2ನೇ ಟೆಸ್ಟ್ ː ರಾಹುಲ್, ಕೊಹ್ಲಿ ಔಟ್, ಪೂಜಾರಾ ಅರ್ಧಶತಕ

Posted By:
Subscribe to Oneindia Kannada

ಕೊಲಂಬೋ, ಆಗಸ್ತ್ 03: ಶ್ರೀಲಂಕಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ತನ್ನ ಮೊದಲ ಟೆಸ್ಟ್ ಪಂದ್ಯವನ್ನು ಗಾಲೆಯಲ್ಲಿ ಸುಲಭವಾಗಿ ಗೆದ್ದುಕೊಂಡಿದೆ. ಸಿಂಹಳೀಸ್ ಸ್ಫೋರ್ಟ್ಸ್ ಕ್ಲಬ್ ಮೈದಾನದಲ್ಲಿ ಆಗಸ್ಟ್ 3ರಿಂದ ಆರಂಭವಾಗಿರುವ ಎರಡನೇ ಟೆಸ್ಟ್ ಪಂದ್ಯವನ್ನು ಗೆಲ್ಲುವ ಉತ್ಸಾಹದಲ್ಲಿದೆ.

ಭಾರತದಿಂದ ಶ್ರೀಲಂಕಾ ಪ್ರವಾಸ ಪರಿಷ್ಕೃತ ವೇಳಾಪಟ್ಟಿ

* ಭೋಜನವಿರಾಮದ ನಂತರ 57ರನ್ ಗಳಿಸಿದ್ದ ರಾಹುಲ್ ಹಾಗೂ ನಾಯಕ ಕೊಹ್ಲಿ 13ರನ್ ಗಳಿಸಿ ಔಟಾಗಿದ್ದಾರೆ.
* ಚೇತೇಶ್ವರ್ ಪೂಜಾರಾ 67 ಔಟಾಗದೆ ಮತ್ತೊಂದು ಅರ್ಧಶತಕ ಗಳಿಸಿದ್ದು, 50 ಓವರ್ ಗಳಲ್ಲಿ 199/3.
ಭೋಜನ ವಿರಾಮದ ವೇಳೆ:

* ಶಿಖರ್ ಧವನ್ 35ರನ್ (37 ಎಸೆತಗಳು, 5‍X4, 1X6) ಗಳಿಸಿ ಇನ್ನಿಂಗ್ಸ್ ನ 10ನೇ ಓವರ್ ನಲ್ಲಿ ಪೆರೆರಾಗೆ ಎಲ್ ಬಿಯಾಗಿ ಔಟ್.
* ಲೋಕೇಶ್ ರಾಹುಲ್ 73 ಎಸೆತಗಳಲ್ಲಿ 52ರನ್ ಅಜೇಯ(7 ಬೌಂಡರಿ)
* ಚೇತೇಶ್ವರ್ ಪೂಜಾರಾ 14ರನ್.

ಟಾಸ್ ಗೆದ್ದ ನಾಯಕ ವಿರಾಟ್ ಕೊಹ್ಲಿ ಅವರು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, ಭಾರತ 56 ರನ್ ಆಗುವಷ್ಟರಲ್ಲೇ ಆರಂಭಿಕ ಆಟಗಾರ ಶಿಖರ್ ಧವನ್ ಅವರನ್ನು ಕಳೆದುಕೊಂಡಿದೆ. ಕೆಎಲ್ ರಾಹುಲ್ ಅವರು ಐದಾರು ತಿಂಗಳುಗಳ ಬಳಿಕ ಮತ್ತೊಮ್ಮೆ ಟೀಂ ಇಂಡಿಯಾ ಪರ ಬ್ಯಾಟಿಂಗ್ ಆರಂಭಿಸಿದ್ದಾರೆ.

India vs Sri Lanka Live Score, 2nd Test, Day 1: Shikhar Dhawan departs for 35; India 56/1

ಶ್ರೀಲಂಕಾ ತಂಡದಲ್ಲಿ ಮೂರು ಬದಲಾವಣೆ ಮಾಡಲಾಗಿದ್ದು, ನಾಯಕ ದಿನೇಶ್ ಚಂಡಿಮಾಲ್, ಧನಂಜಯ ಡಿಸಿಲ್ವ ಹಾಗೂ ಮಲಿಂದಾ ಪುಷ್ಪಕುಮಾರ ಅವರು ಕಣಕ್ಕಿಳಿದಿದ್ದರೆ, ದನುಷ್ಕಾ ಗುಣತಿಲಕ, ಲಹಿರು ಕುಮಾರ, ಅಸೆಲ ಗುಣರತ್ನೆ ತಂಡದಿಂದ ಹೊರಗುಳಿದಿದ್ದಾರೆ.

ಟೆಸ್ಟ್ ಸರಣಿಗೆ ಭಾರತ ತಂಡ

India vs West Indies Match 3 Preview

2015ರಲ್ಲಿ ಇಲ್ಲಿ ಆಡಿದ್ದಾಗ ಶ್ರೀಲಂಕಾ ವಿರುದ್ಧ ಭಾರತ 117ರನ್ ಗಳ ಜಯ ದಾಖಲಿಸಿತ್ತು.ಅಂದು ಚೇತೇಶ್ವರ್ ಪೂಜಾರಾ ಹಾಗೂ ಇಶಾಂತ್ ಶರ್ಮ ಉತ್ತಮ ಪ್ರದರ್ಶನ ನೀಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India skipper Virat Kohli won the toss and elected to bat against Sri Lanka in the second Test here on Thursday (August 3).
Please Wait while comments are loading...