17ನೇ ಶತಕದ ಬಳಿಕ ಕೊಹ್ಲಿ ಮುರಿದ ದಾಖಲೆಗಳ ಪಟ್ಟಿ

Posted By:
Subscribe to Oneindia Kannada

ಗಾಲೆ, ಜುಲೈ 30: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ವೃತ್ತಿ ಬದುಕಿನ 17ನೇ ಟೆಸ್ಟ್ ಶತಕ ಸಿಡಿಸಿ, ಹಲವು ದಾಖಲೆ ಮುರಿದಿದ್ದಾರೆ. ನಾಯಕನಾಗಿ, ಬ್ಯಾಟ್ಸ್ ಮನ್ ಆಗಿ ಕೊಹ್ಲಿ ಅವರು ಮುರಿದ ದಾಖಲೆಗಳ ಪೂರ್ಣ ಸಂಗ್ರಹ ಇಲ್ಲಿದೆ...

ಅಜರುದ್ದೀನ್ ದಾಖಲೆ ಮುರಿದ 'ಕ್ಯಾಪ್ಟನ್' ವಿರಾಟ್ ಕೊಹ್ಲಿ

ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಅಜೇಯ ಶತಕ ಬಾರಿಸಿದ ಕೊಹ್ಲಿ ಅವರು ತಮ್ಮ ಲಯಕ್ಕೆ ಮರಳಿದರು. 550 ರನ್ ಟಾರ್ಗೆಟ್ ಪಡೆದ ಶ್ರೀಲಂಕಾ ಕೊನೆಗೆ 304ರನ್ ಅಂತರದ ಭಾರಿ ಸೋಲು ಕಂಡಿದೆ.

ಭಾರತದಿಂದ ಶ್ರೀಲಂಕಾ ಪ್ರವಾಸ ಪರಿಷ್ಕೃತ ವೇಳಾಪಟ್ಟಿ

ಕೊಹ್ಲಿ ಅವರು 44 ಇನ್ನಿಂಗ್ಸ್ ಗಳಲ್ಲಿ ಮೊಹಮ್ಮದ್ ಅಜರುದ್ದೀನ್ ಅವರ 9 ಶತಕಗಳ ದಾಖಲೆಯನ್ನು ಮುರಿದು, ನಾಯಕರಾಗಿ 10ನೇ ಶತಕ ದಾಖಲಿಸಿದ್ದಾರೆ. 28 ವರ್ಷ ವಯಸ್ಸಿನ ಕೊಹ್ಲಿ ಅವರು 132 ಎಸೆತಗಳಲ್ಲಿ ನೂರರ ಗಡಿ ದಾಟುತ್ತಿದ್ದಂತೆ ಹಲವು ದಾಖಲೆಗಳು ಮುರಿದು ಬಿದ್ದವು.

ಟೆಸ್ಟ್ ಸರಣಿಗೆ ಭಾರತ ತಂಡ

ಮೊಹಮ್ಮದ್ ಅಜರುದ್ದೀನ್, ಸಚಿನ್ ತೆಂಡೂಲ್ಕರ್, ದಿಲಿಪ್ ವೆಂಗ್ ಸರ್ಕರ್ ಅವರ ದಾಖಲೆಗಳನ್ನು ಕೊಹ್ಲಿ ಮುರಿದಿದ್ದಾರೆ. ಕೊಹ್ಲಿ ಸಾಧನೆಯ ವಿವರ ಮುಂದಿದೆ...

ನಾಯಕನಾಗಿ ದಾಖಲೆ

ನಾಯಕನಾಗಿ ದಾಖಲೆ

# ಕೊಹ್ಲಿ ಅವರು ಪಂದ್ಯದ ಮೂರನೇ ಇನ್ನಿಂಗ್ಸ್ ನಲ್ಲಿ ಆಡಿದ ಶತಕ ಗಳಿಸಿದ್ದು ಇದೇ ಮೊದಲು.

# ಏಳು ಇನ್ನಿಂಗ್ಸ್ ಗಳ ನಂತರ ಕೊಹ್ಲಿ ಅವರು ಮೊದಲ ಬಾರಿಗೆ ಶತಕ ಸಿಡಿಸಿದ್ದಾರೆ. ಬಾಂಗ್ಲಾದೇಶ ವಿರುದ್ಧ 204ರನ್ ಗಳಿಸಿದ ಬಳಿಕ 38, 0, 13, 12, 15, 6 ಹಾಗೂ 3 ರನ್ ಗಳಿಸಿದ್ದರು.

