ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎರಡು ವಿಶ್ವದಾಖಲೆಯ ಹೊಸ್ತಿಲಲ್ಲಿ ಮಹೇಂದ್ರ ಸಿಂಗ್ ಧೋನಿ

ಎರಡು ವಿಶ್ವ ದಾಖಲೆ ಹೊಸೆಯುವ ಭರದಲ್ಲಿ ಮಹೇಂದ್ರ ಸಿಂಗ್ ಧೋನಿ. ಹಾಲಿ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ದಾಖಲೆಗಳಾಗುವ ಸಾಧ್ಯತೆ.

ಕೊಲಂಬೋ, ಆಗಸ್ಟ್ 31: ಹಾಲಿ ಶ್ರೀಲಂಕಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ತಂಡ, ಗುರುವಾರ (ಆಗಸ್ಟ್ 31) ಲಂಕನ್ನರ ವಿರುದ್ಧ ನಾಲ್ಕನೇ ಪಂದ್ಯವನ್ನಾಡಲಿದೆ.

ಐದು ಪಂದ್ಯಗಳ ಈ ಸರಣಿಯಲ್ಲಿ ಮೊದಲ ಮೂರು ಪಂದ್ಯಗಳನ್ನು ಈಗಾಗಲೇ ಗೆದ್ದಿರುವ ಕೊಹ್ಲಿ ಪಡೆ, ಈಗ ನಾಲ್ಕನೇ ಪಂದ್ಯದಲ್ಲೂ ಗೆಲ್ಲುವ ಕನಸು ಕಾಣುತ್ತಿದೆ.

ಪಂದ್ಯದ ನಡುವೆ ಮೈದಾನದಲ್ಲೇ ಮಲಗಿದ ಧೋನಿ ವಿಡಿಯೋ ವೈರಲ್!ಪಂದ್ಯದ ನಡುವೆ ಮೈದಾನದಲ್ಲೇ ಮಲಗಿದ ಧೋನಿ ವಿಡಿಯೋ ವೈರಲ್!

ಆದರೆ, ವಿಷಯ ಇದಲ್ಲ. ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ನಾಲ್ಕನೇ ಪಂದ್ಯದಲ್ಲಿ ಎರಡು ವಿಶ್ವದಾಖಲೆ ಮಾಡುವ ಸಾಧ್ಯತೆಗಳಿದ್ದು, ಇದೇ ಕಾರಣಕ್ಕಾಗಿ ಅವರು ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದಾರೆ.

ಇದಲ್ಲದೆ, ಅವರ ವೃತ್ತಿಜೀವನದಲ್ಲಿ ಹೊಸತೊಂದು ಮೈಲಿಗಲ್ಲನ್ನೂ ಸ್ಥಾಪಿಸುವತ್ತ ಧೋನಿ ಸಜ್ಜಾಗಿದ್ದಾರೆ. ಆ ದಾಖಲೆಗಳು ಯಾವುವು, ಆ ಮೈಲಿಗಲ್ಲು ಯಾವುದು ಎಂಬಿತ್ಯಾದಿ ಮಾಹಿತಿಗಳು ಇಲ್ಲಿ ನಿಮಗಾಗಿ.

ದನುಷ್ಕಾ ವಿಕೆಟ್ ಉರುಳಿಸಿದ್ದರಿಂದ ಸಾಧನೆ

ದನುಷ್ಕಾ ವಿಕೆಟ್ ಉರುಳಿಸಿದ್ದರಿಂದ ಸಾಧನೆ

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೂ ಮುನ್ನ ಧೋನಿ ಅವರು, 97 ಸ್ಟಂಪಿಂಗ್ ಗಳನ್ನು ಹೊಂದಿದ್ದರು. ಆದರೆ, ಹಾಲಿ ಏಕದಿನ ಸರಣಿಯ 2ನೇ ಪಂದ್ಯದಲ್ಲಿ ದನುಷ್ಕಾ ಗುಣತಿಲಕ ಅವರನ್ನು ಸ್ಟಂಪಿಂಗ್ ಮಾಡುವ ಮೂಲಕ ಈವರೆಗೆ 98 ಸ್ಟಂಪಿಂಗ್ಸ್ ಗಳನ್ನು ಮಾಡುವ ಸಾಧನೆ ಮಾಡಿ, ಲಂಕಾದ ವಿಕೆಟ್ ಕೀಪರ್ ಕುಮಾರ ಸಂಗಕ್ಕಾರ ಅವರ ಸಾಧನೆಯನ್ನು ಸರಿಗಟ್ಟಿದ್ದರು.

