ವಿಶ್ವ ಟಿ20: ದಕ್ಷಿಣ ಆಫ್ರಿಕಾ ತಂಡದಲ್ಲಿ ಗಾಯಾಳು ಸ್ಟೈನ್

Posted By:
Subscribe to Oneindia Kannada

ಜೋಹಾನ್ಸ್ ಬರ್ಗ್, ಫೆ. 11: ದಕ್ಷಿಣ ಆಫ್ರಿಕಾದ ಆಯ್ಕೆದಾರರು ಮುಂಬರುವ ವಿಶ್ವಟಿ20 ಟೂರ್ನಿಗೆ ತಂಡವನ್ನು ಪ್ರಕಟಿಸಿದ್ದು, ಗಾಯಾಳುವಾಗಿರುವ ವೇಗಿ ಸ್ಟೈನ್ ಗೂ ಸ್ಥಾನ ಕಲ್ಪಿಸಲಾಗಿದೆ. ವೇಗಿ ಮಾರ್ನೆ ಮಾರ್ಕೆಲ್ ಅವರನ್ನು ಕಡೆಗಣಿಸಿರುವುದು ಅಚ್ಚರಿ ಮೂಡಿಸಿದೆ.

[ವಿಶ್ವ ಟಿ20 ಸಂಪೂರ್ಣ ವೇಳಾಪಟ್ಟಿ]

ಕಳೆದ ಡಿಸೆಂಬರ್ ತಿಂಗಳಿನಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯವೊಂದರಲ್ಲಿ ಭುಜಕ್ಕೆ ಗಾಯ ಮಾಡಿಕೊಂಡಿದ್ದ ಡೇಲ್ ಸ್ಟೈನ್ ಇನ್ನೂ ಗುಣಮುಖರಾಗಿಲ್ಲ.ಸ್ಟೈನ್ ಅವರ ಫಿಟ್ನೆಸ್ ಬಗ್ಗೆ ಅನುಮಾನ ಇರುವ ವೇಳೆಯಲ್ಲೇ ಅವರನ್ನು ತಂಡಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ.

Injured Steyn named in South Africa's World Twenty20 squad

ಉಳಿದಂತೆ ಮಾರ್ಕೆಲ್ ಸೋದರರಾದ ಮಾರ್ನೆ ಹಾಗೂ ಆಲ್ಬೆ ಮಾರ್ಕೆಲ್ ಅವರು ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಕೈಲಿ ಅಬಾಟ್ ಹಾಗೂ ಕಾಗಿಸೋ ರಬಾಡ ಹಾಗೂ ಬ್ಯಾಟ್ಸ್ ಮನ್ ರಿಲೇ ರೊಸೋ ಹಾಗೂ ಆಲ್ ರೌಂಡರ್ ಕ್ರಿಸ್ ಮೊರಿಸ್ ಹಾಗೂ ಡೇವಿಡ್ ವಿಸೆ ಅವರಿಗೆ ಇದು ಮೊದಲ ವಿಶ್ವಕಪ್ ಆಗಲಿದೆ.

ವಿಶ್ವ ಟಿ20ಗೆ ಆಯ್ಕೆಯಾದ ತಂಡವನ್ನೇ ಫೆಬ್ರವರಿ 19 ಹಾಗೂ 21ರಂದು ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಪಂದ್ಯ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಮಾರ್ಚ್ 4 ಹಾಗೂ 9 ರ ಪಂದ್ಯಕ್ಕೂ ಬಳಸಲು ದಕ್ಷಿಣ ಆಫ್ರಿಕಾದ ಆಯ್ಕೆದಾರರು ನಿರ್ಧರಿಸಿದ್ದಾರೆ.

ಶ್ರೀಲಂಕಾ, ವೆಸ್ಟ್ ಇಂಡೀಸ್ ಹಾಗೂ ಅರ್ಹತಾ ತಂಡವೊಂದರ ಜೊತೆಗೆ ದಕ್ಷಿಣ ಆಫ್ರಿಕಾ ಇದ್ದು, ಇತ್ತೀಚೆಗೆ ಬಾಂಗ್ಲಾದೇಶ ಹಾಗೂ ಭಾರತ ವಿರುದ್ಧ ಜಯ ದಾಖಲಿಸಿದ ಅನುಭವ ಹೊಂದಿದೆ.

ದಕ್ಷಿಣ ಆಫ್ರಿಕಾ ತಂಡ : ಫಾಫ್ ಡು ಪ್ಲೆಸಿಸ್ (ನಾಯಕ), ಕೈಲಿ ಅಬಾಟ್, ಹಶೀಂ ಆಮ್ಲಾ, ಫರ್ಹಾನ್ ಬೆಹರ್ದೀನ್, ಕ್ವಿಂಟಾನ್ ಡಿ ಕಾಕ್ (ವಿಕೆಟ್ ಕೀಪರ್), ಎಬಿ ಡಿ ವಿಲೆಯರ್ಸ್, ಜೆಪಿ ಡುಮಿನಿ, ಇಮ್ರಾನ್ ತಾಹೀರ್, ಡೇವಿಡ್ ಮಿಲ್ಲರ್, ಕ್ರಿಸ್ ಮೋರಿಸ್, ಅರೋನ್ ಫಂಗಿಸೋ, ಕಾಗಿಸೋ ರಬಡಾ, ರಿಲೇ ರೋಸೋ, ಡೇಲ್ ಸ್ಟೈನ್, ಡೇವಿಡ್ ವಿಸೆ.(ಎಎಫ್ ಪಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
South Africa on Wednesday named fast bowler Dale Steyn in their 15-man squad for the World Twenty20 tournament in India next month.
Please Wait while comments are loading...