ಕ್ರಿಕೆಟ್ : ಪಾಕಿಸ್ತಾನಕ್ಕೆ 3 ಪಂದ್ಯಗಳನ್ನು ಬಿಟ್ಟುಕೊಟ್ಟ ಭಾರತ

Posted By:
Subscribe to Oneindia Kannada

ದುಬೈ, ನವೆಂಬರ್ 23: ಭಾರತ ಹಾಗೂ ಪಾಕಿಸ್ತಾನ ನಡುವೆ ಗಡಿಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರೆದಿರುವುದರಿಂದ ಭಾರತೀಯ ಮಹಿಳಾ ಕ್ರಿಕೆಟ್ ತಂಡ ದಿಟ್ಟ ನಿರ್ಧಾರ ಕೈಗೊಂಡಿದೆ. ಪಾಕಿಸ್ತಾನ ವಿರುದ್ಧದ ಮೂರು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಭಾರತ ತಂಡ ಬಿಟ್ಟುಕೊಟ್ಟಿದೆ. ಪಾಕಿಸ್ತಾನ ವಿರುದ್ಧ ಪಂದ್ಯವಾಡುವುದಿಲ್ಲ ಎಂದು ಐಸಿಸಿಗೆ ತಿಳಿಸಲಾಗಿದೆ.

ಈ ಬಗ್ಗೆ ಬುಧವಾರ(ನವೆಂಬರ್ 23) ಸ್ಪಷ್ಟನೆ ನೀಡಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ), ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಹಾಗೂ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ಲಿಖಿತ ಹೇಳಿಕೆಯನ್ನು ನೀಡಿದೆ.

Indian women's cricket team 'forfeits' 3 matches against Pakistan

ಈ ಹೇಳಿಕೆಯನ್ನು ಆಧಾರಿಸಿ ಐಸಿಸಿ ತಾಂತ್ರಿಕ ಸಮಿತಿ, ಪಾಕಿಸ್ತಾನಕ್ಕೆ ಭಾರತ ಮೂರು ಪಂದ್ಯಗಳನ್ನು ಬಿಟ್ಟುಕೊಟ್ಟಿದೆ. ಐಸಿಸಿ ಮಹಿಳಾ ಚಾಂಪಿಯನ್ ಶಿಪ್ ನ 6ನೇ ಸುತ್ತಿನ ಮೂರು ಪಂದ್ಯಗಳನ್ನು ಬಿಟ್ಟಿರುವುದರಿಂದ ಅಂಕಗಳು ಪಾಕಿಸ್ತಾನಕ್ಕೆ ಸಲ್ಲಬೇಕು ಎಂದು ಐಸಿಸಿ ನಿರ್ಧರಿಸಿದೆ.

ಇಂಗ್ಲೆಂಡಿನಲ್ಲಿ 26 ಜೂನ್ 2017 ರಿಂದ 23 ಜುಲೈ 2017ರ ನಡುವೆ ಐಸಿಸಿ ಮಹಿಳಾ ವಿಶ್ವಕಪ್ ನಡೆಯಲಿದ್ದು, ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ವೆಸ್ಟ್ ಇಂಡೀಸ್ ನೇರವಾಗಿ ಅರ್ಹತೆ ಪಡೆದುಕೊಂಡಿವೆ.

ಭಾರತ, ದಕ್ಷಿಣ ಆಫ್ರಿಕಾ, ಪಾಕಿಸ್ತಾನ ಹಾಗೂ ಶ್ರೀಲಂಕಾ, ಬಾಂಗ್ಲಾದೇಶ, ಐರ್ಲೆಂಡ್, ಜಿಂಬಾಬ್ವೆ, ಸ್ಕಾಲೆಂಡ್, ಪಪುವಾ ನ್ಯೂ ಗಿನಿಯಾ ಹಾಗೂ ಥೈಲ್ಯಾಂಡ್ ಅರ್ಹತಾ ಸುತ್ತಿನಲ್ಲಿ ಸ್ಪರ್ಧೆಯಲ್ಲಿವೆ. ಫೆಬ್ರವರಿ 2017ರ ತನಕ ಶ್ರೀಲಂಕಾದಲ್ಲಿ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿವೆ,

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Following consideration of written submissions from both the PCB and the BCCI, the ICC Technical Committee has ruled that the India Women's team is deemed to have forfeited each of the 3 matches
Please Wait while comments are loading...