ಕೋಲ್ಕತ್ತಾಗೆ ಮಣಿದ ಹೈದರಾಬಾದ್ ಸನ್ ರೈಸರ್ಸ್

Posted By:
Subscribe to Oneindia Kannada

ಕೋಲ್ಕತ್ತಾ, ಏಪ್ರಿಲ್ 15: ಕೋಲ್ಕತ್ತಾ ನೈಟ್ ರೈಡರ್ಸ್ ನೀಡಿದ 173 ರನ್ ಗಳ ಗುರಿ ತಲುಪಲು ಹೆಣಗಾಡಿದ ಹೈದರಾಬಾದ್ ಸನ್ ರೈಸರ್ಸ್ 17 ರನ್ ಗಳಿಂದ ಸೋತಿದೆ. 173 ರನ್ ಗಳ ಗುರಿ ಬೆನ್ನಟ್ಟಿದ ಹೈದರಾಬಾದ್ ತಂಡ ಆರು ವಿಕೆಟ್ ಕಲೆದುಕೊಂಡು 155 ರನ್ ಗಳಷ್ಟೇ ಗಳಿಸಲು ಸಾಧ್ಯವಾಯಿತು.

ವಾರ್ನರ್ 26, ಧವನ್ 23, ಯುವರಾಜ್ ಸಿಂಗ್ 26 ರನ್ ಗಳಿಸಿದರು. ಕೊನೆಯಲ್ಲಿ ಬಿಪುಲ್ ಶರ್ಮಾ 14 ಎಸೆತಗಳಲ್ಲಿ 21 ರನ್ ಬಾರಿಸಿ ಒಂದಿಷ್ಟು ಹೋರಾಟ ತೋರಿದರು. ಆದರೆ ಅಷ್ಟರಲ್ಲಾಗಲೇ ಹೈದರಾಬಾದ್ ಗೆಲ್ಲುವ ಅವಕಾಶವನ್ನು ಕಳೆದುಕೊಂಡಿತ್ತು. ಕೋಲ್ಕತ್ತಾ ಪರವಾಗಿ ಸುನೀಲ್ ನರೈನ್ ಹಾಗೂ ಯುಸೂಫ್ ಪಠಾಣ್ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರು.

Robin Uthappa

ದುಬಾರಿಯಾದರೂ ವೋಕ್ಸ್ ಎರಡು ವಿಕೆಟ್ ಕಿತ್ತರು. ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಕೋಲ್ಕತ್ತಾ ಪರವಾಗಿ ರಾಬಿನ್ ಉತ್ತಪ್ಪ ಸಿಡಿಸಿದ ಭರ್ಜರಿ ಅರ್ಧಶತಕದ (68 ರನ್, 39 ಎಸೆತ, 5 ಬೌಂಡರಿ, 4 ಸಿಕ್ಸರ್) ಸಹಾಯದಿಂದ ಕೋಲ್ಕತಾ ತಂಡ ಈ ಮೊತ್ತ ಗಳಿಸಲು ಸಾಧ್ಯವಾಯಿತು. ಟಾಸ್ ಗೆದ್ದ ಸನ್ ರೈಸರ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kolkata beat Hyderabad by 17 runs in IPL 10 season match at Kolkata.
Please Wait while comments are loading...