ಪಾಕಿಸ್ತಾನವನ್ನು ಕೆಳಕ್ಕೆ ದೂಡಿ, ಅಗ್ರಸ್ಥಾನಕ್ಕೇರಿದ ಭಾರತ

Posted By:
Subscribe to Oneindia Kannada

ಕೋಲ್ಕತ್ತಾ, ಅಕ್ಟೋಬರ್ 03: ತವರು ನೆಲದಲ್ಲಿ 250ನೇ ಟೆಸ್ಟ್ ಗೆದ್ದ ಸಂಭ್ರಮದಲ್ಲಿರುವ ಟೀಂ ಇಂಡಿಯಾ ಈಗ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಪ್ರಕಟಿಸುವ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಇಲ್ಲಿನ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯವನ್ನು ವಿರಾಟ್ ಕೊಹ್ಲಿ ಪಡೆ 178 ರನ್ ಗಳಿಂದ ಜಯಸಿದೆ.

ಪಂದ್ಯದ ಸ್ಕೋರ್ ಕಾರ್ಡ್

ಇದಕ್ಕೂ ಮುನ್ನ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ(ಭಾರತದ 500ನೇ ಟೆಸ್ಟ್) ವನ್ನು ಟೀಂ ಇಂಡಿಯಾ 197ರನ್ ಗಳಿಂದ ಗೆದ್ದುಕೊಂಡಿತ್ತು. ಮೂರು ಟೆಸ್ಟ್ ಪಂದ್ಯಗಳ ಸರಣಿಯನ್ನು ಭಾರತ್ರ 2-0 ಅಂತರದಲ್ಲಿ ಗೆದ್ದುಕೊಂಡಿದೆ. [ವಿಂಡೀಸ್ ವಿರುದ್ಧ ಸರಣಿ ಗೆದ್ದರೂ, ಪಾಕ್ ವಿರುದ್ಧ ಸೋತ ಭಾರತ]

India win in Kolkata, replace Pakistan as No. 1 Test side in the world

ಹೀಗಾಗಿ 113 ರೇಟಿಂಗ್ ಅಂಕ ಗಳಿಸಿ ಅಗ್ರಸ್ಥಾನಕ್ಕೇರಿದೆ. 3-0 ಅಂತರದಲ್ಲಿ ಸರಣಿ ಕ್ಲೀನ್ ಸ್ವೀಪ್ ಮಾಡಿದರೆ 115 ಅಂಕಗಳೊಂದಿಗೆ ಅಗ್ರಸ್ಥಾನ ಉಳಿಸಿಕೊಳ್ಳಲಿದೆ. ಜತೆಗೆ ಪಾಕಿಸ್ತಾನ ತಂಡ ನಾಲ್ಕನೇ ಸ್ಥಾನಕ್ಕೆ ಕುಸಿಯಲಿದೆ.

ವೆಸ್ಟ್ ಇಂಡೀಸ್ ಸರಣಿಯಲ್ಲಿ ಕೊನೆಯ ಪಂದ್ಯ ಮಳೆಯಿಂದಾಗಿ ಡ್ರಾದಲ್ಲಿ ಅಂತ್ಯಗೊಂಡ ಪರಿಣಾಮ 2ನೇ ಸ್ಥಾನಕ್ಕೆ ಕುಸಿದಿತ್ತು. ಪಾಕಿಸ್ತಾನ ತಂಡ ಟೆಸ್ಟ್ ಕ್ರಿಕೆಟ್ ನಲ್ಲಿ 111 ಅಂಕ ಹಾಗೂ ಟೀಂ ಇಂಡಿಯಾ 110 ಅಂಕಗಳನ್ನು ಪಡೆದಿತ್ತು, ಈಗ ಭಾರತ 113 ಅಂಕ ಗಳಿಸಿ ನಂ.1 ತಂಡ ಎನಿಸಿಕೊಂಡಿದೆ.(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India once again became the number one side in the world, replacing Pakistan at the top of the International Cricket Council's (ICC) Rankings today (October 3).
Please Wait while comments are loading...