ಮ್ಯಾಚ್ ಇಲ್ಲದಾಗ ಟೀಂ ಇಂಡಿಯಾ ಆಟಗಾರರು ಏನ್ಮಾಡ್ತಾರೆ?

Posted By:
Subscribe to Oneindia Kannada

ನವದೆಹಲಿ, ಜುಲೈ 27: ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ಗೆದ್ದ ಬಳಿಕ ಟೀಂ ಇಂಡಿಯಾ ಆಟಗಾರರು ಮೈ ಮರೆತ್ತಿಲ್ಲ. ಮೈದಾನದಲ್ಲಿ ಬೆವರು ಹರಿಸಿ, ಜುಲೈ 30ರ ಎರಡನೇ ಟೆಸ್ಟ್ ಪಂದ್ಯಕ್ಕೆ ಸಜ್ಜಾಗುತ್ತಿದ್ದಾರೆ. ಅಭ್ಯಾಸವಾದ ಬಳಿಕ ಆಟಗಾರರು ಏನ್ಮಾಡ್ತಾರೆ ಎಂಬ ಕುತೂಹಲದ ಪ್ರಶ್ನೆ ಎಲ್ಲರಲ್ಲೂ ಇರುತ್ತದೆ. ಇದಕ್ಕೆ ಉತ್ತರ ಇಲ್ಲಿದೆ.

ಕೋಚ್ ಅನಿಲ್ ಕುಂಬ್ಳೆ ಅವರ ಮಾರ್ಗದರ್ಶನದಲ್ಲಿ ವೆಸ್ಟ್ ಇಂಡೀಸ್ ನ ಕಡಲ ಕಿನಾರೆಗಳಲ್ಲಿ ಒಂದು ಸುತ್ತು ಹಾಕಿ ಬಂದಿರುವ ಆಟಗಾರರು ಈಗ ಜಮೈಕಾ ಸೇರಿದ್ದಾರೆ. ಪ್ರಾಕ್ಟೀಸ್ ಸೆಷನ್ ಇಲ್ಲದ ಸಮಯದಲ್ಲಿ ಆಟಗಾರರು ಯಾವೆಲ್ಲ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ.[12 ಸಾವಿರ ರನ್ ಕ್ಲಬ್ ಸೇರಿದ ವಿರಾಟ್ ಕೊಹ್ಲಿ]

ಆಟಗಾರರು ಪ್ಲೇಸ್ಟೇಷನ್ ಮೂಲಕ ಇಂಡೋರ್ ಗೇಮ್ಸ್ ನಲ್ಲಿ ನಿರತರಾಗಿದ್ದು, ಖುಷಿಯಿಂದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಇದಲ್ಲದೆ ರೆಸ್ಟೋರೆಂಟ್ ನಲ್ಲಿ ಪುಷ್ಕಳ ಭೋಜನ ಸವಿದಿದ್ದಾರೆ.ನಾಯಕ ಕೊಹ್ಲಿ ಜತೆ ಇತರೆ ಆಟಗಾರರು ಗೇಮ್ಸ್ ಆಡುವ ಚಿತ್ರಗಳು ನಿಮಗಾಗಿ ಇಲ್ಲಿದೆ...

ಚಿತ್ರ ಹಂಚಿಕೊಂಡ ವಿರಾಟ್ ಕೊಹ್ಲಿ

ಚಿತ್ರ ಹಂಚಿಕೊಂಡ ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ ಅವರು ಚಿತ್ರ ಹಂಚಿಕೊಂಡ ಚಿತ್ರದಲ್ಲಿ ವಿರಾಟ್ ಕೊಹ್ಲಿ, ಶಿಖರ್ ಧವನ್, ಕೆಎಲ್ ರಾಹುಲ್, ಸ್ಟುವರ್ಟ್ ಬಿನ್ನಿ ಹಾಗೂ ಮುರಳಿ ವಿಜಯ್ ಅವರು ಭರ್ಜರಿ ಊಟಕ್ಕೆ ತಯಾರಿಯಾಗಿ ಕುಳಿತ್ತಿದ್ದಾರೆ.

ಪ್ಲೇ ಸ್ಟೇಷನ್ ಬಳಸಿ ಗೇಮ್ ಆಡಿದ ಆಟಗಾರರು

ಪ್ಲೇ ಸ್ಟೇಷನ್ ಬಳಸಿ ಗೇಮ್ ಆಡಿದ ಆಟಗಾರರು

ವಿರಾಟ್ ಕೊಹ್ಲಿ, ಚೇತೇಶ್ವರ್ ಪುಜಾರಾ, ಶಾರ್ದೂಲ್ ಠಾಕೂರ್, ಭುವನೇಶ್ವರ್ ಕುಮಾರ್ ಅವರು ಪ್ಲೇಸ್ಟೇಷನ್ ಬಳಸಿ ಫೀಫಾ ಗೇಮ್ ಆಡಿದ್ದನ್ನು ಶಿಖರ್ ಧವನ್ ಅವರು ಹಂಚಿಕೊಂಡಿದ್ದಾರೆ.

ಸ್ಪಿನ್ ಮಾಂತ್ರಿಕರ ಭೋಜನ ವೈಭೋಗ

ಸ್ಪಿನ್ ಮಾಂತ್ರಿಕರ ಭೋಜನ ವೈಭೋಗ

ಟೀಂ ಇಂಡಿಯಾದ ಸ್ಪಿನ್ ಶಕ್ತಿಯಾದ ಆರ್ ಅಶ್ವಿನ್ ಹಾಗೂ ಅಮಿತ್ ಮಿಶ್ರಾ ಅವರು ರೆಸ್ಟೋರೆಂಟ್ ನಲ್ಲಿ ಊಟಕ್ಕೆ ಸಿದ್ಧರಾಗಿರುವುದು. ಆರ್ ಅಶ್ವಿನ್ ಹಂಚಿಕೊಂಡ ಚಿತ್ರ.

ರೋಹಿತ್ ಶರ್ಮ ಅವರು ನೆಟ್ ಫ್ಲಿಕ್ಸ್ ನಲ್ಲಿ ಬ್ಯುಸಿ

ರೋಹಿತ್ ಶರ್ಮ ಅವರು ನೆಟ್ ಫ್ಲಿಕ್ಸ್ ನಲ್ಲಿ ಬ್ಯುಸಿ

ನೆಟ್ ಫ್ಲಿಕ್ಸ್ ನಲ್ಲಿ ಟಿವಿ ಶೋ, ಸಿನಿಮಾ ನೋಡುತ್ತಿರುವುದಾಗಿ ಟ್ವೀಟ್ ಮಾಡಿದ ರೋಹಿತ್ ಶರ್ಮ.

ಪೂಜಾರಾ ಹಂಚಿಕೊಂಡ ಸಂಭ್ರಮ

ಪೂಜಾರಾ ಹಂಚಿಕೊಂಡ ಸಂಭ್ರಮ

ವಿರಾಟ್ ಕೊಹ್ಲಿ, ರವೀಂದ್ರ ಜಡೇಜ ಹಾಗೂ ಶಿಖರ್ ಧವನ್ ಜತೆಗಿನ ಸಂತಸ ಕ್ಷಣವನ್ನು ಹಂಚಿಕೊಂಡ ಚೇತೇಶ್ವರ್ ಪೂಜಾರಾ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
When not playing matches or practicing in the nets, Team India players enjoy each others' company doing various sorts of activities.
Please Wait while comments are loading...