ಐಪಿಎಲ್ ವೈಯಕ್ತಿಕ ದಾಖಲೆಗಳು 2008-2015

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 12: ಹತ್ತು ಹಲವು ವಿವಾದ, ಹೊಸ ಹೊಸ ಪ್ರತಿಭೆಗಳ ಆಟ, ಪ್ರೇಕ್ಷಕರಿಗೆ ರಸದೂಟ ನೀಡುವ ಇಂಡಿಯನ್ ಪ್ರಿಮಿಯರ್ ಲೀಘ್ (ಐಪಿಎಲ್) ಎಂಬ ಮನರಂಜನಾಯುಕ್ತ ಕ್ರಿಕೆಟ್ ಲೀಗ್ ನ 9ನೇ ಆವೃತ್ತಿ ಸದ್ಯಕ್ಕೆ ಚಾಲನೆಯಲ್ಲಿದೆ. ಕಳೆದ ಎಂಟು ಆವೃತ್ತಿಯಲ್ಲಿ ದಾಖಲಾದ ಸಾಧನೆಗಳ ಇಣುಕು ನೋಟ ಇಲ್ಲಿದೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಎರಡು ಬಾರಿ ಕಪ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಚೊಚ್ಚಲ ಕಪ್ ವಿಜೇತ ರಾಜಸ್ಥಾನ ರಾಯಲ್ಸ್ ತಂಡಗಳು ಇನ್ನೆರಡು ವರ್ಷಗಳ ಕಾಲ ಐಪಿಎಲ್ ನಲ್ಲಿ ಆಡುವಂತಿಲ್ಲ. ಮ್ಯಾಚ್ ಫಿಕ್ಸಿಂಗ್ ಆರೋಪದ ಮೇಲೆ ತಂಡದ ಮಾಲೀಕರು ಸೇರಿದಂತೆ ತಂಡಗಳು ವಜಾಗೊಂಡಿವೆ. ಗುಜರಾತ್ ಲಯನ್ಸ್ ಹಾಗೂ ರೈಸಿಂಗ್ ಪುಣೆ ಜೈಂಟ್ಸ್ ಹೊಸ ತಂಡಗಳಾಗಿ ಸೇರ್ಪಡೆಗೊಂಡಿವೆ.

ಐಪಿಎಲ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರಿಗೆ ಕಿತ್ತಳೆ ಬಣ್ಣದ ಟೋಪಿ ಹಾಗೂ ಅತಿಹೆಚ್ಚು ವಿಕೆಟ್ ಪಡೆದವರಿಗೆ ನೇರಳೆ ಬಣ್ಣದ ಟೋಪಿ ನೀಡಲಾಗುತ್ತದೆ. ಈ ರೀತಿ ವೈಯಕ್ತಿಕ ಸಾಧನೆ ಮಾಡಿದವರ ಪಟ್ಟಿ ಇಲ್ಲಿದೆ:

Individual records in Indian Premier League (IPL)

* ಇನ್ನಿಂಗ್ಸ್ ವೊಂದರಲ್ಲಿ ಅತಿ ಹೆಚ್ಚು ರನ್ ಗಳಿಕೆ: ಅಜೇಯ 175 ಕ್ರಿಸ್ ಗೇಲ್ (ಆರ್ ಸಿಬಿ) vs ಪುಣೆ ವಾರಿಯರ್ಸ್ (2013)

* ಐಪಿಎಲ್ ನಲ್ಲಿ ಅತ್ಯಧಿಕ ರನ್ ಗಳಿಕೆ: ಸುರೇಶ್ ರೈನಾ 129 ಇನ್ನಿಂಗ್ಸ್, 3699 ರನ್ ಗಳಿಕೆ

* ಅತಿ ಹೆಚ್ಚು ಜೊತೆಯಾಟದಲ್ಲಿ ರನ್ ಗಳಿಕೆ: 2015ರಲ್ಲಿ 215 ರನ್, ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲೆಯರ್ಸ್ (ಆರ್ ಸಿಬಿ ಪರ)

