ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ : ಮಿಸ್ಡ್ ಕಾಲ್ ಕೊಡಿ ಅಪ್ಡೇಟ್ ಪಡೆಯಿರಿ

By Mahesh

ಬೆಂಗಳೂರು, ಏ.14: ಇಂಡಿಯನ್ ಪ್ರಿಮಿಯರ್ ಲೀಗ್ 8 ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಐಪಿಎಲ್ ಹವಾ ಶುರುವಾಗಿದ್ದು, ಪ್ರತಿಕ್ಷಣದ ಅಪ್ಡೇಟ್ ಗಾಗಿ ಅಭಿಮಾನಿಗಳು ಹಾತೊರೆಯುತ್ತಿದ್ದಾರೆ. ಈ ಸಂದರ್ಭದಲ್ಲಿ ಟ್ವಿಟ್ಟರ್ ಈಗಾಗಲೇ ನೇರ ಅಪ್ಡೇಟ್ ಲಿಂಕ್ ನೀಡುತ್ತಿದೆ. ಜೊತೆಗೆ ಇಂಟರ್ನೆಟ್ ಕನೆಕ್ಷನ್ ಇಲ್ಲದೆಯೇ ಪಂದ್ಯದ ಅಪ್ಡೇಟ್ ಪಡೆಯುವ ಹೊಸ ವಿಧಾನಕ್ಕೆ ನಾಂದಿ ಹಾಡಲಾಗಿದೆ.

ಅಭಿಮಾನಿಗಳಿಗೆ ಮನರಂಜನೆ ನೀಡುವುದೇ ನಮ್ಮ ಉದ್ದೇಶ, ಐಪಿಎಲ್ 8 ವೀಕ್ಷಣೆ, ಅಪ್ಡೇಟ್ ಇನ್ನಷ್ಟು ಉತ್ತಮಗೊಳಿಸಲು ಮೈಕ್ರೋಬ್ಲಾಗಿಂಗ್ ತಾಣ ಟ್ವಿಟ್ಟರ್ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಇಂಟರ್ನೆಟ್ ಸಂಪರ್ಕವಿಲ್ಲದಿದ್ದರೂ ಮ್ಯಾಚ್ ಅಪ್ಡೇಟ್ ಪಡೆಯುವ ವ್ಯವಸ್ಥೆ ಮಾಡಲಾಗಿದೆ ಎಂದು ಐಪಿಎಲ್ ನಿರ್ವಹಣಾ ಸಮಿತಿ ಚೇರ್ಮನ್ ರಾಜೀವ್ ಶುಕ್ಲಾ ಹೇಳಿದ್ದಾರೆ.

[47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್] | [8 ತಂಡಗಳ ನೂರೆಂಟು ಆಟಗಾರರು] | [ಐಪಿಎಲ್ 2015: ಫ್ಯಾನ್ಸಿಗೆ ಗೈಡ್]

ಕಳೆದ ಮೂರು ಸೀಸನ್ ಗಳಲ್ಲಿ ಟ್ವಿಟ್ಟರ್ ಮೂಲಕ ಫ್ಯಾನ್ ಅಪ್ಡೇಟ್ ಪಡೆಯುವುದು ಹೆಚ್ಚಾಗುತ್ತಿದೆ. ಪ್ರತಿ ಪಂದ್ಯಕ್ಕೂ ಹಾಗೂ ಪ್ರತಿ ತಂಡಕ್ಕೂ ಹ್ಯಾಶ್ ಟ್ಯಾಗ್ ನೀಡಲಾಗುತ್ತದೆ. ಈ ಮೂಲಕ ಪಂದ್ಯದ ಆಗು ಹೋಗುಗಳನ್ನು ರಿಯಲ್ ಟೈಮ್ ನಲ್ಲಿ ಪಡೆದುಕೊಳ್ಳಬಹುದು. [ಆನ್ಲೈನ್ ಟಿಕೆಟ್ ಖರೀದಿ ಎಲ್ಲಿ? ಹೇಗೆ?]

ಅಧಿಕೃತ ಹ್ಯಾಶ್ ಟ್ಯಾಗ್: #IPL, #CSK, #DD, #KKR, #KXIP, #MI, #RCB, #RR and #SRH.

IPL 2015: New features on Twitter unveiled; give missed call and get match updates

ಮಿಸ್ಡ್ ಕಾಲ್ : ಟ್ವಿಟ್ಟರ್ ಖಾತೆ ಜೊತೆ ಮಿಸ್ಡ್ ಕಾಲ್ ಅಪ್ಡೇಟ್ ಪಡೆಯುವ ಅವಕಾಶ ನೀಡಲಾಗಿದೆ. 011 3008 2008 ಸಂಖ್ಯೆಗೆ ಮಿಸ್ಡ್ ಕಾಲ್ ನೀಡಿ ಪಂದ್ಯದ ಅಪ್ಡೇಟ್ಸ್ ಕಾಲ ಕಾಲಕ್ಕೆ ಪಡೆಯಬಹುದಾಗಿದೆ. ದಿನವೊಂದಕ್ಕೆ 6 ಅಪ್ಡೇಟ್ ಗಳು ಸಿಗಲಿವೆ. ಈ ಸೇವೆ ಉಚಿತವಾಗಿದೆ. [ಯಾವ ದೇಶದಲ್ಲಿ ಯಾವ ಚಾನೆಲ್ ನಲ್ಲಿ ಪ್ರಸಾರ ]

ವಿಶೇಷ ಪುಟ: ಐಪಿಎಲ್ ಗಾಗಿ ಟ್ವಿಟ್ಟರ್ ವಿಶೇಷ ಟೈಮ್ ಲೈನ್ ಪುಟ ತೆರೆದಿದೆ. ಐಓಎಸ್ ಹಾಗೂ ಆಂಡ್ರಾಯ್ಡ್ ಆಧಾರಿತ ಮೊಬೈಲ್ ಫೋನ್ ಗಳಲ್ಲೂ ಇದು ಲಭ್ಯ. #TwitterMirror ಮೂಲಕ ಫೋಟೊ ಸಂದೇಶಗಳನ್ನು ಕಳಿಸಲು #KXIPvRR ಭೇಕಾದ ಪಂದ್ಯದ ಅಪ್ಡೇಟ್ ಪಡೆಯಲು ಕೂಡಾ ಅವಕಾಶವಿರುತ್ತದೆ. (ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:02 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X