ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ವೈಟ್ ವಾಶ್ ಮಾಡ್ತೇವೆ : ರೈನಾ

Posted By:
Subscribe to Oneindia Kannada

ಬೆಂಗಳೂರು, ಜುಲೈ 21: ಟೀಂ ಇಂಡಿಯಾ ಆಟಗಾರರು ಇನ್ನೂ ಟಿ20 ಮನಸ್ಥಿತಿಯನ್ನು ಬದಲಾಯಿಸಿಕೊಂಡು ಟೆಸ್ಟ್ ಗೆ ಸಿದ್ಧರಾಗುತ್ತಿದ್ದಾರೆ. ಆದರೆ, ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾದ ಬ್ಯಾಟ್ಸ್ ಮನ್ ಸುರೇಶ್ ರೈನಾ ಅವರು ಅತಿಯಾದ ಆತ್ಮವಿಶ್ವಾಸದಲ್ಲಿ ಡೈಲಾಗ್ ಹೊಡೆದಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧ ನಾಲ್ಕು ಟೆಸ್ಟ್ ಪಂದ್ಯಗಳನ್ನು ಗೆದ್ದು ವೈಟ್ ವಾಶ್ ಮಾಡಲಿದೆ. ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ಅವರು ಸ್ಟಾರ್ ಆಟಗಾರ ರಾಗಿ ಹೊರಹೊಮ್ಮಲಿದ್ದಾರೆ ಎಂದು ಹೇಳಿದ್ದಾರೆ. [ಮೊದಲ ಪಂದ್ಯಕ್ಕೆ ರಾಹುಲ್ ಬದಲಿಗೆ ಧವನ್ ಆಯ್ಕೆ!]

ಭಾರತದ ವೆಸ್ಟ್ ಇಂಡೀಸ್ ಪ್ರವಾಸದ ಮೊದಲ ಟೆಸ್ಟ್ ಪಂದ್ಯಕ್ಕೆ ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಮೈದಾನ ಸಜ್ಜಾಗಿದೆ. ಗುರುವಾರ ಸಂಜೆ 7.30(IST) ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಕರ್ನಾಟಕದ ಕೆಎಲ್ ರಾಹುಲ್ ಅವರ ಬದಲಿಗೆ ಶಿಖರ್ ಧವನ್ ಅವರಿಗೆ ಚಾನ್ಸ್ ಸಿಗುತ್ತಿದೆ.

India will whitewash West Indies 4-0, says Suresh Raina

ಈ ನಡುವೆ ಪಂದ್ಯಕ್ಕೂ ಮುನ್ನ ಮಾತನಾಡಿದ 29 ವರ್ಷ ವಯಸ್ಸಿನ ರೈನಾ ಅವರು ಟೀಂ ಇಂಡಿಯಾ ಗೆಲ್ಲಲು ಕಷ್ಟವಾಗುವುದಿಲ್ಲ, 3-0 ಅಥವಾ 4-0 ಅಂತರದಲ್ಲಿ ಸರಣಿ ಕೈವಶವಾಗಲಿದೆ. ಬೆಂಗಳೂರಿನಲ್ಲಿ ನಡೆಸಲಾದ ತರಬೇತಿ, ಅನಿಲ್ ಕುಂಬ್ಳೆ ಮಾರ್ಗದರ್ಶನ ನಮ್ಮ ತಂಡದ ಕೈ ಹಿಡಿಯಲಿದೆ. ಇದು ಐತಿಹಾಸಿಕ ಸರಣಿಯಾಗಲಿದೆ ಎಂದಿದ್ದಾರೆ. [ಕೊಹ್ಲಿ ಪಡೆಯಿಂದ 49 ದಿನಗಳ ಕಾಲ ವಿಂಡೀಸ್ ಟೂರ್]

ಅಮಿತ್ ಮಿಶ್ರಾ ಅವರು ಸ್ಟಾರ್ ಆಟಗಾರನಾಗಿ ಹೊರಹೊಮ್ಮಲಿದ್ದು, ಆರ್ ಅಶ್ವಿನ್, ರವೀಂದ್ರ ಜಡೇಜ ಅವರು ಕೂಡಾ ಇಲ್ಲಿನ ಪಿಚ್ ನ ಲಾಭ ಪಡೆಯಲಿದ್ದಾರೆ ಎಂದು ರೈನಾ ಅಭಿಪ್ರಾಯಪಟ್ಟಿದ್ದಾರೆ.

ರೈನಾ ಅವರು ಶ್ರೀಲಂಕಾ ವಿರುದ್ಧ 2010ರಲ್ಲಿ ಶತಕ ಬಾರಿಸುವ ಮೂಲಕ ಎಂಟ್ರಿ ಕೊಟ್ಟರು ಆದರೆ, ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ವಿಫಲರಾಗಿದ್ದರು. 18 ಟೆಸ್ಟ್ ಪಂದ್ಯ ಹಾಗೂ 1 ಶತಕ ಹಾಗೂ 7 ಅರ್ಧಶತಕ ಗಳಿಸಿದ್ದಾರೆ. 26.48 ರನ್ ಸರಾಸರಿಯಂತೆ 768 ರನ್ ಗಳಿಸಿದ್ದಾರೆ. (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Batsman Suresh Raina has backed India to whitewash West Indies 4-0 in the Test series with legspinner Amit Mishra being the "star performer".
Please Wait while comments are loading...