ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸ್ಪಿನ್ನರ್ ಸುನಿಲ್ ಕೈ ಕಟ್ಟಿ ಹಾಕಿದ ಬಿಸಿಸಿಐ

By Mahesh

ಮುಂಬೈ, ಏ.29: ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ವೆಸ್ಟ್ ಇಂಡೀಸ್ ನ ಸ್ಪಿನ್ನರ್ ಸುನಿಲ್ ನಾರಾಯಣ್ ಅವರು ಮತ್ತೆ ವಿವಾದಿತ ಬೌಲಿಂಗ್ ಶೈಲಿಯಿಂದ ನಿಷೇಧಕ್ಕೊಳಗಾಗಿದ್ದಾರೆ. ಐಪಿಎಲ್ 8ರಲ್ಲಿ ಸುನಿಲ್ ಅವರು ಇನ್ಮುಂದೆ ಆಫ್ ಸ್ಪಿನ್ ಎಸೆಯುವಂತಿಲ್ಲ ಎಂದು ಬಿಸಿಸಿಐ ನಿರ್ಬಂಧ ವಿಧಿಸಿ ಬುಧವಾರ ಆದೇಶಿಸಿದೆ.

ಕಳೆದ ವಾರ ಸುನಿಲ್ ನಾರಾಯಣ್ ಬೌಲಿಂಗ್ ಶೈಲಿ ಅನುಮಾನಾಸ್ಪದವಾಗಿದೆ ಎಂದು ದೂರುಗಳು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಬಿಸಿಸಿಐನ ಸಮಿತಿ ಈ ನಿರ್ಣಯ ಕೈಗೊಂಡಿದೆ.

[47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್] | [8 ತಂಡಗಳ ನೂರೆಂಟು ಆಟಗಾರರು] | [ಐಪಿಎಲ್ 2015: ಫ್ಯಾನ್ಸಿಗೆ ಗೈಡ್]

ಕ್ರಿಕೆಟ್ ಆಟದ ನಿಯಮ 24.2(24.3 ಪೂರಕವಾಗಿ) ಬಿಸಿಸಿಐ ಆಯೋಜನೆಯ ಯಾವುದೇ ಪಂದ್ಯಗಳಲ್ಲಿ ಇನ್ಮುಂದೆ ಸುನಿಲ್ ಅವರು ಆಫ್ ಸ್ಪಿನ್ ಬೌಲಿಂಗ್ ಮಾಡುವಂತಿಲ್ಲ.

KKR's Sunil Narine banned from bowling off-spin in IPL 2015

ಬೌಲಿಂಗ್ ಮಾಡಬಹುದಾ?: ಖಂಡಿತವಾಗಿಯೂ ಸುನಿಲ್ ಅವರು ಬೌಲಿಂಗ್ ಮಾಡಲು ಅನುಮತಿ ಇದೆ. ಆಫ್ ಸ್ಪಿನ್ ಬಿಟ್ಟು knuckle ಎಸೆತ, ಕ್ವಿಕ್ಕರ್ ಎಸೆತ ಹೀಗೆ ಬೇರೆ ಮಾದರಿ ಎಸೆತಗಳನ್ನು ಬಳಸಬಹುದು ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಪ್ರಕಟಿಸಿದರು.

ಒಂದು ವೇಳೆ ನಿಯಮ ಮೀರಿ ಆಫ್ ಸ್ಪಿನ್ ಮಾಡಿದರೆ ಅಂಥ ಎಸೆತವನ್ನು ನೋಬಾಲ್ ಎಂದು ಅಂಪೈರ್ ಗಳು ಕರೆಯುತ್ತಾರೆ. ಏ.22.2015ರಂದು ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧದ ಸುನಿಲ್ ಎಸೆತವನ್ನು ಅಕ್ರಮ ಎಸೆತ ಎಂದು ಪರಿಗಣಿಸಲಾಗಿತ್ತು.


ಇದಾದ ಬಳಿಕ ಚೆನ್ನೈನಲ್ಲಿರುವ ಶ್ರೀರಾಮಚಂದ್ರ ಆರ್ಥೋಸ್ಕೋಪಿ ಅಂಡ್ ಸ್ಫೋರ್ಟ್ಸ್ ಸೈನ್ಸ್ ಸೆಂಟರ್ (SRASSC) ಗೆ ತೆರಳಿದ ಸುನಿಲ್ ಅವರು ಬಯೋಮೆಕ್ಯಾನಿಕಲ್ ಅನಾಲಿಸಿಸ್ ಗೆ ಒಳಪಟ್ಟಿದ್ದರು.

ಕಳೆದ ವರ್ಷ ಚಾಂಪಿಯನ್ಸ್ ಲೀಗ್ ಟಿ 20 ಫೈನಲ್ ನಲ್ಲಿ ಸುನಿಲ್ ಬೌಲಿಂಗ್ ಮಾಡಲಾಗಿರಲಿಲ್ಲ. ನಿಷೇಧಕ್ಕೆ ಒಳಪಟ್ಟ ಸುನಿಲ್ ಅವರು ಐಸಿಸಿ ವಿಶ್ವಕಪ್ 2015ರಲ್ಲಿ ಇದೇ ಕಾರಣ ಆಡದೆ ಗೈರು ಹಾಜರಾದರು. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಏ.28ರ ಪಂದ್ಯದಲ್ಲಿ ಇದೇ ಕಾರಣಕ್ಕೆ ಸುನಿಲ್ ರನ್ನು ಆಡಿಸಿರಲಿಲ್ಲ. ಕೆಕೆಆರ್ 2 ರನ್ ಗಳ ಸೋಲು ಅನುಭವಿಸಿತ್ತು. (ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:02 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X