ಗಾಲೆ ಟೆಸ್ಟ್: 3ನೇ ದಿನ, ಶ್ರೀಲಂಕಾ ಆಲೌಟ್, ಮುನ್ನಡೆ ಸಾಧಿಸಿದ ಭಾರತ

Posted By:
Subscribe to Oneindia Kannada

ಗಾಲೆ (ಶ್ರೀಲಂಕಾ), ಜುಲೈ 28 : ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ಮೇಲುಗೈ ಸಾಧಿಸಿದೆ.

2ನೇ ದಿನದಾಟ ಅಂತ್ಯː ಲಂಕಾ ಮೇಲೆ ಹಿಡಿತ ಸಾಧಿಸಿದ ಭಾರತ

ಗಾಲೆಯಲ್ಲಿ ನಡೆಯುತ್ತಿರುವ ಪ್ರಥಮ ಟೆಸ್ಟ್ ನ 3ನೇ ದಿನವಾದ ಇಂದು (ಶುಕ್ರವಾರ) ಶ್ರೀಲಂಕಾ 291 ರನ್ ಗಳಿಗೆ ಸರ್ವ ಪತನ ಕಂಡಿದೆ. ಈ ಮೂಲಕ ಭಾರತ 309 ರನ್ ಗಳ ಮುನ್ನಡೆ ಸಾಧಿಸಿದೆ.

India vs Sri Lanka Live Score, 1st Test, Day 3: Hosts all out for 291; visitors take 309-run lead

ಭಾರತ ಪರ ಶಮಿ 2, ಜಡೇಜಾ 3, ಉಮೇಶ್ ಯಾದವ್, ಅಶ್ವಿನ್, ಪಾಂಡ್ಯ ತಲಾ ಒಂದು ವಿಕೆಟ್ ಪಡೆದರು. 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಮ್ಯಾಥ್ಯೂಸ್ 83ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ಬಳಿಕ ಬಂದ ಶ್ರೀಲಂಕಾ ಬ್ಯಾಟ್ಸ್ ಮನ್ ಗಳು ಜಡ್ಡು ದಾಳಿಗೆ ಪೆವಿಲಿಯನ್ ಪರೇಡ್ ನಡೆಸಿದರು. ಪರೇರಾ 92 ರನ್ ಗಳಿಸಿ ಅಜೇಯರಾಗಿ ಉಳಿದರು.

ನಿನ್ನೆ ಗುರವಾರ ಎರಡನೇ ದಿನ ಭಾರತ ತನ್ನ ಪ್ರಥಮ ಇನ್ನಿಂಗ್ಸ್ ನಲ್ಲಿ 600 ರನ್ ಗಳನ್ನು ಪೇರಿಸಿತ್ತು. ಬಳಿಕ ಬ್ಯಾಟಿಂಗ್ ಆರಂಭಿಸಿದ್ದ ಶ್ರೀಲಂಕಾ 2ನೇ ದಿನದ ಅಂತ್ಯಕ್ಕೆ 5 ವಿಕೆಟ್ ಗಳನ್ನು ಕಳೆದುಕೊಂಡು 154 ರನ್ ಗಳಿಸಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Sri Lanka would be pinning their hopes on former captain Angelo Mathews and Dilruwan Parera on Friday (July 28) to challenge Indian bowlers on third day of the opening Test at Galle.
Please Wait while comments are loading...