ವಿಶ್ವ ದಾಖಲೆಗೆ ಇನ್ನೊಂದೇ ಸ್ಟಂಪಿಂಗ್ ಸಾಕು!

ವಿಶ್ವ ದಾಖಲೆಗೆ ಇನ್ನೊಂದೇ ಸ್ಟಂಪಿಂಗ್ ಸಾಕು!

ಇದೀಗ, ಕುಮಾರ ಸಂಗಕ್ಕಾರ ಅವರ ಅತಿ ಹೆಚ್ಚು ಸ್ಟಂಪಿಂಗ್ ದಾಖಲೆ ಮುರಿಯಲು ಸಜ್ಜಾಗಿದ್ದಾರೆ ಧೋನಿ. ಹಾಲಿ ಏಕದಿನ ಸರಣಿಯಲ್ಲಿ ಇನ್ನೂ ಎರಡು ಪಂದ್ಯಗಳು ಬಾಕಿಯಿವೆ. ಈ ಎರಡು ಪಂದ್ಯಗಳಲ್ಲಿ ಒಂದು ಸ್ಟಂಪ್ ಮಾಡಿದರೂ ಸಾಕು ಧೋನಿ, ವಿಶ್ವದಲ್ಲಿ ಅತಿ ಹೆಚ್ಚು ಸ್ಟಂಪಿಂಗ್ ಮಾಡಿದ ದಾಖಲೆಗೆ ಪಾತ್ರರಾಗಲಿದ್ದಾರೆ.

ಈಗಾಗಲೇ 72 ಅಜೇಯ ಇನಿಂಗ್ಸ್ ಗಳು

ಈಗಾಗಲೇ 72 ಅಜೇಯ ಇನಿಂಗ್ಸ್ ಗಳು

ಇನ್ನು, ಏಕದಿನ ಮಾದರಿಯಲ್ಲಿ ಧೋನಿ ಈವರೆಗೆ 72 ಬಾರಿ ಅಜೇಯರಾಗುಳಿದ ಲೆಕ್ಕವಿದೆ. ಈ ಲೆಕ್ಕಕ್ಕೆ ಇನ್ನೊಂದು ಅಜೇಯ ಇನಿಂಗ್ಸ್ ಸೇರಿದರೆ ಸಾಕು ಅದು ಏಕದಿನ ಮಾದರಿಯಲ್ಲಿ ಅತಿ ಹೆಚ್ಚು ಅಜೇಯ ಇನಿಂಗ್ಸ್ ಗಳನ್ನು ಆಡಿರುವ ಬ್ಯಾಟ್ಸ್ ಮನ್ ಎಂಬ ಹೆಗ್ಗಳಿಕೆ ಧೋನಿಯವರನ್ನು ಅಲಂಕರಿಸಲಿದೆ.

ಸಾಧನೆಯ ಮೈಲಿಗಲ್ಲಿಗೆ ಇನ್ನೊಂದು ಪಂದ್ಯ ಸಾಕು

ಸಾಧನೆಯ ಮೈಲಿಗಲ್ಲಿಗೆ ಇನ್ನೊಂದು ಪಂದ್ಯ ಸಾಕು

ಅಂದಹಾಗೆ, ಧೋನಿಯವರಿಗೆ ಇದು 300ನೇ ಏಕದಿನ ಪಂದ್ಯ. ಈವರೆಗೆ 299 ಏಕದಿನ ಪಂದ್ಯಗಳನ್ನಾಡಿರುವ ಅವರು, 9608 ರನ್ ಕಲೆಹಾಕಿದ್ದಾರೆ.

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X