ಸ್ಪಿನ್ ಮೋಡಿಗೆ ತತ್ತರಿಸಿದ ಲಂಕಾ; ಟೀಂ ಇಂಡಿಯಾಕ್ಕೆ ದಾಖಲೆ ಜಯ

Posted By:
Subscribe to Oneindia Kannada

ಗಾಲೆ, ಜುಲೈ 29: ಸ್ಪಿನ್ನರ್ ರವೀಂದ್ರ ಜಡೇಜಾ ಹಾಗೂ ರವಿಚಂದ್ರನ್ ಅಶ್ವಿನ್ ಅವರ ಸ್ಪಿನ್ ತಂತ್ರಗಾರಿಕೆಗೆ ತತ್ತರಿಸಿದ ಶ್ರೀಲಂಕಾ, ಶನಿವಾರ ಮುಕ್ತಾಯಗೊಂಡ ಮೊದಲ ಟೆಸ್ಟ್ ಪಂದ್ಯದಲ್ಲಿ 304 ರನ್ ಗಳ ಭರ್ಜರಿ ಜಯ ಕಂಡಿದೆ.

ಭಾರತದಿಂದ ಶ್ರೀಲಂಕಾ ಪ್ರವಾಸ ಪರಿಷ್ಕೃತ ವೇಳಾಪಟ್ಟಿ

ಪಂದ್ಯದಲ್ಲಿ ಗೆಲುವು ಸಾಧಿಸಲು ಭಾರತ ನೀಡಿದ್ದ 550 ರನ್ ಗಳ ಸವಾಲು ಬೆನ್ನಟ್ಟಿದ್ದ ಶ್ರೀಲಂಕಾ ತನ್ನ ದ್ವಿತೀಯ ಇನಿಂಗ್ಸ್ ನಲ್ಲಿ, 245 ರನ್ ಗಳಿಗೆ ಆಲೌಟ್ ಆಯಿತು.

ಇದು ಹೊರದೇಶಗಳಲ್ಲಿ ನಡೆದ ಟೆಸ್ಟ್ ಪಂದ್ಯವೊಂದರಲ್ಲಿ ಭಾರತ ಕಂಡ ದೊಡ್ಡ ಗೆಲುವಾಗಿದೆ. ಈ ಹಿಂದೆ, 1986ರಲ್ಲಿ ಇಂಗ್ಲೆಂಡ್ ನ ಲೀಡ್ಸ್ ನಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ 279 ರನ್ ಗಳ ಅಂತರದಲ್ಲಿ ಜಯ ಸಾಧಿಸಿದ್ದು ಈವರೆಗಿನ ಭಾರತದ ದಾಖಲೆಯಾಗಿತ್ತು.

ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ

ಇನ್ನು, ಲಂಕಾ ವಿರುದ್ಧದ ಪಂದ್ಯಕ್ಕೆ ಬರುವುದಾದರೆ, ಬುಧವಾರ (ಜುಲೈ 26) ಶುರುವಾಗಿದ್ದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಭಾರತ, ಮೊದಲ ಇನಿಂಗ್ಸ್ ನಲ್ಲಿ ಭಾರತ 600 ರನ್ ಪೇರಿಸಿತ್ತು. ಆನಂತರ, ತನ್ನ ಮೊದಲ ಇನಿಂಗ್ಸ್ ಶುರು ಮಾಡಿದ್ದ ಶ್ರೀಲಂಕಾ, ತನ್ನ ಮೊದಲ ಇನಿಂಗ್ಸ್ ನಲ್ಲಿ 291 ರನ್ ಮೊತ್ತಕ್ಕೆ ಆಲೌಟ್ ಆಗಿತ್ತು.

ಭಾರತದ 550 ರನ್ ಗುರಿ ಬೆನ್ನತ್ತಿ ಗೆಲ್ಲುವುದೆ ಶ್ರೀಲಂಕಾ?

ಆನಂತರ, ತನ್ನ ದ್ವಿತೀಯ ಇನಿಂಗ್ಸ್ ಆರಂಭಿಸಿದ ಭಾರತ, 3 ವಿಕೆಟ್ ಗೆ 203 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. ಅದರಂತೆ, ಗೆಲುವಿಗಾಗಿ 550 ರನ್ ಗಳ ದೊಡ್ಡ ಗುರಿ ಪಡೆದ ಲಂಕಾ, ಪಂದ್ಯದ ನಾಲ್ಕನೇ ದಿನದಾಟದಲ್ಲಿ 245 ರನ್ ಗಳಿಗೆ ಆಲೌಟ್ ಆಯಿತು.

