ಆಸೀಸ್ ನಲ್ಲಿ ಭಾರತ ಮೂಲದ 'ದೂಸ್ರಾ' ಸ್ಪಿನ್ನರ್ ಮಿಂಚಿಂಗ್

Posted By:
Subscribe to Oneindia Kannada

ನ್ಯೂ ಸೌತ್ ವೇಲ್ಸ್, ಫೆ. 22: ಭಾರತೀಯ ಮೂಲದ ಸ್ಪಿನ್ನರ್ ಮೇಲೆ ಆಸ್ಟ್ರೇಲಿಯಾದ ಕ್ರಿಕೆಟರ್ಸ್ ಕಣ್ಣು ಬಿದ್ದಿದೆ. ಕ್ಯಾನ್ ಬೆರಾದಲ್ಲಿ ಜನಿಸಿದ ಅರ್ಜುನ್ ನಾಯರ್ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದು. ತನ್ನ ಪ್ರತಿಭೆಯ ಮೂಲಕ ನ್ಯೂ ಸೌತ್ ವೇಲ್ಸ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಶೆಫೀಲ್ಡ್ ಶೀಲ್ಡ್ ಟೂರ್ನಿಯಲ್ಲಿ ದಕ್ಷಿಣ ಆಸ್ಟ್ರೇಲಿಯಾ ವಿರುದ್ಧ ಆಡಲು ತಂಡವನ್ನು ಪ್ರಕಟಿಸಿದ ನ್ಯೂ ಸೌತ್ ವೇಲ್ಸ್, 17 ವರ್ಷ ವಯಸ್ಸಿನ ನಾಯರ್ ಅವರನ್ನು ಆಯ್ಕೆ ಮಾಡಿಕೊಂಡಿದೆ.[ಆಸ್ಟ್ರೇಲಿಯಾದಲ್ಲಿ ಇತಿಹಾಸ ಬರೆದ ಚೀನಾದ ಕ್ರಿಕೆಟರ್]

ಆಸ್ಟ್ರೇಲಿಯಾದಲ್ಲಿ 'ದೂಸ್ರಾ' ಬೌಲರ್ ಎಂದೇ ಜನಪ್ರಿಯತೆ ಗಳಿಸುತ್ತಿರುವ ನಾಯರ್ ಅವರು ಮುಂದಿನ ಗುರುವಾರ ರೆಡ್ ಬ್ಯಾಕ್ಸ್ ವಿರುದ್ಧ ಬ್ಲೂಸ್ ಪರ ಆಡಲಿದ್ದಾರೆ.

Indian origin spinner Arjun Nair in New South Wales squad

ಕೆರಬಿಯನ್ ಸ್ಪಿನ್ ಮೋಡಿಗಾರ ಸುನಿಲ್ ನರೈನ್ ರೀತಿಯಲ್ಲಿ ಬೌಲಿಂಗ್ ಮಾಡುವ ಅರ್ಜುನ್ ಅವರು ಪಿಚ್ ನ ಎರಡು ಬದಿಯಲ್ಲೂ ಚೆಂಡನ್ನು ತಿರುಗಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ನ್ಯೂ ಸೌತ್ ವೇಲ್ಸ್ ಕೋಚ್ ಟ್ರೆಂಟ್ ಜಾನ್ಸನ್ ಹೊಗಳಿದ್ದಾರೆ.

ಇತ್ತೀಚೆಗೆ ಪಾಕಿಸ್ತಾನ, ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ಅಂಡರ್ 19 ತ್ರಿಕೋನ ಸರಣಿಯಲ್ಲಿ 10 ವಿಕೆಟ್ ಪಡೆದಿದ್ದಲ್ಲದೆ 89 ಎಸೆತಗಳಲ್ಲಿ ಶತಕ ಬಾರಿಸಿದ್ದಾರೆ.

ನಾಥನ್ ಲಿಯಾನ್, ಸ್ಟೀಫನ್ ಓ ಕೀಫೆ ಅವರು ಗಾಯಗೊಂಡಿರುವುದರಿಂದ ಭಾರತ ಮೂಲದ ಈ ಸ್ಪಿನ್ನರ್ ಗೆ ಆಸ್ಟ್ರೇಲಿಯಾ ತಂಡ ಸೇರುವ ಅವಕಾಶ ಒದಗಿ ಬಂದರೂ ಅಚ್ಚರಿಯೇನಿಲ್ಲ ಎಂದು ಸ್ಥಳೀಯ ಪತ್ರಿಕೆಗಳು ಬರೆದಿವೆ. (ಪಿಟಿಐ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Young off-spinner Arjun Nair, the Canberra-born son of Indian immigrants, has been included in the New South Wales (NSW) squad for their upcoming Sheffield Shield match against South Australia.
Please Wait while comments are loading...