ಕಿವೀಸ್ ವಿರುದ್ಧ ಸರಣಿ, ಕ್ರಿಕೆಟರ್ಸ್ ಗೆ ಟ್ವಿಟ್ಟರಲ್ಲಿ ಬಹುಪರಾಕ್!

Posted By:
Subscribe to Oneindia Kannada

ಇಂದೋರ್, ಅಕ್ಟೋಬರ್ 12: ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ವೈಟ್ ವಾಶ್ ಮಾಡಿ, ಸರಣಿ ಹಾಗೂ ಐಸಿಸಿ ಶ್ರೇಯಾಂಕವನ್ನು ಉಳಿಸಿಕೊಂಡ ಭಾರತಕ್ಕೆ ಎಲ್ಲರೂ ಬಹುಪರಾಕ್ ಹೇಳಿದ್ದಾರೆ. ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಮಾಜಿ ಕ್ರಿಕೆಟರ್ಸ್, ಫ್ಯಾನ್ಸ್ ಗಳಿಂದ ಕೊಹ್ಲಿ ಪಡೆಗೆ ಹೊಗಳಿಕೆಯ ಸುರಿಮಳೆ ಸಿಕ್ಕಿದೆ.

ಪಂದ್ಯದ ಸ್ಕೋರ್ ಕಾರ್ಡ್ ನೋಡಿ

ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ-ಅಜಿಂಕ್ಯ ರಹಾನೆ ಜೋಡಿಯ ಅದ್ಭುತ ಬ್ಯಾಟಿಂಗ್ ಹಾಗೂ ಆರ್ ಅಶ್ವಿನ್ ಸ್ಪಿನ್ ಮೋಡಿ ಎಲ್ಲರನ್ನು ರಂಜಿಸಿತು. [ಬ್ರಾಡ್ಮನ್ ಸಮಕ್ಕೆ ನಿಂತ ಕೊಹ್ಲಿ]

ಪಂದ್ಯದ ಮೂರು ಹಾಗೂ ನಾಲ್ಕನೇ ದಿನ ಸ್ಪಿನ್ನರ್ ಆರ್ ಅಶ್ವಿನ್ ಅವರು ಪಂದ್ಯವನ್ನು ಸಂಪೂರ್ಣವಾಗಿ ಆಕ್ರಮಿಸಿಕೊಂಡರು. (ಮೊದಲ ಇನಿಂಗ್ಸ್ 81ಕ್ಕೆ 6 ಮತ್ತು 2ನೇ ಇನಿಂಗ್ಸ್ 59ಕ್ಕೆ 7) ಗಳಿಸಿ ಕಿವೀಸ್ ಗಳನ್ನು ಕಟ್ಟಿ ಹಾಕಿದರು. [ಪಂದ್ಯದ ಗ್ಯಾಲರಿ]

ಪೂಜಾರಾ ಶತಕ ಕೂಡಾ 3ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 321 ರನ್​ಗಳಿಂದ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಸರಣಿ ಕ್ಲೀನ್ ಸ್ವೀಪ್ ಮಾಡಲು ನೆರವಾಯಿತು.

ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ಮಿಂಚಿದ ಭಾರತ

ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ಮಿಂಚಿದ ಭಾರತ

ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ಮಿಂಚಿದ ಭಾರತದ ಆಟಗಾರರಿಗೆ ಎಲ್ಲೆಡೆಯಿಂದ ಪ್ರಶಂಸೆ ಸಿಕ್ಕಿದೆ. ವಿಶೇಷವಾಗಿ ಕೊಹ್ಲಿ ನಾಯಕತ್ವ ಹಾಗೂ ಅಶ್ವಿನ್ ಬೌಲಿಂಗ್ ಬಗ್ಗೆ ಎಲ್ಲರೂ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.

ಕ್ಲೀನ್ ಸ್ವೀಪ್, ಟೀಂ ಇಂಡಿಯಾಕ್ಕೆ ಕಂಗ್ರಾಟ್ಸ್

ಕ್ಲೀನ್ ಸ್ವೀಪ್, ಟೀಂ ಇಂಡಿಯಾಕ್ಕೆ ಕಂಗ್ರಾಟ್ಸ್, 321ರನ್ ಗಳಿಂದ ಕಿವೀಸ್ ತಂಡವನ್ನು ಸೋಲಿಸಿದ ಭಾರತಕ್ಕೆ ಬಹುಪರಾಕ್

