ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್ ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿ ಮತ್ತೊಂದು ದಾಖಲೆ!

By Ramesh

ಬೆಂಗಳೂರು, ನವೆಂಬರ್. 30 : ಟೀಂ ಇಂಡಿಯಾದ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ. ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ 10 ರಿಂದ 4ನೇ ಸ್ಥಾನಕ್ಕೆ ಜಿಗಿದಿದ್ದ ಕೊಹ್ಲಿ, 3ನೇ ಟೆಸ್ಟ್ ಬಳಿಕ ಟಾಪ್ ನಂ 3 ಸ್ಥಾನಕ್ಕೆ ಜಿಗಿದಿದ್ದಾರೆ.

ಇತ್ತೀಚೆಗಷ್ಟೇ 10ನೇ ಸ್ಥಾನದಿಂದ 4ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದ ಕೊಹ್ಲಿ ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ 62 ಮತ್ತು 6* ರನ್ ಗಳಿಸ ಮೂಲಕ 833 ಅಂಕಗಳೊಂದಿಗೆ 3ನೇ ಸ್ಥಾನಕ್ಕೆ ಏರಿದರು.

ಇಂಗ್ಲೆಂಡ್ ನ ಜೋ ರೂಟ್ 2ನೇ ಸ್ಥಾನ ಮತ್ತು ಆಸೀಸ್ ನ ಸ್ಟೀವನ್ ಸ್ಮಿತ್ ಅಗ್ರಸ್ಥಾನದಲ್ಲಿದ್ದಾರೆ. ಚೇತೇಶ್ವರ ಪೂಜಾರ ಟೆಸ್ಟ್ ಶ್ರೇಯಾಂಕದಲ್ಲಿ 8ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.

Indian captain Virat Kohli achieves another high in Test career

28 ವಯಸ್ಸಿನ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟಿ-20 ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇನ್ನು ಏಕದಿನ ಶ್ರೇಯಾಂದಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಮಂಗಳವಾರ ಟೀಂ ಇಂಡಿಯಾ 3ನೇ ಟೆಸ್ಟ್ ನಲ್ಲಿ ಇಂಗ್ಲೆಂಡ್ ತಂಡವನ್ನು 8 ವಿಕೆಟ್ ಗಳಿಂದ ಮಣಿಸಿ ಸರಣಿಯಲ್ಲಿ 2-೦ ಮುನ್ನಡೆ ಸಾಧಿಸಿದೆ. ಇಂಗ್ಲೆಂಡ್ ನ ಬೈರ್ಸ್ಟೋವ್ 9ನೇ ಸ್ಥಾನ ಪಡೆದಿದ್ದಾರೆ.

ಐಸಿಸಿ ಟೆಸ್ಟ್ ಕ್ರಿಕೆಟ್ ಟಾಪ್ 10 ಶೇಯಾಂಕ ಪಟ್ಟಿ:
1. ಸ್ಟೀವನ್ ಸ್ಮಿತ್ (ಆಸ್ಟ್ರೇಲಿಯ)- 897 ಅಂಕ
2. ಜೋ ರೂಟ್(ಇಂಗ್ಲೆಂಡ್)- 847
3. ವಿರಾಟ್ ಕೊಹ್ಲಿ(ಭಾರತ)- 833
4. ಕೇನ್ ವಿಲಿಯಮ್ಸನ್(ನ್ಯೂಜಿಲೆಂಡ್)- 817
5. ಹಾಶಿಮ್ ಆಮ್ಲಾ(ದ.ಆಫ್ರಿಕಾ)- 791
6. ಎಬಿಡಿ ವಿಲಿಯರ್ಸ್(ದ.ಆಫ್ರಿಕಾ)- 778
7. ಡೆವಿಡ್ ವಾರ್ನರ್(ಆಸ್ಟ್ರೇಲಿಯ)- 772
8. ಚೇತೇಶ್ವರ ಪೂಜಾರ(ಭಾರತ)- 760
9. ಜಾನಿ ಬೈರ್ಸ್ಟೋವ್ (ಇಂಗ್ಲೆಂಡ್)- 759
10. ಯೂನಿಸ್ ಖಾನ್(ಪಾಕಿಸ್ತಾನ)- 753

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X