ಉಮೇಶ್ ಯಾದವ್ ಸಾಥ್

ಉಮೇಶ್ ಯಾದವ್ ಸಾಥ್

ಶನಿವಾರದ ದಿನದಾಟ ಆರಂಭವಾದ ಕೆಲವೇ ನಿಮಿಷಗಳಲ್ಲಿ ವೇಗಿ ಮೊಹಮ್ಮದ್ ಶಮಿ ಅವರು, ಅಪಾಯಕಾರಿ ಬ್ಯಾಟ್ಸ್ ಮನ್ ಉಪುಲ್ ತರಂಗಾ (10) ಅವರನ್ನು ಬೇಗನೇ ಪೆವಿಲಿಯನ್ ಗೆ ಅಟ್ಟಿ ವಿಕೆಟ್ ಪತನಕ್ಕೆ ಶ್ರೀಕಾರ ಹಾಕಿದರು. ಆನಂತರ, ಮತ್ತೊಬ್ಬ ವೇಗಿ ಉಮೇಶ್ ಯಾದವ್, ಮೂರನೇ ಕ್ರಮಾಂಕದ ಗುಣ ತಿಲಕ (2) ಅವರನ್ನು ಕ್ರೀಸ್ ನಿಂದ ಆಚೆ ದೂಡಿದರು.

ಲಂಕನ್ನರಿಗೆ ಸ್ಪಿನ್ ತೊಂದರೆ

ಲಂಕನ್ನರಿಗೆ ಸ್ಪಿನ್ ತೊಂದರೆ

ರವೀಂದ್ರ ಜಡೇಜಾ ಅವರು, ಮಧ್ಯಮ ಕ್ರಮಾಂಕದ ಕುಸಲ್ ಮೆಂಡಿಸ್ ಹಾಗೂ ಏಂಜೆಲೋ ಮ್ಯಾಥ್ಯೂಸ್ (2) ಅವರನ್ನು ಪೆವಿಲಿಯನ್ ಗೆ ಕಳುಹಿಸಿದರು. ಆನಂತರ, ದಿನಾಂತ್ಯದ ಹೊತ್ತಿಗೆ ಮತ್ತೊಂದು ದಾಳಿ ನಡೆಸಿ, ಲಾಹಿರು ತಿರುಮಾನ್ನೆ (0) ವಿಕೆಟ್ ಪತನಗೊಳಿಸಿದರು.

ದಿಮುತ್ ಗೆ ನಿರಾಸೆ

ದಿಮುತ್ ಗೆ ನಿರಾಸೆ

ಈ ಹೊತ್ತಿನಲ್ಲಿ ತಮ್ಮ ಕೈಚಳಕ ತೋರಿದ ರವಿಚಂದ್ರನ್ ಅಶ್ವಿನ್, ಆರಂಭಿಕರಾಗಿ ಕಣಕ್ಕಿಳಿದು ಅರ್ಧಶತಕ ಸಿಡಿಸಿ ಶತಕದಂಚಿಗೆ ಬಂದಿದ್ದ ದಿಮುತ್ ಕರುಣಾರತ್ನೆ (97) ಅವರನ್ನು ಪೆವಿಲಿಯನ್ ಗೆ ಅಟ್ಟುವಲ್ಲಿ ಯಶಸ್ವಿಯಾದರು. ಆನಂತರ, ವಿಕೆಟ್ ಕೀಪರ್ ನಿರೋಷನ್ ಡಿಕ್ಲೆಲ್ಲಾ (67), ಕೆಳ ಕ್ರಮಾಂಕದ ಬ್ಯಾಟ್ಸ್ ಮನ್ ನುವಾನ್ ಪ್ರದೀಪ್ ಅವರನ್ನು ಕ್ರೀಸ್ ನಿಂದ ಆಚೆ ಕಳುಹಿಸಿದರು.

245ಕ್ಕೆ ಲಂಕಾ ಆಲೌಟ್

245ಕ್ಕೆ ಲಂಕಾ ಆಲೌಟ್

ಶ್ರೀಲಂಕಾ ಪರ, ದಿಲ್ರುವಾನ್ ಪೆರೇರಾ ಮಾತ್ರ ಅಜೇಯರಾಗಿ (21) ಉಳಿದರು. ಅಂತಿಮ ಕ್ರಮಾಂಕದ ಇಬ್ಬರು ಬ್ಯಾಟ್ಸ್ ಮನ್ ಗಳಾದ ಅಸೇಲಾ ಗುಣರತ್ನೆ, ನಾಯಕ ರಂಗನಾ ಹೆರಾತ್ ಅವರು ಗಾಯದ ಸಮಸ್ಯೆಯಿಂದಾಗಿ ಆಡಲು ಸಾಧ್ಯವಾಗಿಲ್ಲ. ಒಟ್ಟಾರೆಯಾಗಿ, ಲಂಕಾ ತಂಡ, 245 ರನ್ ಗಳಿಗೆ ತನ್ನ ಇನಿಂಗ್ಸ್ ಮುಕ್ತಾಯಗೊಳಿಸಬೇಕಾಯಿತು.

