಮಂಗಳವಾರ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗೆಲ್ಲಲು ಬೇಕಿದ್ದ 159 ರನ್ ಮೊತ್ತವನ್ನು ಎಬಿ ಡಿ ವಿಲಿಯರ್ಸ್ ಅವರ ಅಜೇಯ 79 ರನ್(47 ಎಸೆತಗಳು) ನೆರವಿನಿಂದ 18.2 ಓವರ್ ಗಳಲ್ಲಿ ಬೆನ್ನಟ್ಟಿದೆ. [ಫೈನಲಿಗೆ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಶುರು]

68ಕ್ಕೆ 6 ವಿಕೆಟ್ ಕಳೆದುಕೊಂಡಿದ್ದ ಆರ್ ಸಿಬಿ ಹೊಸಕಿ ಹಾಕಲು ಯತ್ನಿಸಿದ ಗುಜರಾತಿನ ಸಿಂಹಗಳು ಕೊನೆಯಲ್ಲಿ ಬಾಲ ಮುದುರಿಕೊಳ್ಳುವಂತೆ ಎಬಿಡಿ ಬಾರಿಸಿದ್ದಾರೆ. ಸೋಲಿನ ನಡುವೆಯೂ ಧವಳ್ ಕುಲಕರ್ಣಿ 14 ರನ್ನಿತ್ತು 4 ವಿಕೆಟ್ ಕಿತ್ತು ಅದ್ಭುತ ಪ್ರದರ್ಶನ ನೀಡಿದ್ದನ್ನು ಮರೆಯುವಂತಿಲ್ಲ.


ಎಬಿಡಿ ಹಾಗೂ ಅಬ್ದುಲ್ಲಾ ಬೊಂಬಾಟ: ಕೊಹ್ಲಿ, ರಾಹುಲ್ ಶೂನ್ಯ ಸುತ್ತಿದರೆ, ಗೇಲ್ 9 ರನ್ ಗಳಿಸಿ ಪೆವಿಲಿಯನ್ ಸೇರಿದರು, ವಾಟ್ಸನ್ 1 ರನ್ ಗೆ ಜಡೇಜಗೆ ವಿಕೆಟ್ ಒಪ್ಪಿಸಿದರೆ, ಸಚಿನ್ ಬೇಬಿ ಕೂಡಾ ಶೂನ್ಯ ಸುತ್ತಿದಾಗ ಆರ್ ಸಿಬಿ ಫ್ಯಾನ್ಸ್ ಮುಖ ನೋಡುವಂತಿರಲಿಲ್ಲ.

ಎಬಿಡಿ ಜವಾಬ್ದಾರಿಯುತ ಬ್ಯಾಟಿಂಗ್ ಗೆ ಮೊದಲಿಗೆ ಸ್ಟುವರ್ಟ್ ಬಿನ್ನಿ 15 ಎಸೆತಗಳಲ್ಲಿ 21 ರನ್ ಗಳಿಸಿ ಸಾಥ್ ನೀಡಿದರೆ, ಅಂತಿಮ ಹಂತದ ತನಕ ಸ್ಪಿನ್ನರ್ ಇಕ್ಬಾಲ್ ಅಬ್ದುಲ್ಲಾ 25 ಎಸೆತಗಳಲ್ಲಿ 33 ರನ್ (3x4, 1X6) ಗಳಿಸಿ ಜೊತೆಯಾದರು.

ಗುಜರಾತ್ ಇನ್ನಿಂಗ್ಸ್: ಮೊದಲು ಬ್ಯಾಟಿಂಗ್ ಅವಕಾಶ ಸಿಕ್ಕರೂ ಲಯನ್ಸ್ ಘರ್ಜಿಸಲಿಲ್ಲ. ಅಬ್ದುಲ್ಲಾ ಆರಂಭಿಕರನ್ನು ಪೆವಿಲಿಯನ್ ಗೆ ಕಳಿಸಿದಾಗ ತಂಡದ ಮೊತ್ತ 6 ರನ್ ದಾಟಿರಲಿಲ್ಲ.

ನಾಯಕ ಸುರೇಶ್ ರೈನಾ 1 ರನ್ ಗಳಿಸಿ ಔಟಾದಾಗ ಸ್ಕೋರ್ ಕೇವಲ 9 ರನ್. ನಂತರ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಹಾಗೂ ಸ್ಮಿತ್ ಜೊತೆಯಾಟ ಲಯನ್ಸ್ ಗೆ ಬಲ ತಂದಿತು.

26 ರನ್ ಗಳಿಸಿ ಕಾರ್ತಿಕ್ ಔಟಾದ ಮೇಲೆ 94 ರನ್ನಿಗೆ 4 ವಿಕೆಟ್ ಕಳೆದುಕೊಂಡ ಲಯನ್ಸ್ ಗೆ ಡ್ವಾಯ್ನೆ ಸ್ಮಿತ್ 73 ರನ್ (41 ಎಸೆತಗಳು, 5x4,6x6) ಗಳಿಸಿ ಆಸರೆಯಾದರು.

20 ಓವರ್ ಗಳಲ್ಲಿ 158 ರನ್ ಗಳಿಸಿತು. ಆರ್ ಸಿಬಿ ಪರ ಅಬ್ದುಲ್ಲಾ, ಜೋರ್ಡನ್ ತಲಾ 2 ವಿಕೆಟ್, ಚಾಹಲ್ 1 ವಿಕೆಟ್ ಪಡೆದರೆ, 4 ವಿಕೆಟ್ ಕಿತ್ತ ಶೇನ್ ವಾಟ್ಸನ್ ಪರ್ಪಲ್ ಕ್ಯಾಪ್ ಧರಿಸಿದರು.(ಒನ್ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X