ಮಹಿಳಾ ದಿನಾಚರಣೆ ದಿನ ಕೊಹ್ಲಿ ಕ್ಷಮೆ ಕೋರಿದ್ದು ಏಕೆ?

Posted By:
Subscribe to Oneindia Kannada

ನವದೆಹಲಿ, ಮಾರ್ಚ್ 08: ಬಾಲಿವುಡ್ ಸೆಲೆಬ್ರಿಟಿಗಳು, ರಾಜಕಾರಣಿಗಳು ಸೇರಿದಂತೆ ಅನೇಕ ಮಂದಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಶುಭ ಕೋರಿದ್ದಾರೆ. ಆದರೆ, ಕ್ರಿಕೆಟರ್ ವಿರಾಟ್ ಕೊಹ್ಲಿ ಅವರು ವಿಶಿಷ್ಟ ರೀತಿಯಲ್ಲಿ ಶುಭ ಹಾರೈಸಿದ್ದಾರೆ.

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ

ಮೈಕ್ರೋಬ್ಲಾಗಿಂಗ್ ತಾಣ ಟ್ವಿಟ್ಟರ್ ಮೂಲಕ ಮಹಿಳಾ ದಿನಾಚರಣೆಗೆ ಶುಭ ಕೋರಿದ ನಂತರ ಕೊಹ್ಲಿ ಅವರು ಎಲ್ಲಾ ಮಹಿಳೆಯಲ್ಲಿ ಕ್ಷಮೆಯಾಚಿಸಿದ್ದು ವಿಶೇಷವಾಗಿತ್ತು.

International Women's Day: Why Virat Kohli said 'SORRY' on Twitter

ಎರಡು ಕೈ ಎತ್ತಿ ನಮಸ್ಕರಿಸುತ್ತಾ 'ಎಲ್ಲರಿಗೂ ಸ್ಸಾರಿ, ನಿಮ್ಮನ್ನು ಕಾಡಿದ ಪುಂಡ ಪೋಕರಿಗಳು, ರೋಮಿಯೋಗಳಿಂದ ನಿಮಗೆ ತೊಂದರೆಯಾಗಿರಬಹುದು, ಅದು ಬಿಟ್ಟರೆ ನಿಮಗೆಲ್ಲ ಹ್ಯಾಪಿ ವುವೆನ್ಸ್ ಡೇ ಎಂದಿದ್ದಾರೆ.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರತಿ ವರ್ಷ ಮಾರ್ಚ್ 08ರಂದು ಆಚರಿಸಲಾಗುತ್ತದೆ. ಮೊದಲಿಗೆ ವೃತ್ತಿಪರರ ಮಹಿಳೆಯರ ದಿನಾಚರಣೆ ಮಾತ್ರ ಆಗಿತ್ತು. ಈ ದಿನದಂದು ಮಹಿಳೆಯರ ಸಾಧನೆಯನ್ನು ಪ್ರಶಂಸಿಸಲಾಗುತ್ತದೆ.


ವಿಶ್ವ ಸಂಸ್ಥೆ ಪ್ರತಿ ವರ್ಷಕ್ಕೊಂದು ಥೀಮ್ ನೀಡುತ್ತದೆ. ಈ ವರ್ಷ ಪುರುಷ-ಸ್ತ್ರೀ ಲಿಂಗ ತಾರತಮ್ಯವನ್ನು ಸರಿದೂಗಿಸಿ 2030ರ ಹೊತ್ತಿಗೆ 50:50 ರ ಅನುಪಾತಕ್ಕೆ ತರುವುದು ಉದ್ದೇಶವಾಗಿದೆ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ವಿಶೇಷ ವಿಡಿಯೋ ನೋಡಿ:

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Bollywood celebrities, politicians and others have a lot to say on International Women's Day. Now, Indian Cricketer Virat Kohli has also joined the group.
Please Wait while comments are loading...