ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸೌರಶಕ್ತಿ ಮೇಲ್ಛಾವಣಿ ಬಲ

By Mahesh

ಬೆಂಗಳೂರು, ಏ.15: ಇಂಡಿಯನ್ ಪ್ರಿಮಿಯರ್ ಲೀಗ್ 8ನೇ ಆವೃತ್ತಿ ಜಾರಿಯಲ್ಲಿರುವಾಗಲೇ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಹೊಸ ವಿಕ್ರಮವನ್ನು ಸಾಧಿಸಿದೆ. ಎಂ. ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸೌರಫಲಕಗಳ ಮೇಲ್ಛಾವಣಿ ಹೊದಿಸುವ ಮೂಲಕ 'ಗೋ ಗ್ರೀನ್' ಅಭಿಯಾನದಲ್ಲಿ ವಿಶ್ವಕ್ಕೆ ಮಾದರಿಯಾಗಿದೆ.

ಇಂಧನ ಸಚಿವ ಡಿಕೆ ಶಿವಕುಮಾರ್ ಅವರು ಚಿನ್ನಸ್ವಾಮಿ ಕ್ರೀಡಾಂಗಣ ಈ ಸೌರಶಕ್ತಿ ರೂಫ್ ಟಾಪ್ ಬುಧವಾರ ಮಧ್ಯಾಹ್ನ ಉದ್ಘಾಟಿಸಿದರು. ಸ್ಟೇಡಿಯಂಗೆ ಬೇಕಾದ ಇಂಧನ ಶಕ್ತಿಯ ಶೇ 40ರಷ್ಟು ಈ ರೂಫ್ ಟಾಪ್ ನಿಂದಲೇ ಸಿಗಲಿದೆ.

[47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್] | [8 ತಂಡಗಳ ನೂರೆಂಟು ಆಟಗಾರರು] | [ಐಪಿಎಲ್ 2015: ಫ್ಯಾನ್ಸಿಗೆ ಗೈಡ್]

ಚಿನ್ನಸ್ವಾಮಿ ಕ್ರೀಡಾಂಗಣದ ರೂಫ್ ಟಾಪ್ ನಲ್ಲಿ 400 kW ಸಾಮರ್ಥ್ಯದ ಸೌರಶಕ್ತಿ ಫಲಕಗಳನ್ನು ಅಳವಡಿಸಲಾಗಿದೆ. ಇದನ್ನು 11 ಕೆವಿ ಸಬ್ ಸ್ಟೇಷನ್ ಗೆ ಕನೆಕ್ಟ್ ಮಾಡಲಾಗಿದ್ದು, ಇನ್ಮುಂದೆ ಸೌರಶಕ್ತಿ ಬಲದಿಂದ ವಿದ್ಯುತ್ ದೀಪಗಳು ಪ್ರಜ್ವಲಿಸಲಿವೆ. ಜೊತೆಗೆ 600 ಟನ್ ಗಳಷ್ಟು ಇಂಗಾಲದ ಡೈ ಆಕ್ಸೈಡ್ ಹೊರಹಾಕುವುದನ್ನು ತಡೆಗಟ್ಟಬಹುದು ಎಂದು ಕೆಎಸ್ ಸಿಎ ಹೇಳಿದೆ.



ಐಪಿಎಲ್ ನ ಪ್ರಮುಖ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡಾ ಗೋ ಗ್ರೀನ್ ಅಭಿಯಾನಕ್ಕಾಗಿ ಪ್ರತ್ಯೇಕ ಜರ್ಸಿ, ಗಿಡ ನೆಡುವ ಕಾರ್ಯಕ್ರಮ ನಡೆಸುತ್ತಾ ಬಂದಿರುವುದನ್ನು ಇಲ್ಲಿ ಸ್ಮರಿಸಬಹುದು.
ಕೆಎಸ್ ಸಿಎನಿಂದ ಹೊಸ ಸಾಧನೆ

ಕೆಎಸ್ ಸಿಎನಿಂದ ಹೊಸ ಸಾಧನೆ

ಬಹುಶಃ ವಿಶ್ವದಲ್ಲೇ ಮೊದಲ ಬಾರಿಗೆ ಕ್ರಿಕೆಟ್ ಮೈದಾನದಲ್ಲಿ ಬೃಹತ್ ಪ್ರಮಾಣದ ಸೌರಫಲಕ ಅಳವಡಿಕೆ ಮಾಡಲಾಗಿದೆ.ಎಂ. ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸೌರಫಲಕಗಳ ಮೇಲ್ಛಾವಣಿ ಹೊದಿಸುವ ಮೂಲಕ 'ಗೋ ಗ್ರೀನ್' ಅಭಿಯಾನದಲ್ಲಿ ವಿಶ್ವಕ್ಕೆ ಮಾದರಿಯಾಗಿದೆ.

ಸೌರಶಕ್ತಿಯೊಂದಿಗೆ ಮೊದಲ ಪಂದ್ಯ

ಸೌರಶಕ್ತಿಯೊಂದಿಗೆ ಮೊದಲ ಪಂದ್ಯ

ಸೋಮವಾರ ಏ.13ರಂದು ನಡೆದ ಇಂಡಿಯನ್ ಪ್ರಿಮಿಯರ್ ಲೀಗ್ 8 ಟೂರ್ನಿಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಹೈದರಾಬಾದ್ ನಡುವೆ ನಡೆಯಲಿರುವ ಟಿ20 ಕದನಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ರೂಫ್ ಟಾಪ್ ಸಾಕ್ಷಿಯಾಯಿತು.

ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಎಷ್ಟಿದೆ

ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಎಷ್ಟಿದೆ

ಈ ಸೌರಶಕ್ತಿ ಫಲಕಗಳನ್ನು ಬಳಸಿಕೊಂಡು ವಾರ್ಷಿಕವಾಗಿ ಸುಮಾರು 6,00,000 ಯೂನಿಟ್ ವಿದ್ಯುತ್ ಉತ್ಪಾದನೆ ಗುರಿ ಹೊಂದಲಾಗಿದೆ. ಸುಮಾರು 200 AEH(All Electric Homes) ಗೆ ಪೂರೈಕೆ ಮಾಡಬಹುದು.

ಗೋ ಗ್ರೀನ್ ಗೆ ಹೇಗೆ ಸಹಾಯಕ

ಗೋ ಗ್ರೀನ್ ಗೆ ಹೇಗೆ ಸಹಾಯಕ

ವಾರ್ಷಿಕವಾಗಿ ಸುಮಾರು 600 ಟನ್ ಗಳಷ್ಟು ಇಂಗಾಲದ ಡೈಆಕ್ಸೈಡ್ ಹೊರಹಾಕುವುದನ್ನು ಈ ಸೌರ ವಿದ್ಯುತ್ ತಪ್ಪಿಸುತ್ತದೆ. ಹೀಗಾಗಿ ಇಂಧನ ಉಳಿತಾಯ ಸಾಧ್ಯ ಎಂದು ಕೆಎಸ್ ಸಿಎ ವಕ್ತಾರ ವಿನಯ್ ಮೃತ್ಯುಂಜಯ ಹೇಳಿದ್ದಾರೆ.

Story first published: Wednesday, January 3, 2018, 10:02 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X