2ನೇ ದಿನದಾಟ ಅಂತ್ಯː ಲಂಕಾ ಮೇಲೆ ಹಿಡಿತ ಸಾಧಿಸಿದ ಭಾರತ

Posted By:
Subscribe to Oneindia Kannada

ಗಾಲೆ, ಜುಲೈ 27 : ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ 2ನೇ ದಿನದಾಟದಲ್ಲಿ (ಗುರುವಾರ) ಭಾರತ 600 ರನ್ ಗಳಿಗೆ ಸರ್ವಪತನ ಕಂಡಿದೆ. ಬಳಿಕ ಬ್ಯಾಟಿಂಗ್ ಆರಂಭಿಸಿದ ಶ್ರೀಲಂಕಾ ಎರಡನೇ ದಿನದಾಟದ ಅಂತ್ಯಕ್ಕೆ 44 ಓವರ್ ಗಳಲ್ಲಿ ಕೇವಲ 154 ರನ್ ಗಳಿಗೆ 5 ವಿಕೆಟ್ ಗಳನ್ನು ಕಳೆದುಕೊಂಡಿದೆ. ಈ ಮೂಲಕ ಪಂದ್ಯದ ಮೇಲೆ ಹಿಡಿತ ಕಳೆದುಕೊಳ್ಳುತ್ತಿದೆ.

ಮೊದಲ ದಿನದಾಟದ ಅಂತ್ಯಕ್ಕೆ (ಬುಧವಾರ) ಭಾರತ 3 ವಿಕೆಟ್ ನಷ್ಟಕ್ಕೆ 399 ರನ್ ಗಳಿಸಿ 2ನೇ ದಿನದಾಟಕ್ಕೆ ಆಟ ಕಾಯ್ದುಕೊಂಡಿತ್ತು. 2ನೇ ದಿನ ಇಂದು ಬ್ಯಾಟಿಂಗ್ ಆರಂಭಿಸಿದ ಭಾರತ 600 ರನ್ ಗಳಿಗೆ ಆಲೌಟ್ ಆಯಿತು.

ಹಾರ್ದಿಕ್ ಪಾಂಡ್ಯ ಪದಾರ್ಪಣೆ ಪಂದ್ಯದಲ್ಲೇ ಅರ್ಥಶತಕ ಸಿಡಿಸಿದರು. ಕೇವಲ 49 ಎಸೆತಗಳನ್ನು ಎದುರಿಸಿದ ಪಾಂಡ್ಯ 5 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್ ಗಳ ನೆರವಿನಿಂದ ಅರ್ಧಶತಕ ಪೂರೈಸಿ ವಿಕೆಟ್ ಒಪ್ಪಿಸಿದರು.

ಗಾಲೆ ಟೆಸ್ಟ್: ಭಾರತ ದಿನದಾಟ ಅಂತ್ಯಕ್ಕೆ 399/3 ರನ್

1st Test, Day 2: India bowlers shine after batsman put up dominant show against Sri Lanka

ಶ್ರೀಲಂಕಾ ಪರ ನ್ ಪ್ರದೀಪ್ 6 ವಿಕೆಟ್ ಕಬಳಿಸಿ ಯಶಸ್ವೀ ಬೌಲರ್ ಎನಿಸಿದರು. ಬಳಿಕ ಬ್ಯಾಟಿಂಗ್ ಆರಂಭಿಸಿದ ಶ್ರೀಲಂಕಾ ಆರಂಭದಲ್ಲಿ ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ದಿಮುತ್ ಕರುಣರತ್ನೆ 2, ಉಪುಲ್ ತರಂಗಾ 64, ಧನುಷ್ಕಾ ಗುಣತಿಲಕ 16, ಕುಶಲ್ ಮೆಂಡಿಸ್ 0, ನಿರೋಷನ್ ಡಿಕ್ವೆಲ್ಲಾ 8 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಮ್ಯಾಥ್ಯೂಸ್ 54, ಪೆರೇರಾ 4 ರನ್ ಗಳಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಬಾರತ ಪರ ಶಮಿ 2, ಉಮೇಶ್ ಯಾದವ್ ಹಾಗೂ ಅಶ್ವಿನ್ ತಲಾ ಒಂದು ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು.

ಸ್ಕೋರ್ ವಿವರ:
ಭಾರತ ಮೊದಲ ಇನ್ನಿಂಗ್ಸ್ 600: ಧವನ್ 190, ಪೂಜಾರ 154, ಅಜಿಂಕ್ಯಾ ರಹಾನೆ 57, ಅಶ್ವಿನ್ 47, ಪಾಂಡ್ಯ 50. ಪ್ರದೀಪ್ 132ಕ್ಕೆ6
ಶ್ರೀಲಂಕಾ ಮೊದಲ ಇನ್ನಿಂಗ್ಸ್ 5ಕ್ಕೆ 154: ದಿಮುತ್ ಕರುಣರತ್ನೆ 2, ಉಪುಲ್ ತರಂಗಾ 64, ಧನುಷ್ಕಾ ಗುಣತಿಲಕ 16, ಕುಶಲ್ ಮೆಂಡಿಸ್ 0, ನಿರೋಷನ್ ಡಿಕ್ವೆಲ್ಲಾ 8, ಮ್ಯಾಥ್ಯೂಸ್ 54 ನಾಟೌಟ್, ಪೆರೇರಾ 4 ನಾಟೌಟ್. ಶಮಿ 30ಕ್ಕೆ 2.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Debutant Hardik Pandya's maiden fifty on debut and tail-enders' exploits ensured India post mammoth 600 in their first innings against Sri Lanka on second day of the first Test here on Thursday (July 27).
Please Wait while comments are loading...