3ನೇ ಟೆಸ್ಟ್: ಧವನ್ ಶತಕ, ಕೆಎಲ್ ರಾಹುಲ್ ದಾಖಲೆಯ ಅರ್ಧಶತಕ

Posted By:
Subscribe to Oneindia Kannada

ಕ್ಯಾಂಡಿ, ಆಗಸ್ಟ್ 12: ಆರಂಭಿಕರಾದ ಶಿಖರ್ ಧವನ್ ಹಾಗೂ ಕೆ.ಎಲ್. ರಾಹುಲ್ ಅವರ ಆಕರ್ಷಕ 188 ರನ್ ಗಳ ಜುಗಲ್ ಬಂದಿಯಿಂದಾಗಿ, ಪ್ರವಾಸಿ ಭಾರತ ತಂಡ, ಶನಿವಾರ ಇಲ್ಲಿ ಆರಂಭಗೊಂಡ ಶ್ರೀಲಂಕಾ ವಿರುದ್ಧದ ತೃತೀಯ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನಾಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 329 ರನ್ ಗಳ ಗೌರವ ಮೊತ್ತ ದಾಖಲಿಸಿದೆ.

ಇದೇ ಪಂದ್ಯದಲ್ಲಿ 85 ರನ್ ಗಳಿಸಿದ ರಾಜ್ಯದ ಆಟಗಾರ ಕೆ.ಎಲ್. ರಾಹುಲ್, ಸತತ 7 ಟೆಸ್ಟ್ ಪಂದ್ಯಗಳಲ್ಲಿ 7 ಅರ್ಧಶತಕ ದಾಖಲಿಸುವ ಮೂಲಕ ಇದೇ ಸಾಧನೆಯನ್ನು ಮಾಡಿದ್ದ ಎವರ್ಟನ್ ವೀಕರ್ಸ್ (ಇಂಗ್ಲೆಂಡ್), ಆ್ಯಂಡಿ ಫ್ಲವರ್ (ಜಿಂಬಾಬ್ವೆ), ಶಿವನಾರಾಯಣ ಚಂದ್ರಪಾಲ್ (ವೆಸ್ಟ್ ಇಂಡೀಸ್) ಹಾಗೂ ಕುಮಾರ ಸಂಗಕ್ಕಾರ (ಶ್ರೀಲಂಕಾ) ಅವರ ಸಾಧನೆಯನ್ನು ಸರಿಗಟ್ಟಿದ್ದಾರೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಇಳಿದ ಭಾರತಕ್ಕೆ ಆರಂಭಿಕ ಬ್ಯಾಟ್ಸ್ ಮನ್ ಗಳು ಉತ್ತಮವಾಗಿ ನೆರವಾದರು. ಮೊದಲ ವಿಕೆಟ್ ಗೆ 188 ರನ್ ಪೇರಿಸಿದ ಈ ಜೋಡಿ, 40ನೇ ಓವರ್ ನಲ್ಲಿ ಬೇರ್ಪಟ್ಟಿತು. ಮೊದಲ ವಿಕೆಟ್ ಉರುಳಿದ್ದು ಕೆ.ಎಲ್. ರಾಹುಲ್ (85) ಅವರ ರೂಪದಲ್ಲಿ.

India Vs Srilanka 3rd test: Dhawan's Century powers India to score 329 on Day 1

ಆದರೆ, ಅವರ ನಂತರ ಬಂದ ಚೇತೇಶ್ವರ ಪೂಜಾರ ಅವರು, ಹೆಚ್ಚು ನಿಲ್ಲಲಿಲ್ಲ. ಆದರೆ, ಅದಕ್ಕೂ ಮುನ್ನವೇ ಶಿಖರ್ ಧವನ್ (199) ಕ್ರೀಸ್ ತೊರೆದರು. ಆನಂತರ, ಚೇತೇಶ್ವರಗೆ ಜತೆಯಾದ ಕೊಹ್ಲಿ, ಕ್ರೀಸ್ ಗೆ ಹೊಂದಿಕೊಳ್ಳುವಷ್ಟರಲ್ಲಿ ಪೂಜಾರ (8), ಪೆವಿಲಿಯನ್ ಗೆ ಮರಳಿದರು.

ಆ ಹೊತ್ತಿಗೆ, ಕೊಹ್ಲಿಗೆ ಕ್ರೀಸ್ ನಲ್ಲಿ ಹೊಂದಿಕೊಳ್ಳಬೇಕಿದ್ದ ಅಜಿಂಕ್ಯ ರಹಾನೆ (17) ಉತ್ತಮವಾಗಿ ಆಡಲಿಲ್ಲ. 66ನೇ ಓವರ್ ನಲ್ಲಿ ರಹಾನೆ ಔಟಾದ ಬೆನ್ನಲ್ಲೇ ಕೊಹ್ಲಿ (42) ಕೂಡಾ ಹೊರನಡೆದರು. ಅವರ ನಂತರ ಬಂದಿದ್ದ ಅಶ್ವಿನ್ (31) ಕೂಡ ಹೊರನಡೆದರು. ಅಲ್ಲಿಗೆ ಭಾರತ, 322 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡಂತಾಯಿತು.

India Vs Srilanka 3rd test: Dhawan's Century powers India to score 329 on Day 1

ದಿನದ ಆರಂಭದಲ್ಲಿ ಬಿಗಿಯಾದ ಆಟ ತೋರಿದ ಭಾರತ ತಂಡವು, ಮಧ್ಯಾಹ್ನದ ಭೋಜನದ ನಂತರ ಆ ಬಿಗಿಯನ್ನು ಕಳೆದುಕೊಂಡಿತು. ಶ್ರೀಲಂಕಾ ಪರವಾಗಿ, ಪುಷ್ಪಕುಮಾರ 3 ವಿಕೆಟ್ (ಶಿಖರ್ ಧವನ್, ಕೆಎಲ್ ರಾಹುಲ್, ಅಜಿಂಕ್ಯ ರಹಾನೆ) ಪಡೆದರೆ, ಸಂದಕನ್ 2 ವಿಕೆಟ್ (ಪೂಜಾರ, ಕೊಹ್ಲಿ) ಹಾಗೂ ಫರ್ನಾಂಡೊ 1 ವಿಕೆಟ್ (ಅಶ್ವಿನ್) ಗಳಿಸಿದರು.

ಸಂಕ್ಷಿಪ್ತ ಸ್ಕೋರ್: ಭಾರತ ಮೊದಲ ಇನಿಂಗ್ಸ್ 326ಕ್ಕೆ 6 (ಶನಿವಾರ ದಿನಾಂತ್ಯಕ್ಕೆ) (ಶಿಖರ್ ಧವನ್ 119, ಕೆಎಲ್ ರಾಹುಲ್ 85; ಪುಷ್ಪಕುಮಾರ 40ಕ್ಕೆ 3, ಸಂದಾಕನ್ 84ಕ್ಕೆ 2).

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
With a splendid Century by Opener Shikhar Dhawan (119) and good half century by K.L. Rahul (85), Indian Cricket team managed to score a respectable score at the end of day one of third test against Srilanka in Candy (Srilanka) on August 12, 2017.
Please Wait while comments are loading...