ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಾರಾಂತ್ಯದಲ್ಲಿ ಬೆಳಗಾವಿಯಲ್ಲಿ ಐಪಿಎಲ್ ಪಂದ್ಯ ನೋಡಿ

By Mahesh

ಬೆಂಗಳೂರು, ಮೇ.7: ಇಂಡಿಯನ್ ಪ್ರಿಮಿಯರ್ ಲೀಗ್ 2015 ಸಂಭ್ರಮ ಈಗ ಬೆಳಗಾವಿಗೆ ಹಬ್ಬುತ್ತಿದೆ. ಈ ವಾರ ಕರ್ನಾಟಕದ ಬೆಳಗಾವಿ, ರಾಜಸ್ಥಾನದ ಉದಯಪುರದಲ್ಲಿ ಫ್ಯಾನ್ಸ್ ಪಾರ್ಕ್ ಆರಂಭಗೊಳ್ಳಲಿದ್ದು, ಟಿಕೆಟ್ ಸಿಗದ ಅಭಿಮಾನಿಗಳು ಪಾರ್ಕಿನಲ್ಲಿ ಕುಳಿತು ಮ್ಯಾಚ್ ನೋಡಿ ಆನಂದಿಸಬಹುದು.

ಟಿಕೆಟ್ ಸಿಗದ ಅಭಿಮಾನಿಗಳು ಚಿಂತಿಸಬೇಕಾಗಿಲ್ಲ. ದೊಡ್ಡ ಪರದೆಯಲ್ಲಿ ಪಂದ್ಯ ವೀಕ್ಷಿಸುವ ವ್ಯವಸ್ಥೆಯನ್ನು ಬಿಸಿಸಿಐ ಜಾರಿಗೆ ತಂದಿದ್ದು ಈಗಗಾಲೇ ದೇಶದ ಹಲವೆಡೆ ಫ್ಯಾನ್ಸ್ ಪಾರ್ಕ್ ಆರಂಭಿಸಿ ಯಶಸ್ವಿಯಾಗಿದೆ.

[47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್] | [8 ತಂಡಗಳ ನೂರೆಂಟು ಆಟಗಾರರು] | [ಐಪಿಎಲ್ 2015: ಫ್ಯಾನ್ಸಿಗೆ ಗೈಡ್]

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಜಾರಿಗೆ ತಂದಿರುವ ಈ ಹೊಸ ವ್ಯವಸ್ಥೆಯಿಂದ ಟ್ವೆಂಟಿ 20 ಕ್ರಿಕೆಟ್ ಹಬ್ಬವನ್ನು ಬೆಳಗಾವಿಯಂಥ ನಗರಗಳಲ್ಲೂ ಆಚರಿಸಬಹುದಾಗಿದೆ. [ಯಾವ ದೇಶದಲ್ಲಿ ಯಾವ ಚಾನೆಲ್ ನಲ್ಲಿ ಪ್ರಸಾರ ]

ಫ್ಯಾನ್ಸ್ ಪಾರ್ಕ್ ನಿರ್ಮಾಣಕ್ಕೆ ಮುಂದಾಗಿರುವ ಬಿಸಿಸಿಐ ಆರಂಭದಲ್ಲಿ ದೇಶದ ಆಯ್ದ ನಗರಗಳಲ್ಲಿನ ಪಾರ್ಕ್ ಗಳಲ್ಲಿ ಉಚಿತವಾಗಿ ಲೈವ್ ಪಂದ್ಯ ವೀಕ್ಷಿಸುವ ಅವಕಾಶ ನೀಡುತ್ತಿದೆ. [ಐಪಿಎಲ್ 8 ಆನ್ಲೈನ್ ಟಿಕೆಟ್ ಖರೀದಿ ಎಲ್ಲಿ? ಹೇಗೆ?]

