ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಸ್ ಗೇಲ್ ಪಂದ್ಯದಿಂದ ಹೊರಗುಳಿದ ರಹಸ್ಯ ಬಯಲು!

By Mahesh

ಬೆಂಗಳೂರು, ಏ.23: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಮಹತ್ವದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಏಕೆ ಆಡಲಿಲ್ಲ? ಗೇಲ್ ಅವರಿಗೆ ಆರೋಗ್ಯ ಸರಿ ಇರಲಿಲ್ಲವೇ? ಅಥವಾ ಕಳಪೆ ಬ್ಯಾಟಿಂಗ್ ನಿಂದಾಗಿ ಅವರನ್ನು ತಂಡದಿಂದ ಕೈಬಿಡಲಾಯಿತೇ? ಎಂಬ ಪ್ರಶ್ನೆಗಳನ್ನು ಆರ್ ಸಿಬಿ ಫ್ಯಾನ್ಸ್ ಕೇಳುತ್ತಿದ್ದಾರೆ.

ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 27 ರನ್ ಗಳ ಸೋಲು ಕಂಡಿದೆ. ತವರು ನೆಲದಲ್ಲೇ ಸತತ ಮೂರು ಸೋಲು ಕಂಡ ಆರ್ ಸಿಬಿಗೆ ಗೇಲ್ ಬಲ ಇಲ್ಲದಿದ್ದದ್ದು ಮಾರಕವಾಗಿ ಪರಿಣಮಿಸಿದೆ. [ಐಪಿಎಲ್ : ಟಾಪ್ ವೈಯಕ್ತಿಕ ರನ್ ಗಳಿಕೆ ವೀರ ಗೇಲ್]

[47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್] | [8 ತಂಡಗಳ ನೂರೆಂಟು ಆಟಗಾರರು] | [ಐಪಿಎಲ್ 2015: ಫ್ಯಾನ್ಸಿಗೆ ಗೈಡ್]

ಐಪಿಎಲ್ 8ರ 20ನೇ ಪಂದ್ಯದಲ್ಲಿ ಎಂದಿನಂತೆ ಆರ್ ಸಿಬಿ ತನ್ನ ಬ್ಯಾಟಿಂಗ್ ಶಕ್ತಿ ಪ್ರದರ್ಶನ ಮಾಡಿದೆ ಅದರೆ, ಬೌಲಿಂಗ್ ನಲ್ಲಿ ಮತ್ತೊಮ್ಮೆ ಕಳಪೆ ಪ್ರದರ್ಶನ ತೋರಿದೆ. ಅದರೆ, ಚೆನ್ನೈ ವಿರುದ್ಧ ಚೇಸಿಂಗ್ ಮಾಡುವ ಮನಸ್ಥಿತಿಯಲ್ಲೇ ಕಣಕ್ಕಿಳಿದ ಬೆಂಗಳೂರು ತಂಡಕ್ಕೆ ಗೇಲ್ ಬ್ಯಾಟಿಂಗ್ ಬಲವಿರಲಿಲ್ಲ. []

ಗೇಲ್ ಬದಲಿಗೆ ಸ್ಟಾರ್ಕ್: ಇದೆಂಥ ಲೆಕ್ಕಾಚಾರ. ಮುಂಬೈ ವಿರುದ್ಧ ಉತ್ತಮ ಪ್ರದರ್ಶನ ತೋರದ ಕ್ರಿಸ್ ಗೇಲ್ ಬದಲಿಗೆ ಮತ್ತೊಬ್ಬ ವಿದೇಶಿ ಆಟಗಾರ ಮಿಚೆಲ್ ಸ್ಟಾರ್ಕ್ ರನ್ನು ಆಡುವ XI ನಲ್ಲಿ ಸೇರಿಸಿಕೊಳ್ಳಲಾಯಿತು.

ಆದರೆ, ದಕ್ಷಿಣ ಆಫ್ರಿಕಾದ ಬ್ಯಾಟ್ಸ್ ಮನ್ ರಿಲೇ ರೋಸೋ ಬದಲಿಗೆ ಗೇಲ್ ಅವರನ್ನು ಆಡಿಸಬಹುದಿತ್ತು. ರೋಸೋ ಸಿಕ್ಸ್ ಎತ್ತಿದ್ದು ಬಿಟ್ಟರೆ 6 ಓವರ್ ನಂತರ ಕಾಣಿಸಿಕೊಳ್ಳಲಿಲ್ಲ.