ವೆಂಗ್ ಸರ್ಕಾರ್ ದಾಖಲೆ ಮುರಿತ

ವೆಂಗ್ ಸರ್ಕಾರ್ ದಾಖಲೆ ಮುರಿತ

#ಮಾಜಿ ನಾಯಕ ದಿಲೀಪ್ ವೆಂಗ್ ಸರ್ಕಾರ್ ಅವರ 17 ಶತಕ(116 ಟೆಸ್ಟ್) ಗಳ ದಾಖಲೆಯ ಸಮಕ್ಕೆ ಕೊಹ್ಲಿ ನಿಂತಿದ್ದಾರೆ. ವೆಂಗ್ ಸರ್ಕಾರ್ ಅವರು 58 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರೆ, ಕೊಹ್ಲಿ ಅವರು 27 ಪಂದ್ಯಗಳಲ್ಲೇ ಈ ದಾಖಲೆ ಬರೆದಿದ್ದಾರೆ.
#ನಾಯಕರಾಗಿ ಅತಿ ಹೆಚ್ಚು ಶತಕಗಳನ್ನು ಹೊಂದಿರುವ ದಾಖಲೆ ಕೊಹ್ಲಿ ಹೆಸರಿಗೆ ಬಂದಿದೆ. 27 ಪಂದ್ಯಗಳಲ್ಲೇ 17 ಟೆಸ್ಟ್ ಶತಕ ದಾಖಲಿಸಿದ್ದಾರೆ.

ತೆಂಡೂಲ್ಕರ್ ದಾಖಲೆ

ತೆಂಡೂಲ್ಕರ್ ದಾಖಲೆ

#ಈ ಶತಕದ ಮೂಲಕ ಕ್ರಿಕೆಟ್ ನ ಮೂರು ಮಾದರಿಗಳಲ್ಲೂ 50 ಪ್ಲಸ್ ರನ್ ಸರಾಸರಿ ಹೊಂದಿರುವ ಏಕೈಕ ಆಟಗಾರ ಎನಿಸಿಕೊಂಡಿದ್ದಾರೆ. ಏಕದಿನ ಕ್ರಿಕೆಟ್ ನಲ್ಲಿ 54.68, ಟಿ20ಐನಲ್ಲಿ 52.96 ಹಾಗೂ ಟೆಸ್ಟ್ ಕ್ರಿಕೆಟ್ ನಲ್ಲಿ 50.03 ರನ್ ಸರಾಸರಿ ಹೊಂದಿದ್ದಾರೆ.

#ಈ ಶತಕ ಬಾರಿಸಿ ವಿದೇಶಿ ನೆಲದಲ್ಲಿ ಸಚಿನ್ ನಾಯಕರಾಗಿ ಬಾರಿಸಿದ್ದ ಶತಕಗಳ ದಾಖಲೆಯನ್ನು ಕೊಹ್ಲಿ ಮುರಿದಿದ್ದಾರೆ. 27 ಟೆಸ್ಟ್ ನಂತರ ನಾಯಕರಾಗಿ 7 ಶತಕ ಬಾರಿಸಿದ್ದ ಅಜರುದ್ದೀನ್, ಸಚಿನ್ ಅವರ ದಾಖಲೆಯನ್ನು ಕೊಹ್ಲಿ ಸರಿಗಟ್ಟಿದ್ದಾರೆ.

Virat Kohli Holidays With Anushka Sharma In New york | Oneindia Kannada
ಕೊಹ್ಲಿ ಶತಕ

ಕೊಹ್ಲಿ ಶತಕ

ವಿದೇಶಿ ನೆಲಗಳಲ್ಲಿ ಸಚಿನ್ ಅವರು 5 ಶತಕಗಳನ್ನು ಬಾರಿಸಿದ್ದರು. ಕೊಹ್ಲಿ ಅವರು 6 ಶತಕ ಬಾರಿಸಿದ್ದಾರೆ.

ನಾಯಕರಾಗಿ ಕೊಹ್ಲಿ ಟೆಸ್ಟ್ ನಲ್ಲಿ ತ್ವರಿತ ಗತಿಯಲ್ಲಿ 1000ರನ್ ಗಡಿ ದಾಟಿದ್ದಾರೆ. ಅದರಲ್ಲೂ ವಿದೇಶದಲ್ಲಿ ರನ್ ಗಳಿಕೆ ಅಧಿಕವಾಗಿದೆ. ತೆಂಡೂಲ್ಕರ್ ಅವರು 19 ಟೆಸ್ಟ್ ಇನ್ನಿಂಗ್ಸ್ ಗಳಲ್ಲಿ 1000ರನ್ ಗಳಿಸಿದ್ದರು. ಕೊಹ್ಲಿ ಅವರು 17 ಇನ್ನಿಂಗ್ಸ್ ಗಳಲ್ಲೇ ಈ ಸಾಧನೆ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India's 'run machine' Virat Kohli on Saturday (July 29) slammed his seventeenth Test hundred and second against Sri Lanka on fourth day of the Galle Test, breaks several records.
Please Wait while comments are loading...