ಅಫ್ಘನ್ ತೊರೆದು ಪಿಸಿಬಿ ಆಯ್ಕೆದಾರರಾದ ಇನ್ಜಮಾಮ್

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ಇಸ್ಲಾಮಾಬಾದ್, ಏಪ್ರಿಲ್ 19: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಇನ್ಜಮಾಮ್ ಉಲ್ ಹಕ್ ಅವರನ್ನು ಪಾಕಿಸ್ತಾನ ಕ್ರಿಕೆಟ್ ತಂಡದ ಮುಖ್ಯ ಆಯ್ಕೆಗಾರರನ್ನಾಗಿ ನೇಮಕ ಮಾಡಲಾಗಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ತಿಳಿಸಿದೆ. ಆದರೆ, ಇನ್ಜಮಾಮ್ ಅವರಿಗೆ ಅಫ್ಘಾನಿಸ್ತಾನ ತಂಡದ ಕೋಚ್ ಆಗಿದ್ದಾಗ ಪಡೆಯುತ್ತಿದ್ದ ಸಂಬಳಕ್ಕಿಂತ ಕಡಿಮೆ ಸಂಭಾವನೆ ಇಲ್ಲಿ ಸಿಗಲಿದೆ.

ಅಫ್ಘಾನಿಸ್ತಾನ ತಂಡ ಕೋಚ್ ಆಗಿ ವಿಶ್ವ ಟಿ20ಯಲ್ಲಿ ಇನ್ಜಮಾಮ್ ಕಾಣಿಸಿಕೊಂಡಿದ್ದರು. ಈ ಹುದ್ದೆ ನಿಭಾಯಿಸಿದ್ದಕ್ಕೆ 12 ಲಕ್ಷ ಸಂಬಳ ಪ್ರತಿ ತಿಂಗಳು ಪಡೆಯುತ್ತಿದ್ದರು. ಆದರೆ, ಈಗ ಪಿಸಿಬಿಯಿಂದ 8 ಲಕ್ಷ ರು ಪ್ರತಿ ತಿಂಗಳು ಸಂಬಳ ಸಿಗಲಿದೆ.

Inzamam-ul-Haq quits as Afghanistan coach, to join PCB as chief selector

ಪಿಸಿಬಿಯ ಮುಖ್ಯ ಆಯ್ಕೆಗಾರ ಸ್ಥಾನಕ್ಕೆ ಕಳೆದ ಐದು ದಿನಗಳಿಂದ ಮೋಹಿನ್ ಖಾನ್, ಇಕ್ಬಾಲ್ ಖಾಸೀಂ, ಮೋಶಿನ್ ಹಸನ್ ಖಾನ್, ರಶೀದ್ ಲತೀಫ್ ಇವರ ಹೆಸರುಗಳು ಕೇಳಿಬಂದಿದ್ದವು. ಆದರೆ, ಯಾವುದೇ ಸದ್ದಿಲ್ಲದೆ ಇನ್ಜಮಾಮ್ ಅವರನ್ನು ನೇಮಕ ಮಾಡಿರುವುದು ಆಶ್ಚರ್ಯವನ್ನುಂಟು ಮಾಡಿದೆ.

ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಕೋಚ್ ಸ್ಥಾನವನ್ನು ನಿಭಾಹಿಸುತ್ತಿದ್ದ 46 ವರ್ಷದ ಇನ್ಜಮಾಮ್ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿ ಇನ್ನು ಮುಂದೆ ಪಿಸಿಬಿಯ ಮುಖ್ಯ ಆಯ್ಕೆ ಸ್ಥಾನವನ್ನು ನಿಭಾಯಿಸಲಿದ್ದಾರೆ. ಈವರೆಗೆ ಇನ್ಜಮಾಮ್ 378 ಏಕದಿನ 120 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former Pakistan cricket captain Inzamam-ul-Haq is set to be appointed as the country's chief selector after he was released from his role as Afghanistan's head coach
Please Wait while comments are loading...