* ಅತಿ ಉತ್ತಮ ಸ್ತ್ರೈಕ್ ರೇಟ್: ಆಂಡ್ರೆ ರಸೆಲ್ 177.88

* ಅತಿ ಹೆಚ್ಚು ಸಿಕ್ಸರ್: 230, ಕ್ರಿಸ್ ಗೇಲ್ (2009-2015)

* ಅತಿ ವೇಗದ ಶತಕ: ಕ್ರಿಸ್ ಗೇಲ್ 30 ಎಸೆತಗಳಲ್ಲಿ ,ಪುಣೆ ವಿರುದ್ಧ 2013

* ಅತಿ ವೇಗದ ಅರ್ಧಶತಕ: ಯೂಸುಫ್ ಪಠಾಣ್ 15ಎಸೆತಗಳಲ್ಲಿ, ಸನ್ ರೈಸರ್ಸ್ ಹೈದರಾಬಾದ್, 2014

* ಅತಿ ಹೆಚ್ಚು ವಿಕೆಟ್ ಗಳಿಕೆ : ಲಸಿತ್ ಮಾಲಿಂಗ, 98 ಪಂದ್ಯಗಳಲ್ಲಿ 143ವಿಕೆಟ್

* ಅತಿ ಹೆಚ್ಚು ರನ್ ಚೆಚ್ಚಿಸಿಕೊಂಡ ಬೌಲರ್: ಇಶಾಂತ್ ಶರ್ಮ (ಸನ್ ರೈಸರ್ಸ್ ಹೈದರಾಬಾದ್) 4 ಓವರ್ ಗಳಲ್ಲಿ 66ರನ್ (ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ) 2013

-
-
-
-
-
-
-
ಐಪಿಎಲ್ ವೈಯಕ್ತಿಕ ದಾಖಲೆಗಳು 2008-2015

ಐಪಿಎಲ್ ವೈಯಕ್ತಿಕ ದಾಖಲೆಗಳು 2008-2015

* ಅತಿ ಹೆಚ್ಚು ಕ್ಯಾಚ್ ಹಿಡಿದವರು: ಸುರೇಶ್ ರೈನಾ 132 ಪಂದ್ಯಗಳಲ್ಲಿ 75 ಕ್ಯಾಚುಗಳು

* ವಿಕೆಟ್ ಕೀಪರ್ ಸಾಧನೆ: ದಿನೇಶ್ ಕಾರ್ತಿಕ್ 84 ವಿಕೆಟ್ (61 ಕ್ಯಾಚ್, 23 ಸ್ಟಂಪಿಂಗ್)

* ಅತಿ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ: ಕ್ರಿಸ್ ಗೇಲ್ -16

* ಅತಿ ಹೆಚ್ಚು ಶೂನ್ಯ ಸಂಪಾದನೆ: ಗೌತಮ್ ಗಂಭೀರ್ ಹಾಗೂ ಹರ್ಭಜನ್ ಸಿಂಗ್ 11ಬಾರಿ

* ಅತಿ ಹೆಚ್ಚು ಹ್ಯಾಟ್ರಿಕ್ ಸಾಧನೆ: ಅಮಿತ್ ಮಿಶ್ರಾ(ಡೆಕ್ಕನ್ ಚಾರ್ಜರ್ಸ್, ಡೆಲ್ಲಿ ಡೇರ್ ಡೆವಿಲ್ಸ್, ಸನ್ ರೈಸರ್ಸ್ ಹೈದರಾಬಾದ್)

* ಅತಿ ಹೆಚ್ಚು ಪಂದ್ಯಗಳಿಗೆ ನಾಯಕ: ಎಂಎಸ್ ಧೋನಿ (ಸಿಎಸ್ ಕೆ) -127

* ಅತಿ ಹೆಚ್ಚು ಪಂದ್ಯಗಳಿಗೆ ಅಂಪೈರ್ : ಕುಮಾರ್ ಧರ್ಮಸೇನಾ (ಶ್ರೀಲಂಕಾ)

(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Here is a look at individual records from the last four editions of IPL. Highest runs scored, Orange Caps holders, Purple Cap holders in Indian Premier League (IPL) from 2008-2015.
Please Wait while comments are loading...