ಐಪಿಎಲ್: ಶ್ರೇಷ್ಠ ಬೌಲರ್ ಗಳ ಪಟ್ಟಿಯಲ್ಲಿ ಕುಂಬ್ಳೆಗೆ ಸ್ಥಾನ

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 19: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ20 ಕದನದಲ್ಲಿ ಬೌಲರ್ ಗಳಿಗಿಂತ ಬ್ಯಾಟ್ಸ್ ಮನ್ ಗಳೇ ಹೆಚ್ಚು ವಿಜೃಂಭಿಸುವುದು ಸಾಮಾನ್ಯ ಸಂಗತಿ.

ಆದರೆ, ಐಪಿಎಲ್ ನಲ್ಲಿ ಭಾರತದ ಸ್ಪಿನ್ನರ್ ಗಳು ಭರ್ಜರಿ ಪ್ರದರ್ಶನ ಮೂಲಕ ಗಮನ ಸೆಳೆದಿದ್ದಾರೆ. ಆದರೆ, ಶ್ರೇಷ್ಠ ಬೌಲಿಂಗ್ ಪ್ರದರ್ಶನ ಪಾಕಿಸ್ತಾನದ ವೇಗಿ ಸೊಹೈಲ್ ತನ್ವೀರ್ ಹೆಸರಿನಲ್ಲಿದೆ.[ಐಪಿಎಲ್ : ಟಾಪ್ 10 ವೈಯಕ್ತಿಕ ಸ್ಕೋರರ್, ಗೇಲ್ ನಿಂದ ಸೈಮಂಡ್ ತನಕ]

Anil Kumble

ಅನಿಲ್ ಕುಂಬ್ಳೆ, ಅಮಿತ್ ಮಿಶ್ರಾ, ಪಿಯೂಷ್ ಚಾವ್ಲಾರಿಂದ ಹಿಡಿದು ಈಗಿನ ಯಜುವೇಂದ್ರ ಚಾಹಲ್, ಆಡಂ ಝಂಪಾ ತನಕ ಹೆಸರಿಸಬಹುದು.[ಧೂಳಿಪಟವಾಗುತ್ತವಾ ಆ ಹತ್ತು ದಾಖಲೆಗಳು?]

ಆಫ್ ಸ್ಪಿನ್ನರ್ ಗಳ ಪೈಕಿ ಹರ್ಭಜನ್ ಸಿಂಗ್ ಹಾಗೂ ಆರ್ ಅಶ್ವಿನ್ ನಡುವೆ ಹರ್ಭಜನ್ ಮೇಲುಗೈ ಸಾಧಿಸಿದ್ದಾರೆ. ವೇಗಿಗಳ ಪೈಕಿ ಲಸಿತ್ ಮಾಲಿಂಗ ಆರ್ ವಿನಯ್ ಕುಮಾರ್ ಹಾಗೂ ಡೇಲ್ ಸ್ಟೇನ್ ಟಾಪ್ 10 ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ ವೇಗಿ ಸೊಹೈಲ್ ತನ್ವೀರ್ ಅವರು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 6/14 ಗಳಿಸಿದ್ದರು. ಭುವನೇಶ್ವರ್ ಕುಮಾರ್ ಅವರು ಸೋಮವಾರ(ಏಪ್ರಿಲ್ 7) ಉತ್ತಮ ಬೌಲಿಂಗ್ ಮಾಡಿ 5ವಿಕೆಟ್ ಕಿತ್ತರು.[ಗೇಲ್ ತ್ವರಿತಗತಿ ಟಿ20 ಶತಕ!]

IPL 10: Here are 10 best bowling figures; Sohail Tanvir tops list


ಏಪ್ರಿಲ್ 18ರ ಅನ್ವಯ ಐಪಿಎಲ್ ನ ಟಾಪ್ 10 ಬೌಲಿಂಗ್ ಪ್ರದರ್ಶನ ಇಲ್ಲಿದೆ:

ಆಟಗಾರ ಪರ ತಂಡ/ ವಿರುದ್ಧ ತಂಡ ಯಾವಾಗ? ಶ್ರೇಷ್ಠ ಪ್ರದರ್ಶನ
ಸೊಹೈಲ್ ತನ್ವೀರ್ ರಾಜಸ್ಥಾನ್ ರಾಯಲ್ಸ್ vs ಚೆನ್ನೈ ಸೂಪರ್ ಕಿಂಗ್ಸ್ ಮೇ 4, 2008, ಜೈಪುರ 6/14
ಆಡಂ ಝಂಪಾ ರೈಸಿಂಗ್ ಪುಣೆ ಸೂಪರ್ ಜೈಂಟ್ vs ಸನ್ ರೈಸರ್ಸ್ ಹೈದರಾಬಾದ್ ಮೇ 10, 2016, ವಿಶಾಖಪಟ್ಟಣಂ 6/19
ಅನಿಲ್ ಕುಂಬ್ಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು vs ರಾಜಸ್ಥಾನ್ ರಾಯಲ್ಸ್ ಏಪ್ರಿಲ್ 18, 2009, ಕೇಪ್ ಟೌನ್
5/5
ಇಶಾಂತ್ ಶರ್ಮ ಡೆಕ್ಕನ್ ಚಾರ್ಜರ್ಸ್ ವಿರುದ್ಧ ಕೊಚ್ಚಿ ಟಸ್ಕರ್ಸ್ ಏಪ್ರಿಲ್ 27, 2011, ಕೊಚ್ಚಿ 5/12
ಲಸಿತ್ ಮಾಲಿಂಗ ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಡೇರ್ ಡೆವಿಲ್ಸ್
ಏಪ್ರಿಲ್ 10, 2011, ಮುಂಬೈ
5/13
ರವೀಂದ್ರ ಜಡೇಜ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಡೆಕ್ಕನ್ ಚಾರ್ಜಸ್ ಏಪ್ರಿಲ್ 07, 2012, ವಿಶಾಖಪಟ್ಟಣಂ 5/16
ಜೇಮ್ಸ್ ಫಾಲ್ಕ್ನರ್
ರಾಜಸ್ಥಾನ್ ರಾಯಲ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ಮೇ 17, 2013, ಹೈದರಾಬಾದ್ 5/16
ಅಮಿತ್ ಮಿಶ್ರಾ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ದ ಡೆಕ್ಕನ್ ಚಾರ್ಜರ್ಸ್ ಮಾರ್ಚ್ 18, 2008, ದೆಹಲಿ 5/17
ಆಂಡ್ರ್ಯೂ ಟೈ ಗುಜರಾತ್ ಲಯನ್ಸ್ ವಿರುದ್ಧ ರೈಸಿಂಗ್ ಪುಣೆ ಸೂಪರ್ ಜೈಂಟ್ ಏಪ್ರಿಲ್ 14, 2017, ರಾಜ್ ಕೋಟ್ 5/17
ಹರ್ಭಜನ್ ಸಿಂಗ್ ಮುಂಬೈ ಇಂಡಿಯನ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಏಪ್ರಿಲ್ 22,2011 5/18

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Presenting to you the top 10 bowling figures in the history of the Indian Premier League (IPL). Sohail Tanvir is at number one spot.Spin legend Anil Kumble in the third position.
Please Wait while comments are loading...