ಸ್ಕೋರ್ ನ ಚುಟುಕು ಮಾಹಿತಿ

ಸ್ಕೋರ್ ನ ಚುಟುಕು ಮಾಹಿತಿ

ಭಾರತ ಮೊದಲ ಇನಿಂಗ್ಸ್ 600
ಶ್ರೀಲಂಕಾ ಮೊದಲ ಇನಿಂಗ್ಸ್ 291
ಭಾರತ ದ್ವಿತೀಯ ಇನಿಂಗ್ಸ್ 240ಕ್ಕೆ 3 (ಡಿ)
ಶ್ರೀಲಂಕಾ ದ್ವಿತೀಯ ಇನಿಂಗ್ಸ್ 245
(ದಿಮುತ್ ಕರುಣಾರತ್ನೆ 97, ನಿರೋಶನ್ ಡಿಕ್ಲೆಲ್ಲಾ 67; ಅಶ್ವಿನ್ 65ಕ್ಕೆ 3, ಜಡೇಜಾ 71ಕ್ಕೆ 3).
ಪಂದ್ಯಶ್ರೇಷ್ಠ: ಶಿಖರ್ ಧವನ್ (ಭಾರತ)

ಕೊಹ್ಲಿ, ಹೆರಾತ್ ಹೇಳಿದ್ದೇನು?

ಕೊಹ್ಲಿ, ಹೆರಾತ್ ಹೇಳಿದ್ದೇನು?

ಪಂದ್ಯದ ನಂತರ ತಮ್ಮ ಪ್ರತಿಕ್ರಿಯೆ ನೀಡಿದ ಕೊಹ್ಲಿ, ತಂಡದ ಎಲ್ಲಾ ಹುಡುಗರೂ ಉತ್ತಮವಾಗಿ ಆಡಿದರು. ಈ ಗೆಲುವು ಖುಷಿಕೊಟ್ಟಿದೆ. ನಿಜ ಹೇಳಬೇಕೆಂದರೆ, ಲಂಕಾ ನೆಲಕ್ಕೆ ನಾವಿನ್ನೂ ಹೊಂದಿಕೊಂಡಿಲ್ಲ. ಎರಡನೇ ಪಂದ್ಯದಲ್ಲಿ ವೇಗಿಗಳನ್ನು ಹೇಗೆ ಉಪಯೋಗಿಸಬೇಕೆಂಬುದರ ಬಗ್ಗೆ ನಾವು ಹೆಚ್ಚು ಗಮನ ಹರಿಸಿದ್ದೇವೆ ಎಂದಿದ್ದಾರೆ.
ಇನ್ನು, ಎದುರಾಳಿ ತಂಡದ ನಾಯಕ ರಂಗಾನಾ ಹೆರಾತ್ ಮಾತನಾಡಿ, ''ಇತ್ತೀಚೆಗೆ ಕೈಬೆರಳು ಮುರಿದು ಗಾಯಗೊಂಡಿದ್ದೆ. ಇಂದು ಆಡುವಾಗ ಅದೇ ಬೆರಳಿಗೆ ಮತ್ತೆ ಹೊಡೆತ ಬಿದ್ದಿದ್ದರಿಂದ ನಾನು ದ್ವಿತೀಯ ಇನಿಂಗ್ಸ್ ನಲ್ಲಿ ಆಡಲಾಗಲಿಲ್ಲ. ಭಾರತ ತಂಡದ ಆಟ ಉತ್ತಮವಾಗಿತ್ತು. ಅರ್ಹ ಗೆಲುವು ಅವರದ್ದು'' ಎಂದರು.

ಅಂಕಿ-ಅಂಶಗಳಲ್ಲಿ ಸಾಧನೆ

ಅಂಕಿ-ಅಂಶಗಳಲ್ಲಿ ಸಾಧನೆ

ಮೊದಲೇ ತಿಳಿಸಿದಂತೆ, ಇದು ವಿದೇಶದಲ್ಲಿ ನಡೆದ ಟೆಸ್ಟ್ ಪಂದ್ಯವೊಂದರಲ್ಲಿ ಭಾರತ ಸಾಧಿಸಿದ ಅತಿ ದೊಡ್ಡ ಜಯ. ಈ ಹಿಂದೆ, ಇಂಗ್ಲೆಂಡ್ ವಿರುದ್ಧ 1986ರಲ್ಲಿ ಗಳಿಸಿದ್ದ 279 ರನ್ ಜಯವೇ ಈವರೆಗಿನ ದಾಖಲೆಯಾಗಿತ್ತು. ಹೀಗೆ, ವಿದೇಶಿ ನೆಲದಲ್ಲಿ ದೊಡ್ಡ ಜಯ ಸಾಧಿಸಿದ ಇತರ ಪಂದ್ಯಗಳೆಂದರೆ, 2015ರಲ್ಲಿ ಶ್ರೀಲಂಕಾ ವಿರುದ್ಧ 278 ರನ್ ಗಳ ಜಯ, ನ್ಯೂಜಿಲೆಂಡ್ ವಿರುದ್ಧ 1968ರಲ್ಲಿ 272 ರನ್ ಗಳ ಜಯ.