ಅದರೆ, ಎಲ್ಲರನ್ನು ಕಾಡುವ ಪ್ರಶ್ನೆಗೆ ಅಥವಾ ರಹಸ್ಯಕ್ಕೆ ಗೇಲ್ ಪರವಾಗಿ ಸಹ ಆಟಗಾರ ಇಕ್ಬಾಲ್ ಉತ್ತರಿಸಿದ್ದು, ಗೇಲ್ ಅವರೇ ಸ್ವತಃ ಪಂದ್ಯದಲ್ಲಿ ಆಡದಿರಲು ನಿರ್ಧರಿಸಿದರು ಎಂದು ಹೇಳಿದ್ದಾರೆ.

ಅಚ್ಚರಿಗೊಂಡ ಕಾಮೆಂಟೆಟರ್ಸ್

ಅಚ್ಚರಿಗೊಂಡ ಕಾಮೆಂಟೆಟರ್ಸ್

ಟಿವಿ ಕಾಮೆಂಟೆಟರ್ಸ್, ಫ್ಯಾನ್ಸ್ ಅಲ್ಲದೆ ಟ್ವಿಟ್ಟರ್ ನಲ್ಲಿ ಗೇಲ್ ಇಲ್ಲದ ಆರ್ ಸಿಬಿ ನೋಡುವ ಮನಸ್ಸಿಲ್ಲ ಎಂದು ಬಿಟ್ಟರು. ಗೇಲ್ ಅವರು ಫಿಟ್ ಆಗಿದ್ದು ಕೂಡಾ ತಂಡದಿಂದ ಹೊರಕ್ಕೆ ಇಟ್ಟಿದ್ದು ಏಕೆ ಎಂದು ಕಾಮೆಂಟೆಟರ್ ಪ್ರಶ್ನಿಸಿದರು.

ಇದೇನು ಶಿಕ್ಷೆಯೇ? ಅಥವಾ ಮೂರ್ಖತನವೇ?

ಇದೇನು ಶಿಕ್ಷೆಯೇ? ಅಥವಾ ಮೂರ್ಖತನವೇ?

ಮುಂಬೈ ವಿರುದ್ಧ 24 ಎಸೆತಗಳಲ್ಲಿ 10ರನ್ ಮಾತ್ರ ಗಳಿಸಿ ಔಟಾದ ಗೇಲ್ ಗೆ ಈ ರೀತಿ ಶಿಕ್ಷೆ ನೀಡುವುದೇ? ಅಥವಾ ಇದು ಮೂರ್ಖತನದ ನಿರ್ಣಯವೇ? ಎಂಬ ಪ್ರಶ್ನೆಗೆ ವಿಜಯ ಮಲ್ಯ ಆಗಲಿ, ವಿರಾಟ್ ಕೊಹ್ಲಿಯಾಗಲಿ ಎಂದೂ ಉತ್ತರಿಸುವ ಸಾಧ್ಯತೆಯಿಲ್ಲ.

ಕ್ರಿಕೆಟರ್ ರವಿ ಬೋಪಾರಗೂ ಅಚ್ಚರಿ

ಕ್ರಿಕೆಟರ್ ರವಿ ಬೋಪಾರಗೂ ಅಚ್ಚರಿ ಮೂಡಿಸಿದ ಆರ್ ಸಿಬಿ ನಿರ್ಣಯ.

ಗೇಲ್ ರಿಂದ ಕ್ರಿಕೆಟ್ ಟ್ವೀಟ್ ಇಲ್ಲ

ಮ್ಯಾಡ್ರಿಡ್ ತಂಡದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ, ಹೆರ್ನಾಂಡಿಸ್ ಫುಟ್ಬಾಲ್ ಆಟದ ಬಗ್ಗೆ ಟ್ವೀಟ್ ಮಾಡಿದ್ದಾರೆ. ಪಾರ್ಟಿ ಮಸ್ತಿ ಮೋಜು, ಸಂಗೀತ ಬಿಟ್ಟರೆ ಕ್ರಿಕೆಟ್ ಬಗ್ಗೆ ಟ್ವೀಟ್ ಮಾಡುವ ಗೇಲ್ ನಿನ್ನೆ ಪಂದ್ಯದ ಬಗ್ಗೆ ಒಂದೂ ಟ್ವೀಟ್ ಮಾಡಿಲ್ಲ.

ಸಿದ್ ಮಲ್ಯ ಮಾಡಿದ ಟ್ವೀಟ್ ಹೀಗಿತ್ತು

ತಂಡದ ಮಾಲೀಕರಲ್ಲಿ ಒಬ್ಬರಾದ ಸಿದಾರ್ಥ ಮಲ್ಯ ಮಾಡಿದ ಟ್ವೀಟ್ ಹೀಗಿತ್ತು.. ಬ್ಯಾಟಿಂಗ್ ಬಗ್ಗೆ ಮಾತೇ ಇಲ್ಲ. ನೆಹ್ರಾ ಬೌಲಿಂಗ್ ಸೂಪರ್ ಅಂತೆ!

Story first published: Wednesday, January 3, 2018, 10:02 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X