3ನೇ ಟೆಸ್ಟ್: 2ನೇ ದಿನದ ಅಂತ್ಯಕ್ಕೆ ಶ್ರೀಲಂಕಾ 19ಕ್ಕೆ1

Posted By:
Subscribe to Oneindia Kannada

ಕ್ಯಾಂಡಿ, ಆಗಸ್ಟ್ 13: ಶ್ರೀಲಂಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಶ್ರೀಲಂಕಾ ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 135ಕ್ಕೆ ಆಲೌಟ್ ಆಗಿ ಸಾಧಾರಣ ಮೊತ್ತಕ್ಕೆ ಕುಸಿದಿದೆ.

ಮೊದಲ ಇನ್ನಿಂಗ್ಸ್ ನಲ್ಲಿ 352ರನ್ ಗಳ ಬೃಹತ್ ಹಿನ್ನಡೆ ಅನುಭವಿಸಿದ ಶ್ರೀಲಂಕಾವನ್ನು ಭಾರತ ತಂಡ ಫಾಲೋ ಆನ್ ಗೆ ಒಳಪಡಿಸಿದೆ. 2ನೇ ಇನ್ನಿಂಗ್ಸ್ ಆರಂಭಿಸಿರುವ ಲಂಕಾ ಎರಡನೇ ದಿನದ ಅಂತ್ಯಕ್ಕೆ 19 ರನ್ ಗಳಿಗೆ 1 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಯಲ್ಲಿ ಸಿಲುಕಿದೆ.

ಇಂದು ಎರಡನೇ ದಿನದ ಆಟ ಆರಂಭಿಸಿದ್ದ ವಿರಾಟ್ ಕೊಹ್ಲಿ ಪಡೆ, ಹಾರ್ದಿಕ್ ಪಾಂಡ್ಯ ಅವರ ಭರ್ಜರಿ ಶತಕದ ನೆರವಿನೊಂದಿಗೆ 122.3 ಓವರ್ ಗಳಲ್ಲಿ ಒಟ್ಟು 487ರನ್ ಗಳಿಸಿ ಆಲೌಟ್ ಆಗಿತ್ತು.

India Vs Sri Lanka Live Score, 3rd Test, Day 2: Saha departs as hosts eye quick wickets

ಶ್ರೀಲಂಕಾ ವಿರುದ್ಧದ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಎರಡನೇ ದಿನದ ಆರಂಭದಲ್ಲೇ ಶ್ರೀಲಂಕಾದ ಬೌಲರ್ ಗಳು ಯಶ ಗಳಿಸಿದ್ದಾರೆ. ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಚೊಚ್ಚಲ ಶತಕದ ನೆರವಿನಿಂದ ಟೀಂ ಇಂಡಿಯಾ 487 ಸ್ಕೋರ್ ಮಾಡಿ ಆಲೌಟ್ ಆಗಿದೆ.

ಅರ್ಧಶತಕ ದಾಖಲೆ ವೀರರು : ರಾಹುಲ್ ಹಿಂದಿಕ್ಕಿದ ರಾಹುಲ್

122 ಓವರ್ ಗಳ ನಂತರ ಭಾರತ 487/9 ಸ್ಕೋರ್ ಮಾಡಿದೆ. ಹಾರ್ದಿಕ್ ಅವರು 108ರನ್ (93 ಎಸೆತಗಳು, 8 ಬೌಂಡರಿ, 7 ಸಿಕ್ಸರ್ ) ಗಳಿಸಿ ಔಟಾದರು. ಕುಲದೀಪ್ 26ರನ್ ಗಳಿಸಿದರು. ಶ್ರೀಲಂಕಾ ಪರ ಸಂದಕನ್ 132/5 ವಿಕೆಟ್ ಕಬಳಿಸಿದರು.

ಮೊದಲ ದಿನದಾಟದ ಅಂತ್ಯಕ್ಕೆ ನಿಗದಿತ 90 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 329 ರನ್‌ ಗಳಿಸಿದ್ದು, ಬೃಹತ್‌ ಮೊತ್ತದ ಕುರುಹು ನೀಡಿತು.

ಎರಡನೇ ದಿನದಂದು ಆಟ ಮುಂದುವರೆಸಿ, 16 ರನ್ ಗಳಿಸಿ ವೃದ್ಧಿಮಾನ್ ಸಹಾ ಅವರು ವಿಶ್ವ ಫರ್ನಾಂಡೋಗೆ ವಿಕೆಟ್ ಒಪ್ಪಿಸಿದರು. ಮೊಹಮ್ಮದ್ ಶಮಿ 8ರನ್ ಗಳಿಸಿ ಔಟಾದರು.

/sports/cricket/india-vs-sri-lanka-live-score-3rd-test-day-2-123556.html
India vs Sri Lanka : Lanka All Out For 183

ಮೊದಲ ದಿನದಂದು ಆರಂಭಿಕ ಬ್ಯಾಟ್ಸ್ ಮನ್ ಗಳು ಉತ್ತಮವಾಗಿ ಆಡಿದರು. ಮೊದಲ ವಿಕೆಟ್ ಗೆ 188 ರನ್ ಪೇರಿಸಿದ ಈ ಜೋಡಿ, 40ನೇ ಓವರ್ ನಲ್ಲಿ ಬೇರ್ಪಟ್ಟಿತು. ನಂತರ ಮಧ್ಯಮ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ 42 ಹಾಗೂ ಆರ್ ಅಶ್ವಿನ್ 31ರನ್ ಗಳಿಸಿದರು. ಮಿಕ್ಕವರು ಹೆಚ್ಚು ರನ್ ಗಳಿಸಲಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Sri Lankan bowlers would be hoping to get remaining four wickets and bundle India under 400 when the two teams resume second day's play here on Sunday (Aug 13).
Please Wait while comments are loading...