ವಿರಾಟ್ ಕೊಹ್ಲಿ ಪಡೆಯಿಂದ 49 ದಿನಗಳ ಕಾಲ ವಿಂಡೀಸ್ ಟೂರ್

Posted By:
Subscribe to Oneindia Kannada

ಮುಂಬೈ, ಜೂನ್ 02 : ವೆಸ್ಟ್ ಇಂಡೀಸ್ ವಿರುದ್ಧ ನಾಲ್ಕು ಟೆಸ್ಟ್ ಪಂದ್ಯಗಳನ್ನು ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಆಡಲಿದೆ. ಜುಲೈ 6 ರಿಂದ ಪ್ರವಾಸ ಆರಂಭಗೊಳ್ಳಲಿದೆ.

ಜುಲೈ 6 ರಂದು ಸೈಂಟ್ ಕಿಟ್ಸ್ ತಲುಪಲಿರುವ ಟೀಂ ಇಂಡಿಯಾ ಮೊದಲಿಗೆ ಕೆಲ ಅಭ್ಯಾಸ ಪಂದ್ಯಗಳನ್ನಾಡಲಿದೆ. ಜುಲೈ 21 ರಂದು ನಾಲ್ಕು ಟೆಸ್ಟ್ ಗಳ ಸರಣಿ ನಡೆಯಲಿದೆ.

India's Tour of West Indies: 49-days tour begins from July 6

ಜುಲೈ 9 ರಂದು ವಾರ್ನರ್ ಪಾರ್ಕ್ ನಲ್ಲಿ ಎರಡು ದಿನಗಳ ಪಂದ್ಯವಾಡಲಿರುವ ಭಾರತ, ಜುಲೈ 14-16 ರ ತನಕ ಮೂರು ದಿನಗಳ ಪಂದ್ಯವಾಡಲಿದೆ.[ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಭಾರತ ತಂಡ ಪ್ರಕಟ]

* ಮೊದಲ ಟೆಸ್ಟ್ ಪಂದ್ಯ ಜುಲೈ 21-25ರ ತನಕ ಸರ್ ವಿವ್ ರಿಚರ್ಡ್ಸ್ ಸ್ಟೇಡಿಯಂ, ಆಂಟಿಗುವಾ.
* ಎರಡನೇ ಟೆಸ್ಟ್ ಪಂದ್ಯ ಜುಲೈ 30 -ಆಗಸ್ಟ್ 3 ಸಬೀನಾ ಪಾರ್ಕ್ , ಜಮೈಕಾ.
* ಮೂರನೇ ಟೆಸ್ಟ್ ಪಂದ್ಯ: ಆಗಸ್ಟ್ 9 -13 ರ ತನಕ ಸೈಂಟ್ ಲೂಸಿಯಾದ ಡರೇನ್ ಸಾಮಿ ಸ್ಟೇಡಿಯಂ
* ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಆಗಸ್ಟ್ 18-22 ರ ತನಕ ಟ್ರಿನಿಡಾಡ್ ನ ಕ್ವೀನ್ಸ್ ಪಾರ್ಕ್ ಒವಲ್ ನಲ್ಲಿ ನಿಗದಿಯಾಗಿದೆ.

ಆಗಸ್ಟ್ 23 ರಂದು ವಿಂಡೀಸ್ ಪ್ರವಾಸ ಮುಗಿಸಿ ಟೀಂ ಇಂಡಿಯಾ ಸ್ವದೇಶಕ್ಕೆ ಮರಳಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಪ್ರಕಟಿಸಿದೆ. 2011 ರಲ್ಲಿ ಎಂಎಸ್ ಧೋನಿ ನೇತೃತ್ವದ ಟೀಂ ಇಂಡಿಯಾ ವಿಂಡೀಸ್ ಪ್ರವಾಸವನ್ನು 1-0 ಅಂತರದಲ್ಲಿ ಜಯಿಸಿದ್ದನ್ನು ಇಲ್ಲಿ ಸ್ಮರಿಸಬಹುದು.(ಪಿಟಿಐ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India will begin their four-Test series against the West Indies on July 21 after playing a couple of warm-up matches in their 49-day tour of the Caribbean.
Please Wait while comments are loading...