ಪಾಕ್ ವಿರುದ್ಧ ನಂತರ ಇದೇ ದೊಡ್ಡ ಪರಾಭವ

ಪಾಕ್ ವಿರುದ್ಧ ನಂತರ ಇದೇ ದೊಡ್ಡ ಪರಾಭವ

ಅತ್ತ ಶ್ರೀಲಂಕಾ ತಂಡಕ್ಕೂ ತನ್ನ ಟೆಸ್ಟ್ ಇತಿಹಾಸದಲ್ಲಿ ಭಾರೀ ದೊಡ್ಡ ಸೋಲು. ಈ ಹಿಂದೆ, 1994ರಲ್ಲಿ ಪಾಕಿಸ್ತಾನದ ವಿರುದ್ಧ 301 ರನ್ ಗಳ ಸೋಲು ಗಳಿಸಿದ್ದು ಬಿಟ್ಟರೆ, ಆಗಿನಿಂದ ಈವರೆಗೆ ಅದು ಇಷ್ಟು ದೊಡ್ಡ ಸೋಲು ಕಂಡಿರಲಿಲ್ಲ.

ನಾಲ್ಕು ವಿಕೆಟ್ ಗಳಿಸಿದ ಅಶ್ವಿನ್

ನಾಲ್ಕು ವಿಕೆಟ್ ಗಳಿಸಿದ ಅಶ್ವಿನ್

ಅಂದಹಾಗೆ, ತಮ್ಮ ವೃತ್ತಿಜೀವನದಲ್ಲಿ 50ನೇ ಟೆಸ್ಟ್ ಪಂದ್ಯವನ್ನಾಡಿದ ಅಶ್ವಿನ್, ಈ ಪಂದ್ಯದಲ್ಲಿ ಎರಡೂ ಇನಿಂಗ್ಸ್ ಗಳಿಂದ 4 ವಿಕೆಟ್ ಗಳಿಸಿದ್ದಾರೆ. ಅವರ ಈ ಸ್ಮರಣೀಯ ಪಂದ್ಯದ ಹಿನ್ನೆಲೆಯಲ್ಲಿ ಪಂದ್ಯದ ನಂತರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರಿಗೆ ವಿಶೇಷ ಉಡುಗೊರೆ ನೀಡಿ ಗೌರವಿಸಲಾಯಿತು.

Finally Anil Kumble Quits Team India Head Coach | Oneindia Kannada
ಸೆಹ್ವಾಗ್ ನಂತರದ ಎರಡನೇ ಸ್ಥಾನ

ಸೆಹ್ವಾಗ್ ನಂತರದ ಎರಡನೇ ಸ್ಥಾನ

ಇನ್ನು, ಶಿಖರ್ ಧವನ್ ಅವರ ಸಾಧನೆಯನ್ನು ಮರೆಯುವ ಹಾಗಿಲ್ಲ. ಭಾರತದ ಮೊದಲ ಇನಿಂಗ್ಸ್ ನಲ್ಲಿ ಶಿಖರ್ ಧವನ್ ಅವರು ಮಧ್ಯಾಹ್ನ ಭೋಜನ ಹಾಗೂ ಸಂಜೆ ಚಹಾ ವಿರಾಮದ ನಡುವಿನ ಅಂತರದಲ್ಲಿ (ಲಂಚ್-ಟೀ ಸೆಷನ್) 126 ರನ್ ದಾಖಲಿಸಿದ್ದು, ಯಾವುದೇ ಸೆಷನ್ ನಲ್ಲಿ ಭಾರತೀಯ ಬ್ಯಾಟ್ಸ್ ಮನ್ ದಾಖಲಿಸಿದ 2ನೇ ಗರಿಷ್ಠ ಮೊತ್ತವಾಗಿದೆ. 2009ರಲ್ಲಿ ಬ್ರಬೌರ್ನ್ ನಲ್ಲಿ ನಡೆದಿದ್ದ ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 133 ರನ್ ಗಳಿಸಿ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Team India Wins its first test match against Srilanka played at Galle Stadium, by 304 runs. While chasing the target of 550 runs, Srilanka collapsed at 245 runs, thus experiencing huge defeat in its test history. On the other hand, this is India's highest test victory ever on outside soil.
Please Wait while comments are loading...