ಭಾರತದ 550 ರನ್ ಗುರಿ ಬೆನ್ನತ್ತಿ ಗೆಲ್ಲುವುದೆ ಶ್ರೀಲಂಕಾ?

Posted By:
Subscribe to Oneindia Kannada

ಗಾಲೆ (ಶ್ರೀಲಂಕಾ), ಜುಲೈ 29 : ಭಾರತದ ನಾಯಕ ವಿರಾಟ್ ಕೊಹ್ಲಿ ಅವರು 17ನೇ ಟೆಸ್ಟ್ ಶತಕ ಬಾರಿಸುತ್ತಿದ್ದಂತೆ, ಭಾರತ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ 240ಕ್ಕೆ ಡಿಕ್ಲೇರ್ ಮಾಡಿಕೊಂಡಿದ್ದು, ಶ್ರೀಲಂಕಾಕ್ಕೆ 550 ರನ್ ಗಳ ಬೃಹತ್ ಗುರಿ ನೀಡಿದೆ.

ಗಾಲೆ ಟೆಸ್ಟ್: 3ನೇ ದಿನ, ಶ್ರೀಲಂಕಾ ಆಲೌಟ್, ಮುನ್ನಡೆ ಸಾಧಿಸಿದ ಭಾರತ

ಶ್ರೀಲಂಕಾ ವಿರುದ್ಧದ ಈ ಮೊದಲ ಟೆಸ್ಟ್ ನಲ್ಲಿ ಆರಂಭದಿಂದಲೂ ಪ್ರಭುತ್ವ ಸಾಧಿಸಿರುವ ಭಾರತ, ಶ್ರೀಲಂಕಾ ವಿರುದ್ಧ ಗೆಲ್ಲುವ ತವಕದಲ್ಲಿದೆ. ಗಾಲೆಯಲ್ಲಿರುವ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಟೆಸ್ಟ್ ನಲ್ಲಿ ಇನ್ನೂ ಎರಡು ದಿನ ಬಾಕಿ ಇರುವುದರಿಂದ ಶ್ರೀಲಂಕಾಕ್ಕೆ ಗೆಲ್ಲುವುದು ಬಲು ಕಷ್ಟ.

Indian sets the target of 550 runs to Sri Lanka

ಮೊದಲ ಇನ್ನಿಂಗ್ಸ್ ನಲ್ಲಿ ಧವನ್ ಮತ್ತು ಪೂಜಾರಾ ಆಕರ್ಷಕ ಶತಕ ಗಳಿಸಿದ್ದರು, ಎರಡನೇ ಇನ್ನಿಂಗ್ಸ್ ನಲ್ಲಿ ಕೊಹ್ಲಿ ಮಿಂಚಿದ್ದಾರೆ. ವಿರಾಟ್ ಕೊಹ್ಲಿ ಕೇವಲ 136 ಚೆಂಡುಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಸಿಡಿಸಿ 103 ರನ್ ಗಳಿಸಿದರು. ಅವರ ಜೊತೆ ಅಜಿಂಕ್ಯಾ ರಹಾನೆ 23 ರನ್ ಗಳಿಸಿ ಅಜೇಯರಾಗಿ ಉಳಿದರು.

ಮೂರನೇ ದಿನದ ಕೊನೆಯಲ್ಲಿ ಭಾರತ 3 ವಿಕೆಟ್ ಕಳೆದುಕೊಂಡು 189 ರನ್ ಗಳಿಸಿತ್ತು. ಆರಂಭಿಕ ಆಟಗಾರ ಅಭಿನವ್ ಮುಕುಂದ್ ಅವರು 8 ಬೌಂಡರಿಗಳಿದ್ದ 81 ರನ್ ಗಳಿಸಿ ಗಮನ ಸೆಳೆದರು. ಶತಕವೀರರಾದ ಧವನ್ ಮತ್ತು ಪೂಜಾರಾ ಎರಡನೇ ಇನ್ನಿಂಗ್ಸ್ ನಲ್ಲಿ ಬೇಗನೆ ಪೆವಿಲಿಯನ್ ಸೇರಿಕೊಂಡಿದ್ದರು.

ತವರಿನಲ್ಲಿ ಆಡುತ್ತಿರುವ ಶ್ರೀಲಂಕಾ ಎರಡನೇ ಇನ್ನಿಂಗ್ಸ್ ನಲ್ಲಿ ಅತ್ಯಂತ ಜಾಗರೂಕತೆಯಿಂದ ಆಡಬೇಕಿದೆ. ಮೊದಲ ಇನ್ನಿಂಗ್ಸ್ ನಲ್ಲಿ 83 ಗರಿಷ್ಠ ರನ್ ಗಳಿಸಿದ್ದ ಮಾಜಿ ನಾಯಕ ಮ್ಯಾಥ್ಯೂಸ್ ಅವರನ್ನೇ ಹೆಚ್ಚಾಗಿ ತಂಡ ನೆಚ್ಚಿಕೊಂಡಿದೆ. ತರಂಗ (64) ಮತ್ತು ಪೆರೀರಾ (92) ಕೂಡ ಮೊದಲ ಇನ್ನಿಂಗ್ಸ್ ನಲ್ಲಿ ಅರ್ಧ ಶತಕ ಗಳಿಸಿದ್ದರು.

ಭಾರತದ ಪರ ಮೊಹಮ್ಮದ್ ಶಮಿ 2 ಮತ್ತು ರವೀಂದ್ರ ಜಡೇಜಾ 3 ವಿಕೆಟ್ ಕಬಳಿಸಿ ಮಿಂಚಿದ್ದರು. ರವಿಚಂದ್ರನ್ ಅಶ್ವಿನ್ ಅವರನ್ನು ಹೇಗೆ ಎದುರಿಸುತ್ತದೆ ಎಂದು ಕೂಡ ಕುತೂಹಲದ ಸಂಗತಿಯಾಗಿದೆ. ಭರ್ಜರಿ ಮಳೆ ಸುರಿದರೆ ಮಾತ್ರ ಪಂದ್ಯ ಡ್ರಾ ಆಗಿ ಶ್ರೀಲಂಕಾ ಬಚಾವ್ ಆಗಬಹುದು. ಇಲ್ಲದಿದ್ದರೆ ಶ್ರೀಲಂಕಾಕ್ಕೆ ಸೋಲು ಕಟ್ಟಿಟ್ಟ ಬುತ್ತಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
India has set the target of 550 runs to Sri Lanka in the first test at Galle. Captain Virat Kohli scored his 17 century by hitting 103 not out. It will be a daunting task for Sri Lanka to reach this target.
Please Wait while comments are loading...