ರೈಸಿಂಗ್ ಪುಣೆಗೆ ಆಘಾತ, ಐಪಿಎಲ್ 10ನಿಂದ ಮಿಚೆಲ್ ಮಾರ್ಷ್ ಹೊರಕ್ಕೆ!

Posted By:
Subscribe to Oneindia Kannada

ನವದೆಹಲಿ, ಮಾರ್ಚ್. 14 : ಆಸ್ಟ್ರೇಲಿಯಾದ ಆಲ್ ರೌಂಡರ್ ಮಿಚೆಲ್ ಮಾರ್ಷ್ ಅವರು ಹತ್ತನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ ನಿಂದ ಹೊರನಡೆದಿದ್ದಾರೆ.

ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡದಲ್ಲಿದ್ದ ಮಿಚೆಲ್ ಮಾರ್ಷ್ ಅವರನ್ನು ಭುಜ ಗಾಯದ ಸಮಸ್ಯೆ ಅವರನ್ನು ಕಾಡುತ್ತಿದೆ. ಇದೆ ಭುಜ ಗಾಯದ ಸಮಸ್ಯೆಯಿಂದ ಅವರು ಈ ಹಿಂದೆ ನಡೆದ 2006 ಮತ್ತು 2016 ಐಪಿಎಲ್ ಟೂರ್ನಿಯಿಂದ ಹೊರಗುಳಿದಿದ್ದರು.[ಐಪಿಎಲ್: ಪುಣೆ ತಂಡದ ನಾಯಕತ್ವದಿಂದ ಧೋನಿ ಔಟ್!]

IPL 10: Mitchell Marsh set to miss cash-rich league yet again, faces lengthy absence

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಒಬ್ಬ ಉತ್ತಮ ಆಲ್ ರೌಂಡರ್ ಆಟಗಾರನ ಅನುಪಸ್ಥತಿ ಪುಣೆ ತಂಡಕ್ಕೆ ಕಾಡಲಿದೆ. ಭುಜ ಗಾಯದಿಂದ ಬಳಲುತ್ತಿರುವ 25 ವರ್ಷದ ಮಾರ್ಷ್ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯಿಂದಲೂ ಹೊರಗುಳಿದಿದ್ದರು.

ಕಳೆದ ಒಂಭತ್ತು ತಿಂಗಳಿನಿಂದ ಮಿಚೆಲ್ ಮಾರ್ಷ್ ಯಾವುದೇ ಪ್ರಮುಖ ಟೂರ್ನಿಗಳಲ್ಲಿ ಆಡಿಲ್ಲವೆಂದು ಆಸ್ಟ್ರೇಲಿಯಾ ಕ್ರಿಕೆಟ್ ಮೂಲಗಳು ತಿಳಿಸಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Australia all-rounder Mitchell Marsh is set to miss the tenth edition of Indian Premier League owing to a shoulder injury, dealing a blow to his franchise Rising Pune SuperGiant. (RPS Squad for IPL 10)
Please Wait while comments are loading...