ಮೂರನೇ ಟೆಸ್ಟ್ ಪಂದ್ಯಕ್ಕೆ ಹೊಸ ಆರಂಭಿಕ ಆಟಗಾರ

Posted By:
Subscribe to Oneindia Kannada

ಕೋಲ್ಕತ್ತಾ, ಅಕ್ಟೋಬರ್ 03 : ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಹೊಸ ಆರಂಭಿಕ ಆಟಗಾರನನ್ನು ಹುಡುಕಬೇಕಿದೆ.
250ನೇ ಟೆಸ್ಟ್ ಪಂದ್ಯದ ಸ್ಕೋರ್ ಕಾರ್ಡ್

ಕೆಎಲ್ ರಾಹುಲ್ ನಂತರ ಶಿಖರ್ ಧವನ್ ಅವರು ಕೂಡಾ ಗಾಯಾಳುವಾಗಿ ಪಂದ್ಯದಿಂದ ಹೊರ ಬಿದ್ದಿದ್ದಾರೆ. ಮೂರನೇ ಟೆಸ್ಟ್ ಪಂದ್ಯಕ್ಕೆ ಶಿಖರ್ ಧವನ್ ಅಲಭ್ಯರಾಗಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಕ್ಟೋಬರ್ 3ರಂದು ಪ್ರಕಟಿಸಿದೆ.[ದ್ರಾವಿಡ್ ದಾಖಲೆ ಮುರಿದು, ಗವಾಸ್ಕರ್ ಸಮಕ್ಕೆ ನಿಂತ ಕೊಹ್ಲಿ]

Injured Shikhar Dhawan ruled out of 3rd Test against New Zealand

ಶನಿವಾರ (ಅಕ್ಟೋಬರ್ 8)ರಂದು ಇಂದೋರ್ ನಲ್ಲಿ ಮೂರನೇ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ಭಾರತ ಈಗಾಗಲೇ 2-0ರ ಅಂತರದಲ್ಲಿ ಸರಣಿಯನ್ನು ವಶಪಡಿಸಿಕೊಂಡಿದೆ.

ಭಾನುವಾರದಂದು ಟ್ರೆಂಟ್ ಬೌಲ್ಟ್ ಅವರ ಎಸೆತವನ್ನು ಎದುರಿಸುವಾಗ ಧವನ್ ಅವರು ಎಡಗೈ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಧವನ್ ಅವರಿಗೆ 15 ದಿನಗಳ ಕಾಲ ವಿಶ್ರಾಂತಿ ಅಗತ್ಯವಿದೆ ಎಂದು ಬಿಸಿಸಿಐ ಪ್ರಕಟಿಸಿದೆ.

ಎರಡನೇ ಟೆಸ್ಟ್ ಪಂದ್ಯವನ್ನು 178 ರನ್ ಗಳಿಂದ ಭಾರತ ಗೆದ್ದುಕೊಂಡಿದೆ.(ಐಎಎನ್ಎಸ್)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India opener Shikhar Dhawan has been ruled out of the third and final Test against New Zealand, the Board of Control for Cricket in India's (BCCI) media manager said here on Monday (October 3).
Please Wait while comments are loading...