IPL 2015 Fan Parks in Belagavi

ಯಾವಾಗ ಪಂದ್ಯ?: ಈ ವಾರಾಂತ್ಯದಲ್ಲಿ ನಾಲ್ಕು ಪಂದ್ಯಗಳು ನಡೆಯಲಿದ್ದು, ಉದಯಪುರದಲ್ಲಿ ಎರಡು, ಬೆಳಗಾವಿಯಲ್ಲಿ ಎರಡು ಪಂದ್ಯ ನಡೆಯಲಿದೆ. [ಐಪಿಎಲ್ 8 ಮ್ಯಾಚ್ ಪುಕ್ಶೇಟಿ ನೋಡ್ರಿ!]

ಉದಯಪುರ್, ಶಿಕಾರ್ಬಾದಿ ಹೋಟೆಲ್ ಮೈದಾನ
9 ಮೇ(ಶನಿವಾರ)
ಪಂದ್ಯ 1: 4 PM, ಕೆಕೆಆರ್ vs ಕಿಂಗ್ಸ್ XI ಪಂಜಾಬ್
ಪಂದ್ಯ 2: 8 PM, ಡೆಲ್ಲಿ ಡೇರ್ ಡೆವಿಲ್ಸ್ vs ಸನ್ ರೈಸರ್ಸ್ ಹೈದರಾಬಾದ್

ಬೆಳಗಾವಿ, ಯೂನಿಯನ್ ಜಿಂಖಾನಾ

10 ಮೇ (ಭಾನುವಾರ)
ಪಂದ್ಯ 1: 4 PM, ಆರ್ ಸಿಬಿ vs ಎಂಐ
ಪಂದ್ಯ 2: 8 PM, ಸಿಎಸ್ ಕೆ vs ಆರ್ ಆರ್.

IPL 2015

ಪ್ರತಿ ಪಂದ್ಯಕ್ಕೂ 2 ಗಂಟೆ ಮುನ್ನ ಪಾರ್ಕ್ ಗಳಿಗೆ ಅಭಿಮಾನಿಗಳು ಬಂದು ಕುಳಿತುಕೊಳ್ಳಬಹುದಾಗಿದೆ. ಮೊದಲು ಬಂದವರಿಗೆ ಆದ್ಯತೆ ಮೇರೆಗೆ ಅವಕಾಶ ಸಿಗಲಿದೆ. ದೊಡ್ಡ ಪರದೆಯಲ್ಲಿ ಪಂದ್ಯ ವೀಕ್ಷಿಸಬಹುದು.

ಸುಮಾರು 15 ನಗರಗಳಲ್ಲಿ 10,000 ಅಭಿಮಾನಿಗಳಿಗೆ ಈ ಅವಕಾಶ ಲಭ್ಯವಾಗಲಿದೆ. ಐಪಿಎಲ್ 8 ಪಂದ್ಯಾವಳಿ 12 ನಗರಗಳಲ್ಲಿ ಈ ಬಾರಿ ಆಯೋಜನೆಗೊಂಡಿದೆ. 8 ತಂಡಗಳು ಸುಮಾರು 60 ಪಂದ್ಯಗಳಲ್ಲಿ ಕಾದಾಡಲಿವೆ.

ಮೇ 2 ಹಾಗೂ 3 ರಂದು ಸೂರತ್ ಮತ್ತು ವಾರಂಗಲ್ ನಲ್ಲಿ ಐಪಿಎಲ್ ಪಂದ್ಯವನ್ನು ಆಯೋಜಿಸಲಾಗಿತ್ತು ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಹೇಳಿದ್ದಾರೆ.

ಎಲ್ಲೆಲ್ಲಿ ಫ್ಯಾನ್ಸ್ ಪಾರ್ಕ್ ?: ಆಗ್ರಾ.ನಾಗಪುರ, ಕೊಯಮತ್ತೂರು, ಲೂಧಿಯಾನ, ಗುಂಟೂರು, ಸೂರತ್, ವಾರಂಗಲ್, ಉದಯಪುರ್, ಬೆಳಗಾವಿ, ಕಾನ್ಪುರ, ಇಂದೋರ್, ಅಲಹಾಬಾದ್ ಹಾಗೂ ಭೋಪಾಲ್ , ಇನ್ನೆರಡು ನಗರಗಳನ್ನು ಸೇರಿಸಲಾಗುತ್ತದೆ. (ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:02 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X