2ನೇ ಟೆಸ್ಟ್ ː ಭಾರತ ಮೊದಲ ಇನಿಂಗ್ಸ್‌ 622 ರನ್‌ಗೆ ಡಿಕ್ಲೇರ್‌

Posted By:
Subscribe to Oneindia Kannada

ಕೊಲಂಬೋ, ಆಗಸ್ಟ್ 04: ಇಲ್ಲಿನ ಎಸ್‌.ಎಸ್‌.ಸಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ - ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಭಾರತ ಬೃಹತ್‌ ಮೊತ್ತ ಕಲೆ ಹಾಕಿದೆ.

ಶುಕ್ರವಾರ ಎರಡನೇ ದಿನದಾಟ ಆರಂಭಿಸಿದ ಭಾರತ 158 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 622 ರನ್‌ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು.

2nd Test, Day 2: Sri Lanka 50/2 at stumps in response to India's 622; visitors in driver's seat

ಶಿಖರ್‌ ಧವನ್‌ 35, ಕೆ.ಎಲ್‌.ರಾಹುಲ್‌ 57, ಚೇತೇಶ್ವರ್ ಪೂಜಾರ 133, ವಿರಾಟ್ ಕೊಹ್ಲಿ 13, ಅಜಿಂಕ್ಯ ರಹಾನೆ 132, ಆರ್‌. ಅಶ್ವಿನ್‌ 54, ವೃದ್ಧಿಮಾನ್‌ ಸಹಾ 67, ಹಾರ್ದಿಕ್‌ ಪಾಂಡ್ಯ 20, ಮೊಹಮ್ಮದ್‌ ಶಮಿ 19, ಉಮೇಶ್‌ ಯಾದವ್‌ ನಾಟೌಟ್ 8. ರವೀಂದ್ರ ಜಡೇಜ 70 ರನ್ ಗಳಿಸಿ ಅಜೇಯರಾಗಿ ಉಳಿದರು.

ಮೊದಲ ಇನಿಂಗ್ಸ್‌ ನ ಬ್ಯಾಟಿಂಗ್ ಆರಂಭಿಸಿರುವ ಶ್ರೀಲಂಕಾ 2 ವಿಕೆಟ್‌ ಕಳೆದುಕೊಂಡು 50 ರನ್‌ ಗಳಿಸಿ ಸಂಕಷ್ಟಕ್ಕೆ ಸಿಲುಕಿದೆ.

ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ 344/3 ಸ್ಕೋರ್ ಮಾಡಿದ್ದ ಭಾರತ, ಎರಡನೇ ದಿನ ಲಾಭ ಪಡೆಯುವಲ್ಲಿ ವಿಫಲವಾಯಿತು. ಪೂಜಾರಾ ಅವರು ತಮ್ಮ 50ನೇ ಟೆಸ್ಟ್ ಪಂದ್ಯದಲ್ಲಿ 13ನೇ ಶತಕ ಬಾರಿಸಿ 133 ರನ್ ಗಳಿಸಿ ಔಟಾದರು. ಅಜಿಂಕ್ಯ ರಹಾನೆ ಅವರು 132ರನ್ ಗಳಿಸಿ ಔಟಾಗಿದ್ದಾರೆ.

ಎರಡನೇ ದಿನದ ಭೋಜನ ವಿರಾಮದ ವೇಳೆಗೆ ಭಾರತದ ಸ್ಕೋರ್ 120 ಓವರ್ ಗಳಲ್ಲಿ 442/5 ಆಗಿದೆ. ಅಶ್ವಿನ್ ಔಟಾಗದೆ 47 ಹಾಗೂ ವೃದ್ಧಿಮಾನ್ ಸಹಾ 17 ರನ್ ಗಳಿಸಿ ಆಡುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Sri Lanka found themselves in a tight spot at stumps on second day of the second Test match against India here on Friday (August 4).The hosts were 50/2 in 20 overs and trailed the visiting team's first innings score of 622/9 by 572 runs.
Please Wait while comments are loading...