ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಜಿಂಬಾಬ್ವೆ ಪ್ರವಾಸಕ್ಕೆ ಧೋನಿ, ಕೊಹ್ಲಿ ಹೋಗ್ತಾರಾ?

By Mahesh

ಮುಂಬೈ, ಜೂ.26: ಟೀಂ ಇಂಡಿಯಾದ ಜಿಂಬಾಬ್ವೆ ಪ್ರವಾಸ ನಡೆಯುವುದೇ ಅನುಮಾನ ಎಂಬ ಸುದ್ದಿ ಈಗ ಸತ್ತಿದೆ. ಹೊಸ ಸುದ್ದಿ ಪ್ರಕಾರ, ಈ ಟೂರ್ನಿಗೆ ಧೋನಿ ಹಾಗೂ ಕೊಹ್ಲಿ ಹೋಗುತ್ತಾರಾ? ಎಂಬ ಪ್ರಶ್ನೆ ಕಾಡುತ್ತಿದೆ. ಎಲ್ಲಕ್ಕೂ ಉತ್ತರ ಜೂ.29ರಂದು ಸಿಗಲಿದೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯ್ಕೆ ಸಮಿತಿ ಸದಸ್ಯರು, ಜೂ.29ರಂದು ದೆಹಲಿಯಲ್ಲಿ ಸಭೆ ಸೇರಿ ಜಿಂಬಾಬ್ವೆ ಪ್ರವಾಸಕ್ಕೆ ಟೀಂ ಇಂಡಿಯಾ ಸದಸ್ಯರನ್ನು ಅಯ್ಕೆ ಮಾಡಲಿದ್ದಾರೆ. [2015-16: ಟೀಂ ಇಂಡಿಯಾಕ್ಕೆ ಬಿಗಿ ವೇಳಾಪಟ್ಟಿ ]

ಐಸಿಸಿ ವಿಶ್ವಕಪ್ 2015, ಐಪಿಎಲ್, ಬಾಂಗ್ಲಾ ದೇಶ ಪ್ರವಾಸ ನಂತರ ಟೀಂ ಇಂಡಿಯಾದ ಪ್ರಮುಖ ಆಟಗಾರರು ಜಿಂಬಾಬ್ವೆ ಪ್ರವಾಸದಿಂದ ಹೊರಗುಳಿಯುವ ಸುದ್ದಿ ಕೂಡಾ ಬಂದಿದೆ. ಧೋನಿ, ಕೊಹ್ಲಿ ವಿಶ್ರಾಂತಿ ಬಯಸುವ ಸಾಧ್ಯತೆಯಿದೆ ಎನ್ನಲಾಗಿದೆ. ಆದರೆ, ಈ ಸಮಯಕ್ಕೆ ಯಾವುದೂ ಸ್ಪಷ್ಟವಾಗಿಲ್ಲ.

 Will Dhoni, Kohli play in zimbabwe


ಈ ಬಗ್ಗೆ ಪ್ರತಿಕ್ರಿಯಿಸಿದ ಆಯ್ಕೆ ಸಮಿತಿ ಮುಖ್ಯಸ್ಥ ಸಂದೀಪ್ ಪಾಟೀಲ್, ಇಲ್ಲಿ ತನಕ ಯಾವ ಆಟಗಾರರು ತಮಗೆ ವಿಶ್ರಾಂತಿ ಬೇಕು, ಪ್ರವಾಸಕ್ಕೆ ಅಲಭ್ಯರಾಗಿದ್ದೇವೆ ಎಂದು ಲಿಖಿತ ಮನವಿ ಸಲ್ಲಿಸಿಲ್ಲ ಎಂದಿದ್ದಾರೆ. [ಜುಲೈನಲ್ಲಿ ಜಿಂಬಾಬ್ವೆ ಜೊತೆ ಟೀಂ ಇಂಡಿಯಾ ಕದನ]

ಆಟಗಾರರ ಲಭ್ಯತೆ, ದೈಹಿಕ ಸಾಮರ್ಥ್ಯ ಪರೀಕ್ಷೆ ವರದಿ ಮೇರೆಗೆ ಆಯ್ಕೆ ಸಮಿತಿ ಮುಂದೆ ಆಟಗಾರರ ಪಟ್ಟಿಯನ್ನು ಸಿದ್ಧಪಡಿಸಿ ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಇಡಲಿದ್ದಾರೆ. ಸದ್ಯಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಮೀಟಿಂಗ್ ನಲ್ಲಿ ಅನುರಾಗ್ ಠಾಕೂರ್ ನಿರತರಾಗಿದ್ದಾರೆ.

ಅಸಲಿಗೆ ಟೂರ್ನಿ ನಡೆಯುವುದೆ?: ಜೀ ನೆಟ್ವರ್ಕ್ ಹಾಗೂ ಟೆನ್ ಸ್ಫೋರ್ಟ್ ಗೆ ಜಿಂಬಾಬ್ವೆ ಪ್ರವಾಸದ ಪ್ರಸಾರ ಹಕ್ಕು ಮಾರಾಟ ಮಾಡಲು ಬಿಸಿಸಿಐ ಸಿದ್ಧವಿಲ್ಲ.

ಅದರೆ, ಜಿಂಬಾಬ್ವೆ ಆಡುವ ಎಲ್ಲಾ ಅಂತಾರಾಷ್ಟ್ರೀಯ ಪಂದ್ಯಗಳ ಪ್ರಸಾರ ಹಕ್ಕು ಟೆನ್ ಸ್ಫೋರ್ಟ್ ಕೈಲಿದೆ. ಈ ಜಟಾಜಟಿ ಲಾಭಾಂಶಕ್ಕೆ ಪ್ರವಾಸವನ್ನೇ ಬಲಿ ಹಾಕಿದರೂ ಅಚ್ಚರಿ ಪಡಬೇಕಾಗಿಲ್ಲ. ಅಥವಾ ಒಳ್ಳೆ ಲಾಭಕ್ಕೆ ಡೀಲ್ ಕುದುರಿದರೆ ಮುಂದಿನ ವರ್ಷಕ್ಕೆ ಪ್ರವಾಸವನ್ನು ಬಿಸಿಸಿಐ ಮುಂದೂಡಲಿದೆ.

ಲಭ್ಯವಿರುವ ಮಾಹಿತಿ ಪ್ರಕಾರ ಜಿಂಬಾಬ್ವೆ vs ಭಾರತ ಪ್ರವಾಸದ ವೇಳಾಪಟ್ಟಿ
* ಜುಲೈ 10: ಮೊದಲ ಏಕದಿನ ಪಂದ್ಯ, ಹರಾರೆ (12.30 IST)
* ಜುಲೈ 12: ಎರಡನೇ ಏಕದಿನ ಪಂದ್ಯ, ಹರಾರೆ (12.30 IST)
* ಜುಲೈ 14: ಮೂರನೇ ಏಕದಿನ ಪಂದ್ಯ, ಹರಾರೆ (12.30 IST)

* ಜುಲೈ 17: ಮೊದಲ ಟ್ವೆಂಟಿ 20 ಪಂದ್ಯ, ಹರಾರೆ (16.30 IST)
* ಜುಲೈ 19: ಎರಡನೇ ಟ್ವೆಂಟಿ 20 ಪಂದ್ಯ, ಹರಾರೆ (16.30 IST)
(ಪಿಟಿಐ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X