ಐಪಿಎಲ್ : ಬಣ್ಣದ ಬ್ಯಾಟ್ ಬಳಕೆ, ಧೋನಿ ಇನ್ನೂ ನಿರ್ಧರಿಸಿಲ್ಲ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 26: ಆಸ್ಟ್ರೇಲಿಯಾದ ಬಿಗ್​ ಬಾಷ್ ಲೀಗ್(ಬಿಬಿಎಲ್) ಕ್ರಿಕೆಟ್​ ನಲ್ಲಿ ಕಪ್ಪು ಬಣ್ಣದ ಬ್ಯಾಟ್ ಬಳಕೆಯಾಗಿ ಸುದ್ದಿಯಾಗಿತ್ತು. ಈಗ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ ನಲ್ಲಿ ಎಂಎಸ್
ಧೋನಿ ಅವರು ಬಣ್ಣ ಬಣ್ಣದ ಬ್ಯಾಟ್ ಬಳಕೆ ಮಾಡುತ್ತಾರೆ ಎಂಬ ಸುದ್ದಿ ಬಂದಿದೆ. ಆದರೆ, ಈ ಬಗ್ಗೆ ಧೋನಿ ಇನ್ನೂ ನಿರ್ಧಾರ ಪ್ರಕಟಿಸಿಲ್ಲ.

ಟೀಂ ಇಂಡಿಯಾದ ನಿಗದಿತ ಓವರ್​ಗಳ ತಂಡದ ನಾಯಕ ಎಂಎಸ್ ಧೋನಿ ಅವರಿಗಾಗಿ ಬಣ್ಣದ ಬ್ಯಾಟ್ ತಯಾರಿಸಿ ನೀಡಲು ಕ್ರೀಡಾ ಪರಿಕರಗಳ ಸಂಸ್ಥೆ 'ಸ್ಪ್ಟಾರ್ಟನ್ ಸ್ಪೋರ್ಟ್ಸ್' ಮುಂದಾಗಿದೆ, ಸ್ಪಾರ್ಟನ್ ಸಂಸ್ಥೆ ರಾಯಭಾರಿ ಹಾಗೂ ಪುಣೆ ಸೂಪರ್ ಜೈಂಟ್ಸ್ ನಾಯಕರಾಗಿರುವ ಧೋನಿ ಅವರು ಬಣ್ಣದ ಬ್ಯಾಟ್ ಬಳಸಿ ಹೊಸ ಟ್ರೆಂಡ್ ಹುಟ್ಟು ಹಾಕಲಿ ಎಂದು ಸ್ಪಾರ್ಟನ್ ಸ್ಪೋರ್ಟ್ಸ್​ನ ಕ್ರಿಕೆಟ್ ಮ್ಯಾನೇಜರ್ ಕ್ಯಾಮರೂನ್ ಮರ್ಚೆಂಟ್ ಬಯಸಿದ್ದಾರೆ.

IPL 10: Will MS Dhoni use multi-coloured bat after Chris Gayle and Andre Russell?

ಕಳೆದ ಬಿಬಿಎಲ್ ಸೀಸನ್ ನಲ್ಲಿ 'ಸ್ಪ್ಟಾರ್ಟನ್ ಸ್ಪೋರ್ಟ್ಸ್' ನ ಮತ್ತೊಬ್ಬ ರಾಯಭಾರಿ ಕ್ರಿಸ್ ​ಗೇಲ್ ಅವರು ಚಿನ್ನದ ಬಣ್ಣವಿರುವ ಬ್ಯಾಟ್ ಬಳಸಿದ್ದರು. ಆದರೆ, ಈ ಬಾರಿ ವೆಸ್ಟ್ ಇಂಡೀಸ್ ಆಲ್ ರೌಂಡರ್ ಆಂಡ್ರೆ ರಸೆಲ್ ಕಪ್ಪು ಬ್ಯಾಟ್ ಬಳಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಚೆಂಡಿಗೆ ಬ್ಯಾಟಿನ ಬಣ್ಣ ಅಂಟಿಕೊಂಡಿದ್ದರಿಂದ ಬ್ಯಾಟ್ ನಿಷೇಧಕ್ಕೊಳಗಾಗಿತ್ತು.

ಕ್ರಿಕೆಟ್ ಆಸ್ಟ್ರೇಲಿಯಾ ಇಂಥ ಬ್ಯಾಟ್ ಬಳಕೆಗೆ ಅವಕಾಶ ಕೊಟ್ಟಿದ್ದು, ಕಪ್ಪು, ಹಸಿರು, ಕೇಸರಿ ಬಣ್ಣದ ಬ್ಯಾಟ್​ಗಳನ್ನು ಆಟಗಾರರು ಈಗಾಗಲೆ ಬಳಸುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bat manufacturers 'Spartan Sports' have expressed their desire that India's limited overs' skipper Mahendra Singh Dhoni should play with a coloured bat in the Indian Premier League 2017.
Please Wait while comments are loading...