ಲಂಕಾ ವಿರುದ್ಧ ಏಕದಿನ ಸರಣಿಗೆ ರೋಹಿತ್ ನಾಯಕ, ಕೊಹ್ಲಿಗೆ ರೆಸ್ಟ್

Posted By:
Subscribe to Oneindia Kannada
ಲಂಕಾ ವಿರುದ್ಧ ಏಕದಿನ ಸರಣಿಗೆ ರೋಹಿತ್ ನಾಯಕ | Oneindia Kannada

ನವದೆಹಲಿ, ನವೆಂಬರ್ 27: ಪ್ರವಾಸಿ ಶ್ರೀಲಂಕಾ ವಿರುದ್ಧದ ಅಂತಿಮ ಟೆಸ್ಟ್ ಹಾಗೂ ಮೂರು ಏಕದಿನ ಕ್ರಿಕೆಟ್ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ.

2ನೇ ಟೆಸ್ಟ್ : ಶ್ರೀಲಂಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಲಂಕಾ ವಿರುದ್ಧ 3ನೇ ಟೆಸ್ಟ್ ಮತ್ತು ಮೂರು ಏಕದಿನ ಸರಣಿಗೆ ಭಾರತದ 15 ಆಟಗಾರರ ಪಟ್ಟಿಯನ್ನು ಸೋಮವಾರ ಬಿಸಿಸಿಐ ಪ್ರಕಟಿಸಿದೆ. ಮೂರು ಏಕದಿನ ಸರಣಿಗೆ ರೋಹಿತ್ ಶರ್ಮ ಅವರಿಗೆ ನಾಯಕತ್ವ ಪಟ್ಟ ನೀಡಲಾಗಿದ್ದು, ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ.

ಕ್ರಿಕೆಟ್ : ಶ್ರೀಲಂಕಾದಿಂದ ಭಾರತ ಪ್ರವಾಸ, ವೇಳಾಪಟ್ಟಿ

India vs Sri Lanka: Virat Kohli Rested for ODI Series; Rohit Sharma Named Captain

ಶ್ರೇಯಸ್ ಅಯ್ಯರ್, ಕನ್ನಡಿಗ ಮನೀಷ್ ಪಾಂಡೆ ಹಾಗೂ ಸಿದ್ಧಾರ್ಥ್ ಕೌಲ್ ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಈಗಾಗಲೇ ಟೀಂ ಇಂಡಿಯಾ ಮೂರು ಟೆಸ್ಟ್ ಗಳ ಪಂದ್ಯಗಳಲ್ಲಿ 1-0 ಅಂತರವನ್ನು ಮುನ್ನಡೆ ಸಾಧಿಸಿದೆ.

ಇನ್ನು ಅಂತಿಮ ಟೆಸ್ಟ್ ಪಂದ್ಯ ಡಿಸೆಂಬರ್ 2ರಿಂದ 6ರ ವರೆಗೆ ದೆಹಲಿಯಲ್ಲಿ ನಡೆಯಲಿದ್ದು, ತಂಡವನ್ನು ಕೊಹ್ಲಿ ಮುನ್ನಡೆಸಲಿದ್ದಾರೆ. ಇದೇ ಡಿಸೆಂಬರ್ 10ರಿಂದ ಏಕದಿನ ಸರಣಿ ಆರಂಭವಾಗಲಿದೆ.ಏಕದಿನ ಸರಣಿಗೆ ಭಾರತ ತಂಡವನ್ನು ರೋಹಿತ್ ಶರ್ಮ ಮುನ್ನಡೆಸಲಿದ್ದಾರೆ.

ಏಕದಿನ ಸರಣಿಗೆ ಭಾರತ ತಂಡಇಂತಿದೆ: ರೋಹಿತ್ ಶರ್ಮ (ನಾಯಕ), ಶಿಖರ್ ಧವನ್, ಅಜಿಂಕ್ಯಾ ರಹಾನೆ, ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ , ಕೇದರ್ ಜಾದವ್, ದಿನೇಶ್ ಕಾರ್ತಿಕ್, ಎಂ ಎಸ್ ಧೋನಿ, ಹಾರ್ದಿಕ್ ಪಾಂಡ್ಯಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಚಹಲ್, ಜಸ್ ಪ್ರೀತ್ ಬೂಮ್ರಾ, ಭುವನೇಶ್ವರ್ ಕುಮಾರ್, ಸಿದ್ಧಾರ್ಥ್ ಕೌಲ್.

3ನೇ ಟೆಸ್ಟ್ ಗೆ ತಂಡ ಇಂತಿದೆ: ವಿರಾಟ್ ಕೊಹ್ಲಿ (ನಾಯಕ), ಮುರುಳಿ ವಿಜಯ್, ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ರೋಹಿತ್ ಶರ್ಮ, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಅಶ್ವಿನ್, ಜಡೇಜಾ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಇಶಾಂತ್ ಶರ್ಮ, ವಿಜಯ್ ಶಂಕರ್.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India announced their squad for the third Test match and the ODI series against Sri Lanka on Monday. Laying speculations to rest, the selectors named Virat Kohli in the Test team but the skipper has been rested for the ODI series.
Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