ಅಜರುದ್ದೀನ್ ದಾಖಲೆ ಸಮಗಟ್ಟಿದ ಎಂಎಸ್ ಧೋನಿ

Posted By:
Subscribe to Oneindia Kannada

ಮೀರ್ ಪುರ್ (ಬಾಂಗ್ಲಾದೇಶ), ಮಾ. 07: ಎಂಎಸ್ ಧೋನಿ ನೇತೃತ್ವದ ಟೀಂ ಇಂಡಿಯಾ ಮತ್ತೊಮ್ಮೆ ಏಷ್ಯಾಕಪ್ ಎತ್ತಿದೆ. ಭಾನುವಾರ ರಾತ್ರಿ ನಡೆದ ಅಂತಿಮ ಹಣಾಹಣಿಯಲ್ಲಿ ಬಾಂಗ್ಲಾದೇಶವನ್ನು ಸೋಲಿಸಿದ ಭಾರತ 6ನೇ ಬಾರಿಗೆ ಏಷ್ಯಾ ಕಪ್ ಗೆದ್ದುಕೊಂಡಿದೆ. ಇದರ ಜೊತೆಗೆ ಮಾಜಿ ನಾಯಕ ಮಹಮ್ಮದ್ ಅಜರುದ್ದೀನ್ ಅವರ ದಾಖಲೆಯನ್ನು ಎಂಎಸ್ ಧೋನಿ ಸಮಮಾಡಿದ್ದಾರೆ.

ಮೀರ್ ಪುರ್ ಫೈನಲ್ ಪಂದ್ಯದ ವರದಿ | ಪಂದ್ಯದ ಸ್ಕೋರ್ ಕಾರ್ಡ್ | ಏಷ್ಯಾಕಪ್ ಚಿತ್ರಗಳು

ಬಾಂಗ್ಲಾ ವಿರುದ್ಧದ ಫೈನಲ್ ಪಂದ್ಯಕ್ಕೂ ಮುನ್ನ ಭಾರತ ಐದು ಬಾರಿ ಏಷ್ಯಾ ಕಪ್ ಗೆದ್ದುಕೊಂಡಿತ್ತು. ಆದರೆ, ಇದೇ ಮೊದಲ ಬಾರಿಗೆ ಟ್ವೆಂಟಿ20 ಮಾದರಿಯಲ್ಲಿ ಆಡಿದ ಏಷ್ಯಾಕಪ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿದೆ.

1984,1988,1990-91,1995,2010 ಹಾಗೂ 2016ರಲ್ಲಿ ಕಪ್ ಗೆದ್ದುಕೊಂಡಿದೆ. ಸುನಿಲ್ ಗವಾಸ್ಕರ್ ಹಾಗೂ ದಿಲೀಪ್ ವೆಂಗ್ ಸರ್ಕಾರ್ ಅವರು ಮೊದಲೆರಡು ಆವೃತ್ತಿಗೆ ನಾಯಕರಾಗಿದ್ದರು. [ಏಷ್ಯಾಕಪ್ 1984-2014 ಗೆದ್ದವರು, ಬಿದ್ದವರು]

India win 6th Asia Cup title; MS Dhoni equals Azharuddin's 2-titles record

ಉಳಿದಂತೆ ಮೊಹಮ್ಮದ್ ಅಜರುದ್ದೀನ್ ಹಾಗೂ ಮಹೇಂದ್ರ ಸಿಂಗ್ ಧೋನಿ ಕ್ರಮವಾಗಿ ಎರಡು ಬಾರಿ ಕಪ್ ಗೆದ್ದ ತಂಡದ ನಾಯಕರಾಗಿ ದಾಖಲೆ ಬರೆದಿದ್ದಾರೆ. ಅಜರ್ ಅವರು 1990-91 ಹಾಗೂ 1995 ಮತ್ತು ಎಂಎಸ್ ಧೋನಿ 2010 ಹಾಗೂ 2016ರಲ್ಲಿ ಕಪ್ ಎತ್ತಿದ್ದಾರೆ. ವಿಶ್ವ ಟಿ20: ತಂಡಗಳು | ವೇಳಾಪಟ್ಟಿ

ಭಾರತಕ್ಕೆ ಮೊದಲ ಬಾರಿ ಹೊಸ ಎದುರಾಳಿ: 2016ರ ಆವೃತ್ತಿಗೂ ಮುನ್ನ ಎಲ್ಲಾ ಫೈನಲ್ ಪಂದ್ಯಗಳಲ್ಲಿ 1984ರಿಂದ 2010ರ ತನಕ ಭಾರತಕ್ಕೆ ಶ್ರೀಲಂಕಾ ಎದುರಾಳಿಯಾಗಿತ್ತು. ಇದೇ ಮೊದಲ ಬಾರಿಗೆ ಬೇರೊಂದು ತಂಡವನ್ನು ಸೋಲಿಸಿ ಭಾರತ ಕಪ್ ಗೆದ್ದುಕೊಂಡಿದೆ.

ಬಾಂಗ್ಲಾದೇಶ ಎರಡನೇ ಬಾರಿಗೆ ಫೈನಲ್ ನಲ್ಲಿ ಸೋಲು ಕಂಡಿದೆ. 2012ರಲ್ಲಿ ಪಾಕಿಸ್ತಾನ ವಿರುದ್ಧ ಷೇರ್ ಎ ಬಾಂಗ್ಲಾ ಮೈದಾನದಲ್ಲೇ ಸೋಲು ಅನುಭವಿಸಿತ್ತು. ಭಾರತ 50 ಓವರ್ ಗಳ ಪಂದ್ಯ ಹಾಗೂ 20 ಓವರ್ ಗಳ ಪಂದ್ಯ ಎರಡು ಮಾದರಿಯಲ್ಲೂ ಜಯಭೇರಿ ಬಾರಿಸಿದ ಮೊದಲ ತಂಡ ಎನಿಸಿದೆ. (ಒನ್ಇಂಡಿಯಾ ಕನ್ನಡ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
India defeated Bangladesh by 8 wickets in the final of the first T20 Asia Cup tournament at the Sher-e-Bangla Stadium here on Sunday night to lift their sixth overall title.
Please Wait while comments are loading...