ಚಿತ್ರಗಳು: ಫಿಂಚ್ ಭರ್ಜರಿ ಆಟ, ಲಯನ್ಸ್ ಗೆ ಹ್ಯಾಟ್ರಿಕ್ ಜಯ

Posted By:
Subscribe to Oneindia Kannada

ಮುಂಬೈ, ಏಪ್ರಿಲ್ 17: ಮುಂಬೈ ಇಂಡಿಯನ್ಸ್ ತಂಡದ ಕೈಯಿಂದ ಗುಜರಾತ್ ಲಯನ್ಸ್ ತಂಡ ಗೆಲುವನ್ನು ಕಸಿದುಕೊಂಡಿದ್ದಾರೆ. ಈ ಮೂಲಕ ಸುರೇಶ್ ರೈನಾ ನಾಯಕತ್ವದ ತಂಡ ಚೊಚ್ಚಲ ಐಪಿಎಲ್ ನಲ್ಲೇ ಸತತ ಮೂರು ಗೆಲುವು ಸಾಧಿಸಿದೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಶನಿವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ರನ್ ಚೇಸಿಂಗ್ ನಲ್ಲಿ ಕೊನೆಕ್ಷಣದಲ್ಲಿ ಸ್ವಲ್ಪ್ ತಡವರಿಸಿದರೂ ರೋಚಕ ಜಯ ಸಾಧಿಸಿದೆ. ಸದ್ಯಕ್ಕೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದೆ.[ಪಂದ್ಯದ ಸ್ಕೊರ್ ಕಾರ್ಡ್]

ಆರಂಭಿಕ ಬ್ಯಾಟ್ಸ್​ಮನ್ ಆರೋನ್ ಫಿಂಚ್ ಅಜೇಯ 67ರನ್(54 ಎಸೆತಗಳು, 7X4, 1X6) ಗಳಿಸಿ ಗೆಲುವಿನ ರೂವಾರಿ ಎನಿಸಿದರು. ಐಪಿಎಲ್-9ರಲ್ಲಿ ಫಿಂಚ್ ಅವರು ಸತತ 3ನೇ ಅರ್ಧಶತಕ ಬಾರಿಸಿ ಗಮನ ಸೆಳೆದಿದ್ದಾರೆ.

IPL 2016: Aaron Finch stars again as Gujarat Lions complete hat-trick of wins

ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಮುಂಬೈ ತಂಡ 8 ವಿಕೆಟ್​ಗೆ 143 ರನ್ ಗಳಿಸಿತು. ಗುಜರಾತ್ ಲಯನ್ಸ್ ತಂಡ ಪಂದ್ಯದ ಕೊನೇ ಎಸೆತದಲ್ಲಿ ಗೆಲುವು ಸಾಧಿಸಿತು. ಫಿಂಚ್ ಅವರು ಬೌಂಡರಿ ಬಾರಿಸಿ ಜಯ ತಂದಿತ್ತರು. 7 ವಿಕೆಟ್​ಗೆ 147 ರನ್ ಗಳಿಸಿ ಗೆಲುವು ದಾಖಲಿಸಿತು.

ಮುಂಬೈ ತಂಡದ ಬ್ಯಾಟ್ಸ್ ಮನ್ ಗಳನ್ನು ಧವಳ್ ಕುಲಕರ್ಣಿ(19ಕ್ಕೆ 2) ಮತ್ತು ಸ್ಪಿನ್ನರ್ ಪ್ರವೀಣ್ ತಂಬೆ (12ಕ್ಕೆ 2) ಕಟ್ಟಿ ಹಾಕಿದರು. ರೋಹಿತ್ ಶರ್ಮ (7), ಹಾರ್ದಿಕ್ ಪಾಂಡ್ಯ (2), ಜೋಸ್ ಬಟ್ಲರ್ (16) ಮತ್ತು ಕೈರಾನ್ ಪೊಲ್ಲಾರ್ಡ್ (1) ನಿರಾಶೆ ಮೂಡಿಸಿದರು.

ಆರಂಭಿಕ ಆಟಗಾರ ಪಾರ್ಥಿವ್ ಪಟೇಲ್ 34 ರನ್ (29 ಎಸೆತಗಳು, 2X4, 2X6 ) ಅಂಬಟಿ ರಾಯುಡು (20) ಹಾಗೂ ಹಾರ್ದಿಕ್ ಪಾಂಡ್ಯ ಸೋದರ ಇದೇ ಮೊದಲ ಬಾರಿಗೆ ಐಪಿಎಲ್ ಆಡುತ್ತಿರುವ ಕೃನಾಲ್ ಪಾಂಡ್ಯ ಅಜೇಯ 20ರನ್(11ಎಸೆತ ಗಳು, 3 X4), ವೇಗಿ ಟಿಮ್ ಸೌಥಿ 25 ರನ್(11 ಎಸೆತಗಳು, 1X4, 2X6) ಆಟ ಮುಂಬೈಗೆ ನೆರವಾಯಿತು.

-
-
-
-
-
-
-
-
-
-
-
ಫಿಂಚ್ ಭರ್ಜರಿ ಆಟ, ಲಯನ್ಸ್ ಗೆ ಹ್ಯಾಟ್ರಿಕ್ ಜಯ

ಫಿಂಚ್ ಭರ್ಜರಿ ಆಟ, ಲಯನ್ಸ್ ಗೆ ಹ್ಯಾಟ್ರಿಕ್ ಜಯ

ರನ್ ಚೇಸ್ ಸುಲಭವಾಗಿರಲಿಲ್ಲ: ಒಂದು ಕಡೆ ನಿರಂತರವಾಗಿ ವಿಕೆಟ್ ಗಳು ಉದುರುತ್ತಿದ್ದರೂ ನೆಲಕಚ್ಚಿ ನಿಂತ ಅರೋನ್ ಫಿಂಚ್ ಪಂದ್ಯಶ್ರೇಷ್ಠ ಪ್ರದರ್ಶನ ನೀಡಿದರು. ಒಂದು ಹಂತದಲ್ಲಿ ಮೆಕಲಮ್, ಬ್ರಾವೋ ಸೇರಿದಂತೆ ಪ್ರಮುಖ ಆಟಗಾರರನ್ನು ಕಳೆದುಕೊಂಡು ಗುಜರಾತ್ 109 ಸ್ಕೋರಿಗೆ 5 ವಿಕೆಟ್ ಕಳೆದು ಕೊಂಡು ಕಷ್ಟಪಡುತ್ತಿತ್ತು.

ಕೊನೆ 2 ಓವರ್​ಗಳಲ್ಲಿ 13 ರನ್ ಬೇಕಿತ್ತು. ಆದರೆ 19ನೇ ಓವರ್ ಎಸೆದ ಮಿಚೆಲ್ ಮೆಕ್ಲಿನಘನ್ ಕೇವಲ 2 ರನ್ ನೀಡಿ 2 ವಿಕೆಟ್ ಕಬಳಿಸಿ, ಗುಜರಾತಿಗೆ ಆತಂಕ ಮೂಡಿಸಿದರು. ಆದರೆ, ಬೂಮ್ರಾ ಎಸೆದ ಕೊನೇ ಓವರ್​ನಲ್ಲಿ ಲಯನ್ಸ್ ಗೆಲುವಿಗೆ 11 ರನ್ ಗುರಿಯನ್ನು ದಾಟಿ ಗೆಲುವಿನ ನಗೆ ಬೀರಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Gujarat Lions defeated Mumbai Indians by three wickets in an Indian Premier League 2016 (IPL 9) match at the Wankhede Stadium here on Saturday night (April 16).
Please Wait while comments are loading...