ಅಶ್ವಿನ್ ಸ್ಪಿನ್ ಮೋಡಿಯಿಂದ ಕಿವೀಸ್ ಕಂಗಾಲು

ಅಶ್ವಿನ್ ಸ್ಪಿನ್ ಮೋಡಿಯಿಂದ ಕಿವೀಸ್ ಕಂಗಾಲು, ವಿರಾಟ್ ಹಾಗೂ ರಹಾನೆ ಬ್ಯಾಟಿಂಗ್ ಮರೆಯುವಂತಿಲ್ಲ. ಅಶ್ವಿನ್ 13 ವಿಕೆಟ್ ಪಡೆದರೆ, ಕೊಹ್ಲಿ ಹಾಗೂ ರಹಾನೆ ನಾಲ್ಕನೇ ವಿಕೆಟ್ ಗೆ ದಾಖಲೆಯ ಜೊತೆಯಾಟ ಪ್ರದರ್ಶಿಸಿದರು.

ಅಶ್ವಿನ್ ಅವರು ಲೆಜೆಂಡ್ ಆಗುತ್ತಿದ್ದಾರೆ

ಅಶ್ವಿನ್ ಅವರು ಲೆಜೆಂಡ್ ಆಗುತ್ತಿದ್ದಾರೆ, ಪಂದ್ಯದಿಂದ ಪಂದ್ಯಕ್ಕೆ ವಿಕೆಟ್ ಗಳಿಕೆ ಮಾತ್ರವಲ್ಲದೆ, ತಂಡಕ್ಕೆ ಜಯ ತರುತ್ತಿದ್ದಾರೆ. (ಮೊದಲ ಇನಿಂಗ್ಸ್ 81ಕ್ಕೆ 6 ಮತ್ತು 2ನೇ ಇನಿಂಗ್ಸ್ 59ಕ್ಕೆ 7)

ಅನಿಲ್ ಕುಂಬ್ಳೆಗೂ ಯಶಸ್ಸು ಸಲ್ಲಬೇಕು

ವೆಸ್ಟ್ ಇಂಡೀಸ್ ಹಾಗೂ ಕಿವೀಸ್ ವಿರುದ್ಧದ ಟೀಂ ಇಂಡಿಯಾ ಪ್ರದರ್ಶನ ಉತ್ತಮಗೊಳ್ಳಲು ಅನಿಲ್ ಕುಂಬ್ಳೆಗೂ ಯಶಸ್ಸು ಸಲ್ಲಬೇಕು

ಐಸಿಸಿ ಟೆಸ್ಟ್ ಚಾಂಪಿಯನ್​ಷಿಪ್ ಗದೆ

ನಂ.1 ಪಟ್ಟಕ್ಕೇರಿದ ಭಾರತ (115 ಅಂಕ) ಐಸಿಸಿ ಟೆಸ್ಟ್ ಚಾಂಪಿಯನ್​ಷಿಪ್ ಗದೆಯನ್ನು ಸ್ವೀಕರಿಸಿತು. ಭಾರತದ ಮಾಜಿ ನಾಯಕ ಸುನಿಲ್ ಗಾವಸ್ಕರ್ ನಾಯಕ ವಿರಾಟ್ ಮತ್ತು ತಂಡಕ್ಕೆ ಪ್ರಶಸ್ತಿ ವಿತರಣೆಯ ಬಳಿಕ ಗದೆ ನೀಡಿ ಗೌರವಿಸಿದರು.

ಪಂದ್ಯದ ಸಂಕ್ಷಿಪ್ತ ಸ್ಕೋರ್ ಕಾರ್ಡ್

ಭಾರತ ಪ್ರಥಮ ಇನಿಂಗ್ಸ್: 5 ವಿಕೆಟ್​ಗೆ 557 ಡಿಕ್ಲೇರ್
ನ್ಯೂಜಿಲೆಂಡ್ ಪ್ರಥಮ ಇನಿಂಗ್ಸ್: 90.2 ಓವರ್​ಗಳಲ್ಲಿ 299 ಗೆಲುವಿಗೆ 475 ರನ್​ಗಳ ಬೃಹತ್ ಸವಾಲು ಪಡೆದ ಕಿವೀಸ್ ಭಾನುವಾರ ವಿಕೆಟ್ ನಷ್ಟವಿಲ್ಲದೆ 28 ಮಾತ್ರ ಗಳಿಸಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India completed a 3-0 whitewash of New Zealand after thrashing the visitors by 321 runs on the fourth day of the third and final Test at the Holkar Cricket Stadium here on Tuesday.
Please Wait while comments are loading...